ನವದೆಹಲಿ : ಅಡುಗೆ ಅನಿಲ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕಾಂಗ್ರೆಸ್‍ನ ಪ್ರಧಾನ ಕಾರ್ಯುದರ್ಶಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
Advertisement
ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಇದು ಸಾಮಾನ್ಯ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸಾಮಾನ್ಯ ಮಹಿಳೆಯರ ನೋವಿನ ಬಗ್ಗೆ ನಾವು ಯಾವಾಗ ಮಾತಾಡುವುದು? ಹಣದುಬ್ಬರವನ್ನು ಇಳಿಸಿ ಎಂದು ಪರೋಕ್ಷವಾಗಿ ಕುಟುಕಿ ಟ್ವೀಟ್ ಮಾಡುವ ಮೂಲಕವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಪ್ರಿಯಾಂಕಾ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಪರಿಸರಸ್ನೇಹಿ ಬ್ಯಾಗ್‍ನಲ್ಲಿ ತಿರುಪತಿ ಲಡ್ಡು
Advertisement
महंगाई बढ़ती जा रही है।
सिलेंडर भराने के पैसे नहीं हैं।
काम-धंधे बंद हैं।
ये आम महिलाओं की पीड़ा है। इनकी पीड़ा पर कब बात होगी?
महंगाई कम करो। pic.twitter.com/uWTjuOxAgI
— Priyanka Gandhi Vadra (@priyankagandhi) August 23, 2021
Advertisement
ಈ ಹಿಂದೆಯೂ ಕೂಡ ಪ್ರಿಯಾಂಕಾ ಮೋದಿ ಸರ್ಕಾರದ ವಿರುದ್ಧ ಇದೇ ವಿಚಾರಕ್ಕೆ ಸಂಬಂಧಿಸಿ ಕಿಡಿ ಕಾರಿದ್ದರು. ದೇಶದಲ್ಲಿ ಹಣದುಬ್ಬರವಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ನೇರಾ ನೇರ ಕಾರಣ. ಉಜ್ವಲ ಎಲ್‍ಪಿಜಿ ಸಿಲಿಂಡರ್‌ಗಳ ಮೇಲೆ ಬಡವರಿಗೆ ಸಹಾಯಧನ ನೀಡುವಂತೆ ಕೇಂದ್ರವನ್ನು ಆಗ್ರಹಿಸಿದ್ದರು. ಇದನ್ನೂ ಓದಿ: ನಿನ್ನ ಬಳಿ ದುಡ್ಡಿಲ್ಲ ಎಂದು ಮಜಾ ಭಾರತದ ಕಲಾವಿದನಿಗೆ ಕೈ ಕೊಟ್ಟ ಪತ್ನಿ