ಕನ್ನಡದ ‘ಯುವರತ್ನ’ ಪುನೀತ್ ರಾಜ್‌ಕುಮಾರ್ (Puneethrajkumar) ಅವರ ಪತ್ನಿ ಅಶ್ವಿನಿ (Ashwini Puneethrajkumar) ಅವರು ದುಬಾರಿ ಆಡಿ Q7 (Audi Q7) ಕಾರನ್ನು ಖರೀದಿಸಿದ್ದಾರೆ. ಅಪ್ಪು ಮನೆಗೆ ಎಂಟ್ರಿ ಕೊಟ್ಟಿರುವ ಐಷಾರಾಮಿ ಕಾರಿನ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಪುನೀತ್ ಅಗಲಿದ ಬಳಿಕ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಅಶ್ವಿನಿ ಪೂರ್ಣಗೊಳಿಸುತ್ತಿದ್ದಾರೆ. ಪಿಆರ್‌ಕೆ ಸಂಸ್ಥೆಯ ರೂವಾರಿಯಾಗಿ ಅಪ್ಪು ಕನಸಿನ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ಇದೀಗ ಐಷಾರಾಮಿ ಕಾರನ್ನು ಖರೀದಿಸುವ ಮೂಲಕ ಪುನೀತ್ ಪತ್ನಿ ಸುದ್ದಿಯಲ್ಲಿದ್ದಾರೆ.
ಪುನೀತ್ ರಾಜ್‌ಕುಮಾರ್ ಮನೆಯಲ್ಲಿ ಸಾಕಷ್ಟು ಐಷಾರಾಮಿ ಕಾರುಗಳು ಅವರ ಗ್ಯಾರೇಜ್‌ನಲ್ಲಿ ಇವೆ. ಆ ಸಾಲಿಗೆ ಇದೀಗ ಆಡಿಕ್ಯೂ 7 ಕಾರು ಸೇರ್ಪಡೆಯಾಗಿದೆ. ಸದ್ಯ ಹೆಚ್ಚು ಮಾರಾಟವಾಗುತ್ತಿರುವ ಕಾರುಗಳಲ್ಲಿ ಇದು ಕೂಡ ಒಂದು. ವಿನ್ಯಾಸ, ಲುಕ್, ಪರ್ಫಾಮೆನ್ಸ್, ಟೆಕ್ನಾಲಜಿ ಹೀಗೆ ಎಲ್ಲಾ ವಿಚಾರದಲ್ಲೂ ಆಡಿ ಕ್ಯೂ7 ಇತರ ಕಾರಗಳಿಗಿಂತ ಬಹಳ ವಿಭಿನ್ನವಾಗಿದೆ. ಇದನ್ನೂ ಓದಿ:ಅನಿಲ್ ಕಪೂರ್‌ರನ್ನು ಭೇಟಿಯಾದ ‘ಗೇಮ್ ಜೇಂಜರ್’ ನಿರ್ದೇಶಕ- ಹೊಸ ಚಿತ್ರ ಅನೌನ್ಸ್?
ಸಾಕಷ್ಟು ಸೌಲಭ್ಯಗಳಿರುವ ಆಡಿ Q7 ಕಾರು 90 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಇರುತ್ತದೆ. ಅಂದಹಾಗೆ, ಹೊಸ ಖರೀದಿ ಮಾಡಿರುವ ಪುನೀತ್ ಪತ್ನಿಗೆ ಅಪ್ಪು ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.

