ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಅಂಜನಿಪುತ್ರ’ ಚಿತ್ರಕ್ಕೆ ಒಂದಲ್ಲ ಒಂದು ಕಂಟಕಗಳು ಎದುರಾಗುತ್ತಲೇ ಇವೆ. ಚಿತ್ರ ಪ್ರದರ್ಶಗೊಂಡ ದಿನದಂದೇ ಅಪ್ಪು ಅಭಿಮಾನಿಯೊಬ್ಬ ಸಿನಿಮಾವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಬೆನ್ನಲ್ಲೇ ಇದೀಗ ಕೋರ್ಟ್ ಚಿತ್ರ ಪ್ರದರ್ಶನಕ್ಕೆ ತಡೆಯಾಜ್ಞೆ ನೀಡಿದೆ.
ಈ ಕುರಿತು ನಿರ್ಮಾಪಕ ಹಾಗೂ ವಿತರಕ ಜಾಕ್ ಮಂಜು ಅವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಕೋರ್ಟ್ ಚಿತ್ರಕ್ಕೆ ತಡೆಯಾಜ್ಞೆ ನೀಡಿರುವ ಕುರಿತು ಹಾಗೂ ಯಾಕ್ ನೀಡಿದೆ ಅನ್ನೋದರ ಬಗ್ಗೆ ನನಗೆ ಈವರೆಗೂ ಮಾಹಿತಿ ಬಂದಿಲ್ಲ. ಇನ್ನು ಸಿನಿಮಾದಲ್ಲಿರೋ ಸನ್ನಿವೇಶದಲ್ಲಿ ವಕೀಲರಿಗೆ ಏನಾದ್ರೂ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಅಂತ ಹೇಳಿದ್ರು.
Advertisement
ನನ್ನ ಸಿನಮಾ ತಂಡದ ಜೊತೆ ಮಾತನಾಡಿ, ಆ ಸಿನಿಮಾವನ್ನು ನೋಡಿ ನೋಟೀಸ್ ಇಲ್ಲದೆನೆ ತೆಗೆಯುವುದಕ್ಕೆ ಪ್ರಯತ್ನಿಸುತ್ತೇನೆ. ಆದರೆ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಅನ್ನೋ ವಿಚಾರದ ಕುರಿತು ಇದುವರೆಗೆ ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕರ್ನಾಟಕದಾದ್ಯಂತ ಎಲ್ಲಾ ಚಿತ್ರ ಮಂದಿರಗಳಲ್ಲೂ ಚಿತ್ರ ಪ್ರದರ್ಶನವಾಗುತ್ತಿದೆ. ನಾನು ಯಾವುದೇ ರೀತಿಯ ಕಾನೂನು ಉಲ್ಲಂಘನೆ ಮಾಡುವುದಿಲ್ಲ. ಕಾನೂನಿಗೆ ತಲೆಬಾಗ್ತೀನಿ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ನಿಲ್ಲಿಸಿ ಎಂದು ಆ ಪ್ರತಿ ನನ್ನ ಕೈಗೆ ಬಂದ ಪಕ್ಷದಲ್ಲಿ ನಾನು ಅದನ್ನು ಫಾಲೋ ಮಾಡುತ್ತೇನೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಅಂಜನಿಪುತ್ರದ ವಿರುದ್ಧ ನಾನು ದೂರು ನೀಡಿದ್ದು ಯಾಕೆ? ವಕೀಲ ನಾರಾಯಣಸ್ವಾಮಿ ಆರೋಪಿಸಿದ್ದು ಹೀಗೆ
