ಮೈಸೂರು: ನಾನು ಯಾವ ಪಕ್ಷಕ್ಕೂ ಮತ ಹಾಕಿ ಅಂದಿಲ್ಲ. ನಾನು ಸೆಕ್ಯೂಲರ್ ಪಕ್ಷಕ್ಕೆ ಮತ ಹಾಕಿ ಅಂದಿರೋದು. ನಾನು ಯಾವ ಪಕ್ಷದ ಪರ ಇಲ್ಲ ಅಂತ ಸಮ್ಮೇಳನಾಧ್ಯಕ್ಷ ಪ್ರೊ. ಚಂಪಾ ಹೇಳಿದ್ದಾರೆ.
83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ವೈಭವದ ತೆರೆ ಬಿದ್ದಿದ್ದು, ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಚಂಪಾ, ಸೆಕ್ಯುಲರ್ ಪದ ಕೇಳಿದ್ರೆ ಅವರು ಚಿಕ್ಕ ಮಕ್ಕಳಂತೆ ಉಚ್ಚೆ ಊಯ್ದುಕೊಳ್ಳುತ್ತಾರೆ. ಕನ್ನಡ, ನೆಲ, ಜಲದ ವಿಚಾರವಾಗಿ ಕೆಲಸ ಮಾಡುವ ಪ್ರಾದೇಶಿಕ ಜಾತ್ಯಾತೀತ ಪಕ್ಷ ಬೇಕು. ಜಾತ್ಯಾತೀತ ಅನ್ನೋ ಪದವೇ ಸಚಿವ ಅನಂತಕುಮಾರ್ ಅವರಿಗೆ ಅರ್ಥವಾಗಿಲ್ಲ. ಅವರನ್ನು ರಿಪೇರಿ ಮಾಡೋದು ನಮ್ಮ ಕೆಲಸವಲ್ಲ. ಅವರನ್ನು ರಿಪೇರಿ ಮಾಡುವ ಪ್ರಯತ್ನವೂ ವ್ಯರ್ಥ. ಕನ್ನಡದ ಭಾಷೆ, ನೆಲ, ಜಲದ ವಿಚಾರದಲ್ಲಿ ಇದುವರೆಗೂ ಪಕ್ಷಾತೀತವಾದ ಒಂದೇ ಒಂದು ಕೆಲಸ ಆಗಿಲ್ಲ ಎಂದು ಅನಂತ ಕುಮಾರ್ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ರು.
Advertisement
Advertisement
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವ ಅನಂತಕುಮಾರ್ ಅವರ ಭಾಷಣದಲ್ಲಿ ಪವಿತ್ರ ಗಂಗಾ ಜಲವೂ ಇತ್ತು. ಮಲೀನ ಗಟಾರದ ನೀರೂ ಇತ್ತು. ಒಳ್ಳೆಯದನ್ನು ನಾನು ಸ್ವೀಕರಿಸಿದ್ದೇನೆ. ಕೆಟ್ಟದ್ದನ್ನು ಬಿಟ್ಟುಬಿಡೋಣ. ನಾನು ಹಂಸಕ್ಷೀರ ನ್ಯಾಯದಂತೆ ಒಳ್ಳೆಯದನ್ನು ಮಾತ್ರ ಸ್ವೀಕರಿಸುತ್ತೇನೆ. ಅವರ ಭಾಷಣದ ಶೇ.50ರಷ್ಟನ್ನು ನಾನು ಸ್ವೀಕರಿಸಿದ್ದೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಉತ್ತರ ಕರ್ನಾಟಕದವರು. ಅವರ ತಾಯಿ ಉತ್ತಮ ವ್ಯಕ್ತಿ. ಅವರ ಪರಂಪರೆಯನ್ನು ಅನಂತ್ ಕುಮಾರ್ ಮುಂದುವರಿಸಿದ್ದಾರೆ ಅಂದ್ರು.
Advertisement
ಇನ್ನು ಅನಂತ್ ಕುಮಾರ್ ಹೋಗುವಾಗ ಚಂಪಾ ನಮ್ ಮೇಷ್ಟ್ರು ಅಂದ್ರು. ಅನಂತ್ ಕುಮಾರ್ ನನ್ನ ವಿದ್ಯಾರ್ಥಿ ಆಗಿರಬಹುದು. ಅದನ್ನ ನೆನಪಿಟ್ಟಿದ್ದಕ್ಕೆ ನಾನು ಋಣಿ. ಕನ್ನಡದ ಬಗ್ಗೆ ಕಳಕಳಿಯಿಂದ ಮಾತಾಡಿದ್ದು ಖುಷಿ ಕೊಡ್ತು. ಇದು ಏಕಮುಖ ವೇದಿಕೆ ಅಲ್ಲ. ಆದ್ರೆ ಕೆಲವರು ತಾವು ಏನು ಹೇಳಬೇಕೋ ಹೇಳಿ, ಬೇರೆಯವರು ಏನು ಹೇಳ್ತಾರೆ ಎಂಬುದನ್ನ ಕೇಳುವ ತಾಳ್ಮೆ ಇರದೆ ಹೋಗ್ತಾರೆ. ಅನಂತ್ ಕುಮಾರ್, ಪ್ರತಾಪ್ ಹೋದ್ರೂ ಅವರ ಕಣ್ಣು, ಕಿವಿ ಇಲ್ಲೇ ಇವೆ. ನನ್ನ ಮಾತು ವಾಟ್ಸಪ್, ಫೇಸ್ ಬುಕ್, ಟಿವಿ ಮೂಲಕ ಅನಂತ್ ಕುಮಾರ್ ಕಿವಿಗೆ ಬೀಳುತ್ತೆ ಅಂತ ನೇರವಾಗಿಯೇ ಟಾಂಗ್ ನೀಡಿದ್ರು.
Advertisement
ಸಚಿವರು ಏನ್ ಹೇಳಿದ್ದರು?: ಈ ವೇದಿಕೆ ರಾಜಕೀಯ ಭಾಷಣ ಮಾಡಲು ಅಲ್ಲ. ಯಾರಿಗೆ ಮತ ಹಾಕಬೇಕು ಅನ್ನುವುದನ್ನು ಹೇಳುವುದಕ್ಕೆ ಬೇರೆ ವೇದಿಕೆಗಳಿವೆ, ಅಲ್ಲಿ ಹೇಳಿ. ಕನ್ನಡ ಸಮ್ಮೇಳನದಲ್ಲಿ ಕನ್ನಡದ ಬಗ್ಗೆ ಮಾತನಾಡಿ. ಇಡೀ ದೇಶವೇ ಸಮ್ಮೇಳವನ್ನು ನೋಡುತ್ತಿದೆ. ಹೀಗಿರುವಾಗ ಇಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾಹಿತ್ಯ ಸಮ್ಮೇಳದಲ್ಲಿ ಡೋಂಗಿತನಕ್ಕೆ ಅವಕಾಶ ಕಲ್ಪಿಸಿಕೊಟ್ಟರೆ ವೇದಿಕೆಯ ಮೌಲ್ಯ ಹಾಳಾಗುತ್ತದೆ ಎಂದು ಅನಂತ್ ಕುಮಾರ್ ನೇರವಾಗಿ ಹೇಳಿದ್ದರು.
ಕೈ ಪರ ಮತಯಾಚಿಸಿದ ಚಂಪಾಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟ ಅನಂತ್ ಕುಮಾರ್: ವಿಡಿಯೋ ನೋಡಿ https://t.co/N7wDbT9F8p#Mysuru #Kannada #KannadaSahityaSammelana #KannadaNews #AnanthKumar #ChandraShekharPatil #PratapSimha @AnanthKumar_BJP @mepratap pic.twitter.com/vIBicuyu8t
— PublicTV (@publictvnews) November 26, 2017
ಸಾಹಿತ್ಯ ಸಮ್ಮೇಳನದ ಸಮಾರೋಪದಲ್ಲಿ ಪ್ರತಾಪ್ ಸಿಂಹಗೆ ಚಂಪಾ ನೇರ ಟಾಂಗ್!https://t.co/mFCVxvtNLi#Mysur #KannadaSahityaSammelan #ChandrashekharPatil #PrathapSimha #AnanthKumar pic.twitter.com/Gj0JA0YpAI
— PublicTV (@publictvnews) November 27, 2017