ತುಮಕೂರು: ಡಿಸೆಂಬರ್ 9 ರಂದು ನಾಪತ್ತೆಯಾಗಿದ್ದ ತುಮಕೂರು ವಿವಿ ವಿಜ್ಞಾನ ಕಾಲೇಜಿನ ಪ್ರೋಫೆಸರ್ ಈಶ್ವರ್ ಶವವಾಗಿ ಪತ್ತೆಯಾಗಿದ್ದಾರೆ.
ಕೊಳೆತ ಸ್ಥಿತಿಯಲ್ಲಿ ತುಮಕೂರು ನಗರದ ಹೆಚ್.ಎಮ್.ಟಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾದ್ದಾರೆ. ಕಳೆದ ಡಿಸೆಂಬರ್ 9 ರಂದು ವಾಯುವಿಹಾರಕ್ಕೆ ಹೋಗಿ ಬರುತ್ತೀನಿ ಎಂದು ಹೋಗಿದ್ದು, ಮತ್ತೆ ವಾಪಸ್ ಬಂದಿರಲಿಲ್ಲ. ಇವರು ವಿವಿಯಲ್ಲಿ ವಿಜ್ಞಾನ ವಿಭಾಗದ ಪ್ರಾಣಿಶಾಸ್ತ್ರ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈಶ್ವರ್ ನಾಪತ್ತೆ ಪ್ರಕರಣದಲ್ಲಿ ಹಲವು ಅನುಮಾನಗಳಿವೆ.
Advertisement
Advertisement
ಈಶ್ವರ್ ಈ ಹಿಂದೆ ವಿಜ್ಞಾನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದರು. ಆಗ ಇನ್ನೂ ಇವರಿಗೆ ಮಾನ್ಯತೆ ಸಿಕ್ಕಿಲ್ಲ ಎಂದು ಹುದ್ದೆಯಿಂದ ಕೆಳಗಿಳಿಸಿದ್ದರು. ಬಳಿಕ ಅಲ್ಲಿಂದ ಸಹೋದ್ಯೋಗಿಗಳು ಸುಖಾಸುಮ್ಮನೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಈಶ್ವರ್ಗೆ 57 ವರ್ಷ ವಯಸ್ಸಾದ ಕಾರಣ ಕಣ್ಣಿನ ಸಮಸ್ಯೆ ಇತ್ತು. ಈ ಬಗ್ಗೆ ಆಸ್ಪತ್ರೆಗೂ ತೋರಿಸಿಕೊಂಡಿದ್ದರು. ಇಷ್ಟಾದರೂ ನೀವು ಕಾಲೇಜಿಗೆ ಬರಬೇಡಿ ನಿಮ್ಮಿಂದ ತೊಂದರೆ ಆಗುತ್ತಿದೆ ಅಂತ ಸಹೋದ್ಯೋಗಿಗಳು ಕಿರುಕುಳ ನೀಡುತ್ತಿದ್ದರಂತೆ ಈ ಬಗ್ಗೆ ಸ್ವತಃ ಈಶ್ವರ್ ಅವರೇ ತಮ್ಮ ಮನೆಯಲ್ಲಿ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.
Advertisement
ಈಶ್ವರ್ ಸಾವಿಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಮನೆಯವರು ಕಳೆದ ಒಂದು ತಿಂಗಳಿನಿಂದ ಹುಡುಕಲು ಸಾಕಷ್ಟು ಪ್ರಯತ್ನಿಸಿದ್ದರೂ ಪತ್ತೆಯಾಗಿರಲಿಲ್ಲ. ಆದರೆ ಗುರುವಾರ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Advertisement
ಈ ಬಗ್ಗೆ ಮಗ ಪವನ್, ನಮ್ಮ ತಂದೆ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ. ನಮಗೆ ಅಪ್ಪನ ಸಾವಿನ ಬಗ್ಗೆ ಹಲವು ಅನುಮಾನಗಳಿವೆ. ಅವರು ಸದಾ ನಮಗೆ ಧೈರ್ಯ ತುಂಬುತ್ತಿದ್ದರು. ಆದರೆ ಇಂದು ಅವರೇ ಈ ರೀತಿ ಮಾಡಿಕೊಂಡಿದ್ದಾರೆ ಅಂದರೆ ನಂಬಲು ಸಾಧ್ಯವಿಲ್ಲ ಅಂತ ಹೇಳಿದ್ದಾನೆ.
ಈ ಕುರಿತು ಹೊಸ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv