ಚೆನೈ: ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‍ಐ (PFI) ವಿರುದ್ಧದ ತನಿಖೆಗೆ ಸಂಬಂಧಿಸಿದಂತೆ ಎನ್‍ಐಎ (NIA) ಮಂಗಳವಾರ ತಮಿಳುನಾಡಿನ (Tamil Nadu) ನಾಲ್ಕು ಜಿಲ್ಲೆಗಳಲ್ಲಿ ದಾಳಿ ನಡೆಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುರೈ, ಚೆನ್ನೈ, ದಿಂಡಿಗಲ್ ಮತ್ತು ಥೇಣಿ ಜಿಲ್ಲೆಗಳ ಆರು ಪ್ರದೇಶಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಕಳೆದ ಸೆ. 19 ರಂದು ಪ್ರಕರಣ ದಾಖಲಾದಾಗಿನಿಂದ ಇದುವರೆಗೂ ಪ್ರಕರಣದಲ್ಲಿ 10 ಜನರನ್ನು ಬಂಧಿಸಲಾಗಿದೆ. ಬಂಧಿತರಾಗಿದ್ದ ಆರೋಪಿಗಳು ನೆಲೆಸಿದ್ದ ಸ್ಥಳಗಳಲ್ಲಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ವಿಚಾರ- ಸುಪ್ರೀಂನಲ್ಲಿ ಇಂದು ವಿಚಾರಣೆ
Advertisement
Advertisement
ಬಂಧಿತರಿಂದ ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಲ್ಲದೆ ಆರೋಪಿಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಯಲ್ಲಿ ತೊಡಗಿದ್ದರು. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಅಲ್ಲದೆ ಮಾರಕಾಸ್ತ್ರಗಳ ಬಳಕೆಗೆ ಯುವಕರ ಗುಂಪಿಗೆ ತರಬೇತಿ ನೀಡಿತ್ತಿದ್ದರು ಎಂದು ಎನ್‍ಐಎ ಆರೋಪಿಸಿತ್ತು.
Advertisement
ವಿವಿಧ ರಾಜ್ಯಗಳ ಪೊಲೀಸರು ಹಾಗೂ ಎನ್‍ಐಎ ನಡೆಸಿದ ತನಿಖೆಗಳಲ್ಲಿ ಪಿಎಫ್‍ಐ ಸಂಘಟನೆ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಇದಾದ ನಂತರ ಕಳೆದ ಸೆಪ್ಟೆಂಬರ್‌ನಲ್ಲಿ ಪಿಎಫ್‍ಐ ಹಾಗೂ ಅದರ ಅನೇಕ ಅಂಗಸಂಸ್ಥೆಗಳನ್ನು ಗೃಹ ಸಚಿವಾಲಯ (Ministry of Home Affairs), ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿ ನಿಷೇಧಿಸಿತ್ತು. ಇದನ್ನೂ ಓದಿ: ಕರಿ ಜೊತೆಗೆ ಅನ್ನ ಮಾಡಿಲ್ಲ ಅಂತಾ ಪತ್ನಿಯನ್ನ ಹೊಡೆದು ಕೊಂದ ಪಾಪಿ ಗಂಡ