ನವದೆಹಲಿ: ಎನ್‌ಡಿಎ ಭಾಗವೂ ಆಗಿರುವ ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ (Praful Patel) ಅವರ 180 ಕೋಟಿ ರೂ.ಗಿಂತಲೂ ಅಧಿಕ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂಬ ಜಾರಿ ನಿರ್ದೇಶನಾಲಯದ ಆದೇಶವನ್ನು ಮುಂಬೈ ಕೋರ್ಟ್ ರದ್ದುಗೊಳಿಸಿದೆ. ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ ಆಕ್ಟ್ ಅಥವಾ ಸಫೇಮಾದೊಂದಿಗೆ (SAFEMA) ವ್ಯವಹರಿಸುವ ಮೇಲ್ಮನವಿ ನ್ಯಾಯಾಧಿಕರಣವು ಈ ಆದೇಶವನ್ನು ನೀಡಿದೆ.
ಎನ್‌ಸಿಪಿ (NCP) ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿರುವ ಪ್ರಫುಲ್ ಪಟೇಲ್ ಶರದ್ ಪವಾರ್ ಅವರ ಸೋದರ ಅಳಿಯ ಸಹ ಆಗಿದ್ದಾರೆ. ಜೊತೆಗೆ ಬಿಜೆಪಿ ಮತ್ತು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಭಾಗವೂ ಸಹ ಆಗಿದ್ದಾರೆ. ಇದನ್ನೂ ಓದಿ: ಮೋದಿ ಪ್ರಮಾಣ ವಚನಕ್ಕೆ ಸಕಲ ಸಿದ್ಧತೆ – ರಾಷ್ಟ್ರಪತಿ ಭವನಕ್ಕೆ ಭಾರೀ ಭದ್ರತೆ
Advertisement
Advertisement
ಈ ಹಿಂದೆ ದಕ್ಷಿಣ ಮುಂಬೈನಲ್ಲಿದ್ದ ಪ್ರಫುಲ್ ಪಟೇಲ್ ಮತ್ತು ಅವರ ಕುಟುಂಬ ಒಡೆತನದ ಅಪಾರ್ಟ್ಮೆಂಟ್‌ನಲ್ಲಿದ್ದ 12 ಮತ್ತು 15ನೇ ಮಹಡಿಯನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿತ್ತು. ಸುಮಾರು 180 ಕೋಟಿ ರೂ. ಮೌಲ್ಯದ ಈ ಅಪಾರ್ಟ್‌ಮೆಂಟ್‌ಗಳು ಪ್ರಫುಲ್ ಪಟೇಲ್ ಅವರ ಪತ್ನಿ ವರ್ಷಾ ಮತ್ತು ಅವರ ಕಂಪನಿ ಮಿಲೇನಿಯಂ ಡೆವಲಪರ್ ಹೆಸರಿನಲ್ಲಿದೆ.
Advertisement
ಡ್ರಗ್ಸ್ ಮಾಫಿಯಾ ಮತ್ತು ದರೋಡೆಕೋರ ದಾವೂದ್ ಇಬ್ರಾಹಿಂನ ಬಲಗೈ ಬಂಟ ಇಕ್ಬಾಲ್ ಮಿರ್ಚಿಯ ಮೊದಲ ಪತ್ನಿ ಹಜ್ರಾ ಮೆಮನ್‌ನಿಂದ ಈ ಆಸ್ತಿಯನ್ನ ಆಕ್ರಮವಾಗಿ ಸಂಪಾದಿಸಲಾಗಿದೆ ಎಂದು ಇಡಿ ಆರೋಪಿಸಿತ್ತು. 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿದ್ದ ಮಿರ್ಚಿ 2013ರಲ್ಲಿ ಲಂಡನ್‌ನಲ್ಲಿ ಮೃತಪಟ್ಟಿದ್ದ. ಇದನ್ನೂ ಓದಿ: ಜೂ.9ರ ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ಮೋದಿ ಪ್ರಮಾಣವಚನ
Advertisement
ಈ ಹಿನ್ನೆಲೆಯಲ್ಲಿ ಇ.ಡಿ ಆದೇಶವನ್ನು ತಿರಸ್ಕರಿಸಿದ ನ್ಯಾಯಾಧಿಕರಣವು, ಆಸ್ತಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ಸೇರಿಲ್ಲ. ಜೊತೆಗೆ ಈ ಆಸ್ತಿ ಮಿರ್ಚಿಗೆ ಸಂಬಂಧಿಸಿದಲ್ಲ. ಆದ್ದರಿಂದ ಪಟೇಲ್ ವಿರುದ್ಧ ತನಿಖಾ ಸಂಸ್ಥೆ ಕ್ರಮವು ಕಾನೂನು ಬಾಹಿರವಾಗಿದೆ ಎಂದು ಹೇಳಿದೆ. ಮೆಮನ್ ಮತ್ತು ಅವರ ಇಬ್ಬರು ಪುತ್ರರ ಸೀಜೇ ಹೌಸ್‌ನಲ್ಲಿರುವ 14,000 ಚದರ ಅಡಿ ಆಸ್ತಿಯನ್ನು ಪ್ರತ್ಯೇಕವಾಗಿ ಲಗತ್ತಿಸಲಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಆದ್ದರಿಂದಾಗಿ ಪಟೇಲ್ ಅವರ ಆಸ್ತಿಯು ಅಪರಾಧದ ಭಾಗವಾಗಿಲ್ಲದ ಕಾರಣ ಮುಟ್ಟುಗೋಲು ಹಾಕಿಕೊಳ್ಳುವ ಅಗತ್ಯವಿಲ್ಲ ಎಂದು ಸಹ ಹೇಳಿದೆ.
ನ್ಯಾಯಾಧಿಕರಣದ ಈ ನಿರ್ಧಾರವು ಪ್ರತಿಪಕ್ಷಗಳ ಟೀಕೆಗೆ ಗುರಿಮಾಡಿಕೊಟ್ಟಿದೆ. ಬಿಜೆಪಿ ವಿರುದ್ಧದ ʻವಾಷಿಂಗ್ ಮೆಷಿನ್ʼ ಆರೋಪಗಳನ್ನು ಮುಂದುವರಿಸಿವೆ. ಇದನ್ನೂ ಓದಿ: ಮೋದಿ ಪ್ರಮಾಣವಚನಕ್ಕೆ ವಿದೇಶಿ ಗಣ್ಯರು, ಪೌರಕಾರ್ಮಿಕರು- ಕಾರ್ಯಕ್ರಮಕ್ಕೆ ಯಾರಿಗೆಲ್ಲ ಆಹ್ವಾನ?