Advertisement
Advertisement
ವಕೀಲರು ತಿಳಿದವರು, ಬುದ್ಧಿವಂತರು. ಹೀಗಾಗಿ ಇದರಿಂದ ದಯವಿಟ್ಟು ಕೋಪ ಮಾಡಿಕೊಳ್ಳಬೇಡಿ. ಯಾಕಂದ್ರೆ ಚಿತ್ರದ ಮೊದಲಿನಲ್ಲೇ ಇಲ್ಲಿ ಬರುವ ಸನ್ನಿವೇಶಗಳೆಲ್ಲವೂ ಕಾಲ್ಪನಿಕವೆಂದು ನಾವು ಹೇಳಿರುತ್ತೇವೆ. ಉದಾಹರಣೆಗೆ ಒಂದು ಸಿನಿಮಾದಲ್ಲಿ 10 ಮಂದಿಯನ್ನು ಸಾಯಿಸೋದು ಅಥವಾ ಅತ್ಯಾಚಾರ ಮಾಡುವಂತಹ ಸನ್ನಿವೇಶಗಳು ಬರುತ್ತವೆ. ಆದ್ರೆ ನೀವು ಯಾವತ್ತೂ ಈ ಕುರಿತು ಕಾನೂನು ಮೆಟ್ಟಿಲು ಹತ್ತಿರುವುದಿಲ್ಲ. ಆದ್ರೆ ಇದೀಗ ವಕೀಲರಿಗೆ ಏನೋ ಒಂದು ಮಾತು ಅಂದಿದ್ದಾರೆ ಅಂತ ಈ ರೀತಿ ಮಾಡುವುದು ಸರಿಯಲ್ಲ. ಸೆನ್ಸಾರ್ ಮಂಡಳಿಯವರು ಈ ಚಿತ್ರವನ್ನು ನೋಡಿ, ಚಿತ್ರದಲ್ಲಿ ಬರುವ ಪ್ರತಿಯೊಂದು ಸನ್ನಿವೇಶಗಳನ್ನು ನೋಡಿಯೇ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸಿನಿಮಾಟೋಗ್ರಾಫಿಯನ್ನು ಓದಿಯೇ ಮಾಡಿದ್ದಾರೆ. ಹೀಗಾಗಿ ತಪ್ಪು ಅಂತ ಅವರಿಗೂ ಅನಿಸಿಲ್ಲ. ಇವೆಲ್ಲದರ ಮಧ್ಯೆ ನಿಮಗೆ ನೋವಾಗಿದ್ದರೆ ಕ್ಷಮಿಸಿ ಬಿಡಿ ಅಂದ್ರು. ಇದನ್ನೂ ಓದಿ: ಪುನೀತ್ ಅಭಿನಯದ ಅಂಜನಿಪುತ್ರ ಪ್ರದರ್ಶನಕ್ಕೆ ಬ್ರೇಕ್
Advertisement
ಒಟ್ಟಿನಲ್ಲಿ ಈ ವಿಚಾರದ ಕುರಿತು ದಯವಿಟ್ಟು ನೋವಾಗಬೇಡಿ. ಒಂದು ವೇಳೆ ನೀವು ಈ ಕುರಿತು ಕೋರ್ಟ್ ಮೊರೆ ಹೋಗಿದ್ದರೆ ದಯವಿಟ್ಟು ಅದನ್ನು ವಾಪಾಸ್ ತೆಗೆದುಕೊಳ್ಳಿ. ಯಾಕಂದ್ರೆ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಸಿನಿಮಾ ರಂಗದಲ್ಲಿ ಬಹಳಷ್ಟು ಒದ್ದಾಡುತ್ತಿದ್ದೇವೆ. ಹೀಗಾಗಿ ದಯವಿಟ್ಟು ಇದನ್ನು ಮುಂದುವರೆಸೋದು ಬೇಡ ಅಂತ ವಕೀಲರಿಗೆ ಜಾಕ್ ಮನವಿ ಮಾಡಿಕೊಂಡರು. ಇದನ್ನೂ ಓದಿ: ಅಂಜನಿಪುತ್ರ ಎಫ್‍ಬಿ ಲೈವ್ ಮಾಡಿದ್ದು ಯಾಕೆ? ಯುವಕ ಹೇಳಿದ್ದು ಏನು?
