ನೆಲಮಂಗಲ: ಕೊರೊನಾದಿಂದ ಅನೇಕ ಕುಟುಂಬ ಬೀದಿಗೆ ಬಿದ್ದಿವೆ. ಇನ್ನೂ ಅನೇಕರು ಕುಟುಂಬಸ್ಥರನ್ನು ಕಳೆದುಕೊಂಡು ನೋವಲ್ಲಿ ಮುಳಿಗಿದ್ದಾರೆ. ಸರ್ಕಾರ ಕೊರೊನಾದಿಂದ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ರೂಪದಲ್ಲಿ ಒಂದು ಲಕ್ಷ ರೂ.ಗಳನ್ನ ಬಿಡುಗಡೆ ಮಾಡಿದೆ. ಆದರೆ ಪರಿಹಾರ ಹಣದ ಚೆಕ್‍ನಲ್ಲಿ ಸಮಸ್ಯೆ ಆಗಿರುವ ಆರೋಪ ಕೇಳಿಬಂದಿದೆ.
ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ನಿವಾಸಿ ನಾಗಮ್ಮ ಕೊರೊನಾದಿಂದ ಮೃತಪಟ್ಟಿದ್ದು, ಅವರ ಪತಿ ರಂಗಸ್ವಾಮಿ ಹೆಸರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಒಂದು ಲಕ್ಷ ರೂ. ಚೆಕ್ ಪರಿಹಾರದ ರೂಪದಲ್ಲಿ ನೀಡಿದೆ. ಇದನ್ನೂ ಓದಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ಕೊರೊನಾ
Advertisement
Advertisement
ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ನೀಡಿದ್ದ ಚೆಕ್ ಈಗ ಅಸಲಿಯೋ ನಕಲಿಯೋ ಎಂಬ ಅನುಮಾನ ಜನರಲ್ಲಿ ಮೂಡತೊಡಗಿದೆ. ಚೆಕ್ ಪಡೆದು ಬ್ಯಾಂಕಿನಲ್ಲಿ ವಿಚಾರಿಸಿದರೆ ಹಣವಿಲ್ಲ ಎಂದು ವಾಪಸ್ ಕಳಿಸಿದ್ದು, ನಂತರ ಕಚೇರಿಗೂ ಬ್ಯಾಂಕಿಗೂ ಅಲೆದಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ರಂಗಸ್ವಾಮಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ದೇಶಾದ್ಯಂತ ಮೊದಲ ದಿನ 40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ
Advertisement
Advertisement
ಹೀಗೆ ನೂರಾರು ಕುಟುಂಬಗಳಿಗೆ ಪರಿಹಾರದ ಹಣದಲ್ಲಿ ಅನ್ಯಾಯ ಆಗಿರುವ ಸಾಧ್ಯತೆ ಇದ್ದು, ಸರ್ಕಾರ ಕೂಡಲೇ ಪರಿಹಾರದ ಹಣವನ್ನು ತಲುಪಿಸುವ ಕೆಲಸ ಮಾಡಬೇಕಿದೆ ಎಂದು ಜನರು ಆಗ್ರಹಿಸಿದ್ದಾರೆ.