– ರಾಷ್ಟ್ರಪತಿ ಭವನದ ಬಳಿ ಟೈಟ್ ಸೆಕ್ಯೂರಿಟಿ
ನವದೆಹಲಿ: ಭಾನುವಾರ ಸಂಜೆ 7:15 ಕ್ಕೆ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರಿಂದ ಹಿಡಿದು ವಿದೇಶಿ ಗಣ್ಯರು ಕೂಡ ಸಾಕ್ಷಿಯಾಗಲಿದ್ದಾರೆ.
ಮೋದಿ ಹ್ಯಾಟ್ರಿಕ್ ಸಾಧನೆಯ ಈ ಸಮಾರಂಭಕ್ಕೆ 8 ರಿಂದ 9 ಸಾವಿರ ಮಂದಿ ಅತಿಥಿಗಳಿಗೆ ಆಹ್ವಾನ ನೀಡಿದ್ದು, ರಾಷ್ಟ್ರಪತಿ ಭವನದ (Rastrapathi Bhavan) ಮುಂಭಾಗದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಯಾರೆಗೆಲ್ಲ ಆಹ್ವಾನ..?: ಮೋದಿ (Narendra Modi) ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪೌರ ಕಾರ್ಮಿಕರು, ಸೆಂಟ್ರಲ್ ವಿಸ್ತಾ ಯೋಜನೆ, ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಮಿಕರು, ತೃತೀಯ ಲಿಂಗಿಗಳು, ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳು, ಉತ್ತರಾಖಂಡ್ ಗಣಿ ಕಾರ್ಮಿಕರ ರಕ್ಷಿಸಿದ ತಂಡ, ವಂದೇ ಭಾರತ್, ಮೆಟ್ರೋದಂಥ ರೈಲ್ವೆ ಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದವರು, ಎಲ್ಲಾ ಧರ್ಮಗಳ 50 ಧರ್ಮ ಗುರುಗಳಿಗೂ ಜೊತೆಗೆ ಪದ್ಮಭೂಷಣ, ಪದ್ಮವಿಭೂಷಣ, ಪದ್ಮಶ್ರೀ ಪುರಸ್ಕøತರಿಗೆ, ವಿಕಸಿತ ಭಾರತ್ ಅಂಬಾಸಿಡರ್‍ಗಳು ಹಾಗೂ ಆದಿವಾಸಿ ಮಹಿಳೆಯರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
Advertisement
ವಿದೇಶಿ ಗಣ್ಯರು ಯಾರ‍್ಯಾರು..?: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ, ಸೀಷೆಲ್ಸ್ ಅಧ್ಯಕ್ಷ ವಾವೆಲ್ ರಾಮ್‍ಕಾಲಾವನ್, ಭೂತಾನ್ ಪ್ರಧಾನಿ ತ್ಶೆರಿಂಗ್ ತೋಗ್ಬೆ, ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್, ಬಾಂಗ್ಲಾ ದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಲ್ ಹಾಗೂ ಮಾಲ್ಡಿವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜ್ಜುಗೆ ಆಹ್ವಾನ ನೀಡಲಾಗಿದೆ.
Advertisement
ರಾಷ್ಟ್ರಪತಿ ಭವನದ ಸುತ್ತ ಬಿಗಿಭದ್ರತೆ: ಮೋದಿ ಪ್ರಮಾಣ ವಚನ ಕಾರ್ಯಕ್ರಮ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗುತ್ತಿದೆ. ದೆಹಲಿ ಪೊಲೀಸರು 5 ಹಂತದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ. ಅರೆಸೈನಿಕ ಸಿಬ್ಬಂದಿ, ಎನ್‍ಎಸ್‍ಜಿ ಕಮಾಂಡೋಗಳು, ಡ್ರೋನ್‍ಗಳು, ಸ್ನೈಪರ್‍ಗಳ ಸೇರಿ ಬಹು ಹಂತದ ಭದ್ರತೆ ಕೈಗೊಳ್ಳಲಾಗುತ್ತಿದೆ.
ರಾಷ್ಟ್ರಪತಿ ಭವನದ ಒಳಗೆ ಹಾಗೂ ಹೊರಗೆ 3 ಹಂತದಲ್ಲಿ ಭದ್ರತೆ ನೀಡಲಾಗುತ್ತಿದ್ದು, 5 ಕಂಪನಿಗಳ ಅರೆಸೇನಾಪಡೆ, ದೆಹಲಿ ಸಶಸ್ತ್ರ ಪೊಲೀಸ್ ಹೀಗೆ ಭದ್ರತೆಗಾಗಿ 2,500 ಪೊಲೀಸರ ಸುತ್ತಲೂ ನೇಮಕ ಮಾಡಲಾಗಿದೆ. ಗಣ್ಯರ ಮಾರ್ಗದಲ್ಲಿ ಸ್ನೈಪರ್‍ಗಳು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿದೇಶಿ ಗಣ್ಯರು ಉಳಿಯುವ ಲೀಲಾ, ತಾಜ್, ಐಟಿಸಿ ಮೌರ್ಯ, ಕ್ಲಾರಿಡ್ಜಸ್ ಮತ್ತು ಒಬೆರಾಯ್ ಹೋಟೆಲ್‍ಗಳಲ್ಲೂ ಜಿ20 ಮಾದರಿಯಲ್ಲೇ ವಿಶೇಷ ಭದ್ರತೆ ನಿಯೋಜನೆ ಮಾಡಲಾಗಿದೆ.