ಚಿತ್ರಪ್ರದರ್ಶನ ನಿಂತು ಬಿಟ್ಟರೆ ಸುಮಾರು 400ರಿಂದ 500 ಜನರ ಜೀವನ ಬೀದಿಗೆ ಬರುತ್ತೆ. ಅವರೆಲ್ಲರ ಮನೆ, ಮಡದಿ ಮಕ್ಕಳು ಕೂಡ ಬೀದಿಗೆ ಬರುತ್ತಾರೆ. ಇದರಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಇವರಿಬ್ಬರೇ ಇರಲ್ಲ. ನಿರ್ಮಾಪಕರು ಬಂಡವಾಳ ಹಾಕಿರುತ್ತಾರೆ. ವಿತರಕರು ಅವರಿಂದ ತೆಗೆದುಕೊಂಡಿರುತ್ತಾರೆ. ನಾನಿದನ್ನು ತಪ್ಪು ಅಂತ ಹೇಳ್ತಿಲ್ಲ ಆದ್ರೆ ವಕೀಲರು ಸನ್ನಿವೇಶದ ಕ್ಲಿಪ್ಪಿಂಗ್ಸನ್ನು ತೆಗದುಕೊಂಡು ಹೋಗಿ ಕೋರ್ಟ್ ನಲ್ಲಿ ತೋರಿಸಬೇಕು ಅಂದ್ರೆ ಅವರು ಕೂಡ ಅದನ್ನು ಕದ್ದು ಹೋಗಿರುವುದೇ ಆಗಿದೆ ಅಲ್ಲವೇ. ಇದು ಕೂಡ ಕಾನೂನು ರೀತಿಯಲ್ಲಿ ತಪ್ಪು ಅಲ್ಲವೇ ಅಂತ ಅವರು ಪ್ರಶ್ನಿಸಿದ್ರು. ಇದನ್ನೂ ಓದಿ: ದಯವಿಟ್ಟು ಕಟೌಟ್ ಗಳಿಗೆ ಹಾಲು ಹಾಕಿ ಪೋಲು ಮಾಡ್ಬೇಡಿ: ಅಭಿಮಾನಿಗಳಿಗೆ ಅಪ್ಪು ಮನವಿ
ಕನ್ನಡ ಚಿತ್ರರಂಗ ಬಹಳ ಕಷ್ಟದಲ್ಲಿದೆ. ಹೀಗಾಗಿ ಥಿಯೇಟರ್ ನಲ್ಲಿ ಸಿನಿಮಾವನ್ನು ಕದ್ದು ಸಾಮಾಜಿಕ ಜಾಲತಾಣದಲ್ಲಿ ಹಾಕುವಂತಹ ಕೆಲಸವನ್ನು ದಯವಿಟ್ಟು ಮಾಡಬೇಡಿ. ನೀವು ಚಿತ್ರಮಂದಿರಕ್ಕೆ ಬರೋದಿಕೆ ಇಷ್ಟವಿಲ್ಲ ಎಂದ್ರೂ ಪರವಾಗಿಲ್ಲ. ಆದ್ರೆ ಇಂತಹ ತಪ್ಪು ಕೆಲಸಗಳನ್ನು ಮಾಡಕ್ಕೆ ಹೋಗಬೇಡಿ ಅಂತ ಕಿವಿ ಮಾತು ಹೇಳಿದ್ರು. ಇದನ್ನೂ ಓದಿ: ರಿಲೀಸ್ ಆಗಿದ್ದ ಅಂಜನಿಪುತ್ರನಿಗೆ ಅಭಿಮಾನಿಯಿಂದ ಶಾಕ್!
ಸ್ಯಾಂಡಲ್ ವುಡ್ ಹನುಮಭಕ್ತ ಎ.ಹರ್ಷ ನಿರ್ದೇಶನದಲ್ಲಿ, ಎಮ್.ಎನ್.ಕುಮಾರ್ ನಿರ್ಮಾಣದಲ್ಲಿ ಅಂಜನಿಪುತ್ರ ಮೂಡಿಬಂದಿದೆ. ಉಗ್ರಂ ಖ್ಯಾತಿಯ ರವಿಬಸ್ರೂರು ಅಂಜನಿಪುತ್ರ ಚಿತ್ರದ ಸಂಗೀತದ ಸಾರಥ್ಯ ವಹಿಸಿದ್ದಾರೆ. ಚಿತ್ರಕ್ಕೆ ಎಂ.ಎನ್. ಕುಮಾರ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ರಮ್ಯಾಕೃಷ್ಣ, ರವಿಶಂಕರ್, ಚಿಕ್ಕಣ್ಣ ಸೇರಿದಂತೆ ಬಹುದೊಡ್ಡ ತಾರಾಗಣವಿದ್ದು, ನಟಿ ಹರಿಪ್ರಿಯಾ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪವರ್ ಸ್ಟಾರ್‍ಗೆ ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.