– ಮೋದಿ ಪೂಜಿಸೋದು ಗಾಂಧಿ ಕೊಂದ ಗೋಡ್ಸೆಯನ್ನೇ
– ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ಸುಟ್ಟು ಹೋಗ್ತೀರಿ
– ಬಿಜೆಪಿ, ಆರ್ಎಸ್ಎಸ್ ವಿರುದ್ಧ ಖರ್ಗೆ ತೀವ್ರ ವಾಗ್ದಾಳಿ
ಬೆಳಗಾವಿ: ಬಿಜೆಪಿ, ಆರ್ಎಸ್ಎಸ್ (BJP, RSS) ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ. ಅವರು ನೋಡಲು ಮೆತ್ತಗೆ ಕಾಣಬಹುದು, ಸ್ವಲ್ಪ ಮುಟ್ಟಿ ನೋಡಿದ್ರೆ ಗೊತ್ತಾಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಕಾಂಗ್ರೆಸ್ ಸಂಸದೆಯ ಗುಣಗಾನ ಮಾಡಿದರು.
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಬೆಳಗಾವಿ ಸಾಕ್ಷಿಯಾಗಿತ್ತು. ಈಗ ಅಧಿವೇಶನದ ಶತಮಾನೋತ್ಸವದ ಭಾಗವಾಗಿ ಸಮಾವೇಶ ನಡೆಯುತ್ತಿದ್ದು, ಇದರ ವೇದಿಕೆ ಕಾರ್ಯಕ್ರಮದಲ್ಲಿ ಖರ್ಗೆ ಅವರು ಮಾತನಾಡಿದರು. ಇದನ್ನೂ ಓದಿ: ಐತಿಹಾಸಿಕ ಸಮಾವೇಶ – ಬೆಳಗಾವಿ ಸುವರ್ಣಸೌಧದ ಎದುರು ಗಾಂಧಿ ಪ್ರತಿಮೆ ಲೋಕಾರ್ಪಣೆ
ಬಿಜೆಪಿ, ಆರ್ಎಸ್ಎಸ್ ವಿರುದ್ಧ ಹೋರಾಡುವ ಶಕ್ತಿ ಇರುವ ಹೆಣ್ಣು ಪ್ರಿಯಾಂಕಾ ಗಾಂಧಿ (Priyanka Gandhi ). ಅವರು ನೋಡಲು ಮೆತ್ತಗೆ ಕಾಣಬಹುದು, ಸ್ವಲ್ಪ ಮುಟ್ಟಿನೋಡಿದ್ರೆ ಗೊತ್ತಾಗುತ್ತೆ. ತಂದೆ ಕಳೆದುಕೊಂಡು ಬೆಳೆದು ಬಂದವರು ಪ್ರಿಯಾಂಕಾ, ಎಂದಿಗೂ ತಮ್ಮ ಕೊರತೆ ತೋರಿಸಲಿಲ್ಲ. ಆದ್ರೆ ಮೋದಿ ಅಮಿತ್ ಶಾ ಅವರ ಚಮಚಾಗಳು ಪ್ರಿಯಾಂಕಾಗೆ ಬೈತಾರೆ. ಹಾಗೆ ಮಾತನಾಡೋದಕ್ಕೆ ಮುಂಚೆ, ನಾವು ಮಾಡಿದ್ದನ್ನು ಅವರು ಮಾಡಿತೋರಿಸಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ರಾಜ್ಯದಲ್ಲಿ ತೆಂಗು ಬೆಳೆಗಾರರ ಸಮಾವೇಶ – ಅಡಿಕೆ, ಕೊಬ್ಬರಿ ಬೆಳೆಗಾರರ ಸಮಸ್ಯೆ ಪರಿಹಾರದ ಬಗ್ಗೆ ಸಚಿವರ ಚರ್ಚೆ
ಸೋನಿಯಾ ಗಾಂಧಿ ಅವ್ರ ಕೃಪೆಯಿಂದ ಅಧ್ಯಕ್ಷನಾಗಿದ್ದೇನೆ:
ಹೊಸ ವರ್ಷದ ʻಜೈ ಬಾಪು, ಜೈ ಭೀಮ್, ಜೈ ಸಂವಿಧಾನʼ ಕಾರ್ಯಕ್ರಮ ಬೆಳಗಾವಿಯಲ್ಲಿ ನಡೆಯುತ್ತಿದೆ. ವಿರೋಧಿ ಬಣದವರು ಕಾಂಗ್ರೆಸ್ ವಿರುದ್ಧ ಟೀಕೆ ಮಾಡ್ತಿದ್ದಾರೆ. 2004 ರಲ್ಲಿ ಸೋನಿಯಾ ಗಾಂಧಿ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ ಅವರು ಅಧಿಕಾರ ಸ್ವೀಕರಿಸಿದೇ ಮನಮೋಹನ್ ಸಿಂಗ್‌ಗೆ ತ್ಯಾಗ ಮಾಡಿದರು. ಸೋನಿಯಾ ಗಾಂಧಿ ಅವರ ಕೃಪೆಯಿಂದ ನಾನು ಎಐಸಿಸಿ ಅಧ್ಯಕ್ಷನಾಗಿದ್ದೇನೆ. ಈಗ ನಾವು ಅಂತಹ ತ್ಯಾಗ ಮಾಡಲು ಸಿದ್ಧರಿದ್ದೀವಾ? ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: Kotekar Bank Robbery | ಬ್ಯಾಂಕ್‌ನಲ್ಲಿ ಚಿನ್ನ ದೋಚಲು ನಮಾಜ್ ಟೈಂ ಸೂಚಿಸಿದ್ದೇ ಆ ಸ್ಥಳೀಯ ವ್ಯಕ್ತಿ – ರಹಸ್ಯ ಸ್ಫೋಟ
ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ದೇಶಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಾರೆ. ಆದ್ರೂ ಬಿಜೆಪಿ ನಾವು ಕೊಟ್ಟ ಕಾರ್ಯಕ್ರಮಗಳನ್ನ ಟೀಕೆ ಮಾಡಿ, ನಮನ್ನ ಹೀಯಾಳಿಸಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಅಧಿಕಾರದಲ್ಲೇ ಇದ್ದರೂ ಸುಮ್ಮನೆ ಮಾತನಾಡುತ್ತಾರೆ ಹೊರತು ಯಾರಿಗೆ ಏನೂ ಮಾಡಿಲ್ಲ. ಏಕೆಂದರೆ ಈ ದೇಶದ ಬಡವರ ಬಗ್ಗೆ ಬಿಜೆಪಿ ಅವರಿಗೆ ಚಿಂತೆ ಇಲ್ಲ, ರೈತರ ಬಗ್ಗೆ ಚಿಂತೆ ಇಲ್ಲ. ಮೋದಿ ಈ ಬಗ್ಗೆ ಎಂದಿಗೂ ಗಮನ ಕೊಟ್ಟಿಲ್ಲ, ಕೋಡೋದೂ ಇಲ್ಲ. ಬಿಜೆಪಿ, ಆರ್‌ಎಸ್‌ಎಸ್, ಹಿಂದೂಮಹಾಸಭಾ ಯಾವಾಗಲೂ ದಲಿತ ವಿರೋಧಿಗಳು. ಆದ್ರೆ ಕಾಂಗ್ರೆಸ್ ಯಾವತ್ತಿಗೂ ಬಡವರ ಪರ ಇರುತ್ತದೆ ಎಂದು ನುಡಿದರು.
ಗಾಂಧಿಗೆ ಗುಂಡು ಹಾರಿಸಿ ಕೊಂದಿದ್ದು ಯಾರು?
ಮಹಾತ್ಮ ಗಾಂಧೀಜಿಗೆ ಗುಂಡು ಹಾರಿಸಿ ಕೊಂದದ್ದು ಯಾರು? ಆ ಗೋಡ್ಸೆ ಸಾರ್ವಕರ್ ಶಿಷ್ಯ. ಗಾಂಧಿ ಗುಜರಾತ್‌ನವರೇ ಆದರೂ ಮೋದಿಗೆ ಗೌರವ ಇಲ್ಲ. ಏಕೆಂದರೆ ಮೋದಿ ಪೂಜೆ ಮಾಡೋದು ಗಾಂಧಿಗೆ ಗುಂಡು ಹಾರಿಸಿದ ಗೋಡ್ಸೆಯನ್ನೇ ಎಂದು ಕುಟುಕಿದರು.
ಅಂಬೇಡ್ಕರ್ ಅವರನ್ನು ಆಯ್ಕೆ ಮಾಡಿದ್ದು ಕಾಂಗ್ರೆಸ್, ಆದ್ರೆ ಸಂವಿಧಾನ ಸುಟ್ಟವರು, ಅಂಬೇಡ್ಕರ್ ಪೋಟೋ ಸುಟ್ಟವರು ಬಿಜೆಪಿಯವರು. ನಮ್ಮನ್ನ ಕೆಣಕಲು ಹೋಗಬೇಡಿ, ನಾವು ಬೆಂಕಿ ಇದ್ದಂತೆ, ನಮ್ಮನ್ನ ಕೆಣಕ್ಕಿದ್ರೆ ನೀವು ಸುಟ್ಟು ಹೋಗ್ತೀರಿ ಎಂದು ಎಚ್ಚರಿಕೆ ಕೊಟ್ಟ ಖರ್ಗೆ ಅವರು, ಈ ದೇಶದ ತಿರಂಗಾ ಆರ್‌ಎಸ್‌ಎಸ್ ಕಚೇರಿ ಮೇಲೆ ಇಂದಿಗೂ ಹಾರಿಸಿಲ್ಲ. ಈಗ ಸಂವಿಧಾನ ಅಂತಾರೆ. ಸಂವಿಧಾನ ಸುಟ್ಟೋರು, ಮುಗಿಸೋರು ಬಿಜೆಪಿಯವರಾದ್ರೆ, ಸಂವಿಧಾನವನ್ನ ಎಂದಿಗೂ ಕಾಪಾಡುವವರು ಕಾಂಗ್ರೆಸ್‌ನವರು ಎಂದು ಹೇಳಿದರು.