ಬೆಂಗಳೂರು: ಇತ್ತೀಚೆಗೆ ಬಿಗ್‍ಬಾಸ್ ಸ್ಪರ್ಧಿ, ಗಾಯಕ ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕೋ’ ಹಾಡು ಯೂಟ್ಯೂಬ್‍ನಲ್ಲಿ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ ಈ ಹಾಡಿನ ವಿರುದ್ಧ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.
ನಿರ್ಮಾಪಕ ಬಾಮಾ ಹರೀಶ್ ಅವರು, ನವೀನ್ ಸಜ್ಜು ಹಾಡಿರುವ ವಿರುದ್ಧ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಜೊತೆಗೆ ನವೀನ್ ಸಜ್ಜು ಕ್ಷಮೆ ಕೇಳಬೇಕು ಎಂದು ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
Advertisement
Advertisement
“ನವೀನ್ ಸಜ್ಜು ಹಾಡಿರುವ ‘ಏನ್ ಚಂದನೋ ತಕಾ’ ಹಾಡಿನಲ್ಲಿ ಒಕ್ಕಲಿಗರ ಮನೆಯ ಹೆಣ್ಣು ಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ, ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯಕ್ಕೆ ಕ್ಷಮೆಯನ್ನು ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ” ಎಂದು ಬಾಮಾ ಹರೀಶ್ ಅವರು ಬರೆದುಕೊಂಡಿದ್ದಾರೆ.
Advertisement
ನವೀನ್ ಸಜ್ಜು ಹಾಡಿರುವ‘ಏನ್ ಚಂದನ ತಕಾ’ ಹಾಡಿನಲ್ಲಿ ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ.ಈ ಕೂಡಲೇ,ಹಾಡನ್ನು ಸ್ಥಗಿತಗೊಳಿಸಿ,ಒಕ್ಕಲಿಗ ಸಮುದಾಯಕ್ಕೆ ಕ್ಷಮೆಯನ್ನು ಕೋರಬೇಕು.
ಕಲಾಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ.
— BAMA HARISH (@BamaHarish) September 6, 2019
Advertisement
‘ಏನ್ ಚಂದನೋ ತಕೋ’ ಹಾಡು ‘ಬಡ್ಡೀ ಮಗನ್ ಲೈಫು’ ಸಿನಿಮಾದ ಹಾಡಾಗಿದೆ. ಈ ಸಿನಿಮಾಗೆ ಪವನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಹಾಡನ್ನು ನವೀನ್ ಸಜ್ಜು ಹಾಡಿದ್ದು, ಪೂರ್ಣಚಂದ್ರ ತೇಜಸ್ವಿ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹುಡುಗಿ ಪ್ರೀತಿ ಮಾಡಿ ಆತನ ಜೊತೆ ಓಡಿ ಹೋದರೆ ನೆರೆಹೊರೆಯ ಮನೆಯ ಹೆಂಗಸರು ಅದನ್ನು ಹೇಗೆ ಆಡಿಕೊಳ್ಳುತ್ತಾರೆ ಎನ್ನುವುದನ್ನು ಹಾಡಿನ ಮೂಲಕ ಹೇಳಲಾಗಿದೆ.