ಸ್ಯಾಂಡಲ್ವುಡ್ (Sandalwood) ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಇದೀಗ ಸಿನಿಮಾ ಮತ್ತು ರಾಜಕೀಯ (Politics) ಎರಡರಲ್ಲೂ ಬ್ಯುಸಿಯಾಗಿದ್ದಾರೆ. `ಉಪಾಧ್ಯಕ್ಷ’ ಚಿತ್ರಕ್ಕೆ ನಿರ್ಮಾಣ ಮಾಡುವ ಮೂಲಕ ಉಮಾಪತಿ ಸುದ್ದಿಯಲ್ಲಿದ್ದಾರೆ. ಇದೀಗ `ಕೆಜಿಎಫ್ 2′ (KGF 2)ಸ್ಟಾರ್ ಯಶ್ (Yash) ಜೊತೆ ಸಿನಿಮಾ ಮಾಡುವುದಾಗಿ ನಿರ್ಮಾಪಕ ಉಮಾಪತಿ ಬಿಗ್ ಅಪ್‌ಡೇಟ್ ನೀಡಿದ್ದಾರೆ.
Advertisement
ಹೆಬ್ಬುಲಿ, ರಾಬರ್ಟ್, ಮದಗಜ ಅಂತಹ ಸಿನಿಮಾಗಳನ್ನ ನಿರ್ಮಾಣ ಮಾಡಿರುವ ಉಮಾಪತಿ ಅವರು ರಾಜಕೀಯಕ್ಕೆ (Politics) ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ಸಿನಿಮಾ ಜೊತೆ ಉಮಾಪತಿ ಅವರು ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಂದರ್ಶನವೊಂದರಲ್ಲಿ ಸಿನಿಮಾ, ರಾಜಕೀಯ ಹಲವು ವಿಚಾರಗಳ ಬಗ್ಗೆ ಉಮಾಪತಿ ಮಾತನಾಡಿದ್ದಾರೆ. ಇದನ್ನೂ ಓದಿ: ಆಸ್ಕರ್ ವೇದಿಕೆಯಲ್ಲಿ `ನಾಟು ನಾಟು’ ಸಾಂಗ್ ಹಾಡಲಿದ್ದಾರೆ ಎಂ.ಎಂ ಕ್ಷೀರವಾಣಿ
Advertisement
Advertisement
ನಿರ್ಮಾಪಕ ಉಮಾಪತಿ (Producer Umapathy) ಅವರು ರಾಕಿ ಭಾಯ್ ಯಶ್ ಜೊತೆ ಸಿನಿಮಾ ಮಾಡುತ್ತಾರಾ? ಯಾವಾಗ ಸಿನಿಮಾ ಮಾಡುತ್ತಾರೆ ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 100% ಸತ್ಯ. ಯಶ್ (Yash) ಅವರೇ ಕನ್ನಡ ನಿರ್ಮಾಪಕರಿಗೆ (Producer) ಪ್ರಾಮುಖ್ಯತೆ ಕೊಡುವುದಾಗಿ ತಿಳಿಸಿದ್ದರು. ಆ ಬಗ್ಗೆ ಅವರಿಗೆ ಬಹಳ ಅಭಿಮಾನವಿದೆ. ನನ್ನ ಬಗ್ಗೆ ವಿಶೇಷವಾದ ಪ್ರೀತಿಯೂ ಇದೆ. ಗೌರವವೂ ಇದೆ. ಹಾಗಾಗಿ ಖಂಡಿತವಾಗಿಯೂ ಒಟ್ಟಿಗೆ ಸಿನಿಮಾ ಮಾಡುತ್ತೇವೆ ಎಂದು ತಿಳಿಸಿದ್ದರು.
Advertisement
`ಕೆಜಿಎಫ್ 2′ ನಂತರ ಯಶ್ ಜೊತೆಗಿನ ಸಿನಿಮಾ ಅಪ್‌ಡೇಟ್ ಸಿಗದೇ ಬೇಸರದಲ್ಲಿದ್ದ ಅಭಿಮಾನಿಗಳಿಗೆ, ಉಮಾಪತಿ ಜೊತೆಗಿನ ಸಿನಿಮಾ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರಾ ಎಂಬುದರ ಬಗ್ಗೆ ಯಶ್ ಕಡೆಯಿಂದ ಅಧಿಕೃತ ಅಪ್‌ಡೇಟ್ ಸಿಗುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k