ಸಾಮಾಜಿಕ ಜಾಲತಾಣದಲ್ಲಿ ಪಾಕ್‌ ಪರ ಘೋಷಣೆ – ಮೋದಿ, ಬಜರಂಗದಳದ ಬಗ್ಗೆ ಅವಹೇಳನ; ಕೇಸ್‌ ದಾಖಲು!

Public TV
1 Min Read
Koppa 2

ಚಿಕ್ಕಮಗಳೂರು: ಇತ್ತೀಚೆಗೆ ವಿಧಾನಸೌಧದಲ್ಲಿ ʻಪಾಕಿಸ್ತಾನ ಜಿಂದಾಬಾದ್‌ʼ ಘೋಷಣೆ (Pak Slogan) ದೇಶಾದ್ಯಂತ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಇದೀಗ ಅಂತಹದ್ದೇ ಮತ್ತೊಂದು ಪ್ರಕರಣ ಚಿಕ್ಕಮಗಳೂರಿನಲ್ಲಿ (Chikkamagaluru) ಬೆಳಕಿಗೆ ಬಂದಿದೆ.

Koppa

ಚಿಕ್ಕಮಗಳೂರಿನ ಕೊಪ್ಪ ಪಟ್ಟಣದ (Koppa City) ಅಸ್ಗರ್‌ ಎಂಬ ವ್ಯಕ್ತಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ʻಪಾಕಿಸ್ತಾನ್‌ ಜಿಂದಾಬಾದ್‌ʼ ಎಂದು ಬರೆದುಕೊಂಡಿದ್ದಾನೆ. ಅಲ್ಲದೇ ಪ್ರಧಾನಿ ಮೋದಿ ವಿರುದ್ಧ ಹಾಗೂ ಬಜರಂಗದಳದ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ ಹಾಕಿದ್ದ ಕೆಲ ಹೊತ್ತಿನಲ್ಲಿ ಫೇಸ್‌ಬುಕ್‌ ಖಾತೆಯನ್ನೇ ಡಿಲೀಟ್‌ ಮಾಡಿದ್ದಾನೆ.

ಸಂಗ್ರಹಿತ ಪೋಸ್ಟ್‌ ಆಧಿರಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಕೊಪ್ಪ ಪೊಲೀಸರು ಕಿಡಿಗೇಡಿ ಅಸ್ಗರ್ ಗಾಗಿ ಹುಡುಕಾಟ ನಡೆಸಿದ್ದಾರೆ. ಈ ಬೆನ್ನೇ ಪೋಸ್ಟ್‌ ಹಾಕಿದವನ ವಿರುದ್ಧವೂ ಹಿಂದೂ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

Share This Article