ಬೆಂಗಳೂರು: ಕಳೆದ 2 ವರ್ಷ ಕೊರೊನಾ ಕಾಟದಿಂದಾಗಿ ರದ್ದಾಗಿದ್ದ ಪ್ರೊ ಕಬಡ್ಡಿ ಇದೀಗ ಮತ್ತೆ ಆರಂಭಗೊಳ್ಳುತ್ತಿದೆ. 8ನೇ ಆವೃತ್ತಿಯ ಪ್ರೊ ಕಬಡ್ಡಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಡಿ.22 ರಿಂದ ಮೊದಲ ಚರಣದ ಪಂದ್ಯಗಳು ಆರಂಭಗೊಳ್ಳಲಿದೆ.
Advertisement
ಮಶಾಲ್ ಸ್ಟೋಟ್ರ್ಸ್ ಆಯೋಜಕತ್ವದ ವಿವೋ ಪ್ರೊ ಕಬಡ್ಡಿ 8ನೇ ಆವೃತ್ತಿ ಬೆಂಗಳೂರಿನ ವೈಟ್‍ಫೀಲ್ಡ್‌ನಲ್ಲಿರುವ ಶೆರಟಾನ್ ಗ್ರ್ಯಾಂಡ್ ಹೋಟೆಲ್ ಹಾಗೂ ಕನ್ವೆಷನ್ ಸೆಂಟರ್‍ನಲ್ಲಿ ಇಡೀ ಟೂರ್ನಿ ನಡೆಯಲಿದೆ. ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸುತ್ತಿದ್ದು, ಒಟ್ಟು 3 ತಿಂಗಳುಗಳ ಕಾಲ ಟೂರ್ನಿ ನಡೆಯಲಿದೆ. ಟೂರ್ನಿಯ ಮೊದಲ ಚರಣದ ಪಂದ್ಯಗಳಿಗೆ ಡಿಸೆಂಬರ್ 22ರಂದು ಅಧಿಕೃತ ಚಾಲನೆ ಸಿಗಲಿದೆ. ಇದನ್ನೂ ಓದಿ: ಲಕ್ನೋ ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ನೇಮಕ
Advertisement
Advertisement
ಕಠಿಣ ಬಯೋ ಬಬಲ್‍ನಲ್ಲಿ ಟೂರ್ನಿ ನಡೆಯುತ್ತಿದ್ದು ಆಟಗಾರರು 3 ತಿಂಗಳ ಕಾಲ ಹೋಟೆಲ್ ಬಿಟ್ಟು ಹೊರ ಹೋಗುವಂತಿಲ್ಲ ಮತ್ತು ಹೊರಗಡೆಯಿಂದ ಯಾರನ್ನೂ ಕೂಡ ಒಳಬಿಡುತ್ತಿಲ್ಲ. ಜೊತೆಗೆ ಟೂರ್ನಿಗೆ ಪ್ರೇಕ್ಷಕರನ್ನೂ ಕೂಡ ನಿಷೇಧಿಸಲಾಗಿದೆ. ಆಟಗಾರರಿಗೆ 3 ದಿನಗಳಿಗೊಮ್ಮೆ ಕೊರೊನಾ ಪರೀಕ್ಷೆ ಕೂಡ ಮಾಡಲಾಗುತ್ತಿದೆ. ಆಟದ ಸಮಯ ಹೊರತು ಪಡಿಸಿ ಮಾಸ್ಕ್ ಧರಿಸುವುದನ್ನು ಕೂಡ ಆಟಗಾರರಿಗೆ ಕಡ್ಡಾಯಗೊಳಿಸಲಾಗಿದೆ.
Advertisement
ಕರ್ನಾಟಕದ ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್, ಜೈಪುರ್ ಪಿಂಕ್ ಫ್ಯಾಂಥರ್ಸ್, ಪುಣೇರಿ ಪಲ್ಟನ್, ಯು ಮುಂಬಾ, ಯೂಪಿ ಯೋಧಾ, ತಮಿಳ್ ತಲೈವಾಸ್, ಹರಿಯಾಣ ಸ್ಟೀಲರ್ಸ್, ದಬಾಂಗ್ ಡೆಲ್ಲಿ, ಪಾಟ್ನಾ ಪೈರೇಟ್ಸ್, ತೆಲುಗು ಟೈಟಾನ್ಸ್, ಗುಜಾರಾತ್ ಫಾರ್ಚೂನ್‍ಜೈಂಟ್ಸ್ ಒಟ್ಟು 12 ತಂಡಗಳು ಸೆಣಸಾಡಲಿದ್ದು, ಬೆಂಗಳೂರು ಬುಲ್ಸ್ ತವರು ಅಂಗಳದಲ್ಲಿ ಸೆಣಸಾಡಲಿದೆ. ಎಲ್ಲಾ ತಂಡಗಳಲ್ಲೂ ಕೂಡ ಸ್ಟಾರ್ ಆಟಗಾರರ ದಂಡೇ ಇದ್ದು, ಮುಂದಿನ ಮೂರು ತಿಂಗಳುಗಳ ಕಾಲ ಕಬಡ್ಡಿ ಕಲರವ ನಡೆಯಲಿದೆ. ಇದನ್ನೂ ಓದಿ: ಐಪಿಎಲ್‍ನ ನೂತನ ಫ್ರಾಂಚೈಸ್ ಲಕ್ನೋ ತಂಡದ ಕೋಚ್ ಆಗಿ ಆ್ಯಂಡಿ ಫ್ಲವರ್ ನೇಮಕ