ನವದೆಹಲಿ: ದೇಶದಲ್ಲಿ ಯುವತಿಯರ ಕನಿಷ್ಠ ಮದುವೆ ವಯಸ್ಸನ್ನು 18ರಿಂದ 21ಕ್ಕೆ ಹೆಚ್ಚಿಸುವ ಬಾಲ್ಯ ವಿವಾಹ ನಿಯಂತ್ರಣ ತಿದ್ದುಪಡಿ ಮಸೂದೆ – 2021ವನ್ನು ವಿಪಕ್ಷಗಳ ತೀವ್ರ ವಿರೋಧದ ನಡುವೆ ಲೋಕಸಭೆಯಲ್ಲಿ ಸರ್ಕಾರ ಮಂಡಿಸಿದೆ.
ಮಸೂದೆ ಮಂಡಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷದ ನಂತರ ತುಂಬಾ ತಡವಾಗಿ ಯುವಕ-ಯುವತಿಯರಿಗೆ ಸಮಾನ ಹಕ್ಕು ಕಲ್ಪಿಸುತ್ತಿದ್ದೇವೆ. ಈ ತಿದ್ದುಪಡಿ ಮಸೂದೆಯಿಂದ ಇನ್ನು ಮುಂದೆ ಯುವತಿಯರ ಕನಿಷ್ಠ ಮದುವೆ ವಯಸ್ಸು 21ಕ್ಕೆ ಹೆಚ್ಚಿಸಲಾಗುತ್ತಿದೆ ಎಂದರು. ಇದನ್ನೂ ಓದಿ: 18ನೇ ವಯಸ್ಸಿಗೆ ಪ್ರಧಾನಿಯನ್ನೇ ಆಯ್ಕೆ ಮಾಡುವ ಹೆಣ್ಣಿಗೆ ಬಾಳ ಸಂಗಾತಿ ಹೊಂದುವ ಹಕ್ಕು ಯಾಕಿಲ್ಲ: ಓವೈಸಿ ಪ್ರಶ್ನೆ
Advertisement
Age of marriage should be uniformly applicable across all religions/castes/creeds overriding any custom/law discriminating against women. We’re 75 years late in providing equal rights to women.
My comments while introducing the Prohibition of Child Marriage(Amendment) Bill,2021. pic.twitter.com/IlJE0pzcRX
— Smriti Z Irani (@smritiirani) December 21, 2021
Advertisement
ಯಾರನ್ನೂ ಸಂಪರ್ಕಿಸದೇ ಈ ಮಸೂದೆಯನ್ನು ತರಲಾಗುತ್ತಿದೆ ಈ ಮಸೂದೆಯನ್ನು ಸ್ಟ್ಯಾಡಿಂಗ್ ಕಮಿಟಿ ಇಲ್ಲವೇ ಸೆಲೆಕ್ಟ್ ಕಮಿಟಿಗೆ ಕಳಿಸಬೇಕು ಎಂದು ಡಿಎಂಕೆಯ ಕನಿಮೋಳಿ ಒತ್ತಾಯಿಸಿದರು.
Advertisement
18 ವರ್ಷದ ಯುವತಿ ಪ್ರಧಾನಿಯನ್ನು ಆಯ್ಕೆ ಮಾಡುತ್ತಿರುವಾಗ, ಸಹಜೀವನ ನಡೆಸುತ್ತಿರುವಾಗ ಅವರ ವಿವಾಹ ಹಕ್ಕನ್ನು ಏಕೆ ಕಸಿಯಲಾಗುತ್ತಿದೆ ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದರು. ವಿಪಕ್ಷಗಳ ತೀವ್ರ ಆಕ್ರೋಶದ ಬಳಿಕ ಮತ್ತಷ್ಟು ಚರ್ಚೆ ನಡೆಸಲು ಸಂಸದೀಯ ಸ್ಥಾಯಿ ಸಮಿತಿಗೆ ಈ ಮಸೂದೆ ಕಳುಹಿಸಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದನ್ನೂ ಓದಿ: ಮದುವೆ ವಯಸ್ಸು ಹೆಚ್ಚಿಸಿರೋದಕ್ಕೆ ಮಹಿಳೆಯರೇ ಖುಷಿಯಾಗಿದ್ದಾರೆ, ಆಗದವರು ವಿರೋಧಿಸ್ತಿದ್ದಾರೆ: ಮೋದಿ