ಮುಂಬೈ: ಪ್ರಧಾನಿ ಮೋದಿ ಅವರ ಜೀವಚರಿತ್ರೆ ಆಧಾರಿತ `ಪಿಎಂ ನರೇಂದ್ರ ಮೋದಿ’ ಸಿನಿಮಾಕ್ಕೆ ವಿವೇಕ್ ಒಬೆರಾಯ್ ಅವರನ್ನು ಯಾಕೆ ಆಯ್ಕೆ ಮಾಡಲಾಯ್ತು ಎನ್ನುವ ಪ್ರಶ್ನೆಗೆ ಚಿತ್ರದ ನಿರ್ಮಾಪಕ ಸಂದೀಪ್ ಎಸ್. ಸಿಂಗ್ ಉತ್ತರಿಸಿದ್ದಾರೆ.
ಸೋಮವಾರದಂದು ಬಿಡುಗಡೆಯಾದ `ಪಿಎಂ ನರೇಂದ್ರ ಮೋದಿ’ ಸಿನಿಮಾದ ಮೊದಲ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ ವಿವೇಕ್ ಓಬೆರಾಯ್ ಸೂಕ್ತ ಅಲ್ಲ ಎಂದು ಹಲವರು ಟೀಕಿಸಿದ್ದಾರೆ. ಆದರಿಂದ ಜನರಿಗೆ ಯಾಕೆ ವಿವೇಕ್ ಅವರನ್ನೇ ಈ ಚಿತ್ರಕ್ಕೆ ಆಯ್ಕೆ ಮಾಡಲಾಯ್ತು ಎಂದು ನಿರ್ಮಾಪಕರು ತಿಳಿಸಿದ್ದಾರೆ.
Advertisement
Advertisement
ಮಂಗಳವಾರ ಖಾಸಗಿ ಚಾನೆಲ್‍ವೊಂದರ ಸಂದರ್ಶನದಲ್ಲಿ ಈ ಕುರಿತು ಮಾತನಾಡಿ, ಈ ಚಿತ್ರದಲ್ಲಿ ಏನೇನು ಇರಬೇಕು, ಯಾವ ನಟರು ಮುಖ್ಯ ಪಾತ್ರಕ್ಕೆ ಸೂಕ್ತ ಎಂದು ಸೆಟ್ ಮಾಡಲು ನನಗೆ ಮೂರು ವರ್ಷ ಬೇಕಾಯ್ತು. ಚಿತ್ರದ ಬಗ್ಗೆ ಮೊದಲು ವಿವೇಕ್ ಅವರನ್ನು ಕೇಳಿದಕ್ಕೆ ತಕ್ಷಣ ಅವರು ನಟಿಸಲು ಒಪ್ಪಿಕೊಂಡರು. ಅವರಂತಹ ಪ್ರತಿಭಾವಂತ ನಟರೇ ನನಗೆ ಬೇಕಾಗಿತ್ತು. ಅವರಿಗೆ 18 ವರ್ಷ ಚಿತ್ರರಂಗದಲ್ಲಿ ನಟನೆಯ ಅನುಭವವಿದೆ. ಮೊದಲ ಚಿತ್ರದಲ್ಲೇ ವಿವೇಕ್ ಅವರ ಉತ್ತಮ ನಟನೆಯಿಂದ ಎಲ್ಲರ ಗಮನ ಸೆಳೆದವರು. ಶೃದ್ಧೆಯಿಂದ ನಟನೆ ಮಾಡುತ್ತಾರೆ. ಅವರು ಮೋದಿಯವರ ಪಾತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲರು ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
Advertisement
Advertisement
ಈ ಚಿತ್ರದ ಮೊದಲ ಪೋಸ್ಟರ್‍ವೊಂದಕ್ಕೆ ನಟ ವಿವೇಕ್ ಓಬೆರಾಯ್ ಸತತ 7 ಗಂಟೆ ಮೇಕಪ್ ಮಾಡಿಕೊಂಡು ಸುಮಾರು 15 ಲುಕ್‍ಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಈ ಚಿತ್ರಕ್ಕಾಗಿ ಬಹಳ ಶೃದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಇಂತಹ ಅತ್ಯುತ್ತಮ ಪ್ರತಿಭೆಯನ್ನು ಟೀಕಿಸುವುದು ಸರಿಯಲ್ಲ ಎಂದರು. ಹಾಗೆಯೇ ಜನವರಿ ಮಧ್ಯದಲ್ಲಿ ಈ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ಇತ್ತೀಚಿಗಷ್ಟೆ `ದಿ ಆಕ್ಸಿಡೆಂಟೆಲ್ ಪ್ರೈಮ್ ಮಿನಿಸ್ಟರ್’ ಸಿನಿಮಾದ ಟ್ರೇಲರ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ಈ ಚಿತ್ರದ ವಿರುದ್ಧ ಎಲ್ಲೆಡೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆಯೇ ಮತ್ತೆ ರಾಜಕೀಯ ವಲಯದಲ್ಲಿ ಸದ್ದು ಮಾಡಲು `ಪಿಎಂ ನರೇಂದ್ರ ಮೋದಿ’ ಸಿನಿಮಾ ತಯಾರಾಗ್ತಿದೆ.
ಈ ಚಿತ್ರದಲ್ಲಿ ನರೇಂದ್ರ ಮೋದಿ ಅವರ ಪಾತ್ರದಲ್ಲಿ ವಿವೇಕ್ ಓಬೆರಾಯ್ ನಟಿಸುತ್ತಿದ್ದಾರೆ. ಚಿತ್ರವನ್ನು ಓಮಂಗ್ ಕುಮಾರ್ ನಿರ್ದೇಶಿಸುತ್ತಿದ್ದು, ಸುರೇಶ್ ಓಬೆರಾಯ್ ಹಾಗೂ ಸಂದೀಪ್ ಎಸ್. ಸಿಂಗ್ ನಿರ್ಮಿಸುತ್ತಿದ್ದಾರೆ.
Launched the official poster of film #PMNarendraModi in 23 languages with @sureshoberoi ji, @vivekoberoi , @OmungKumar , Sandeep Singh in Mumbai.
This film is based on Hon @narendramodi ji’s life as the Prime Minister of India. pic.twitter.com/1A2YS5Ze68
— Devendra Fadnavis (@Dev_Fadnavis) January 7, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv