– ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ಬಯಲಾಗಿದೆ ಎಂದ ಸಿಎಂ
ತಿರುವನಂತಪುರಂ: ವಯನಾಡ್ ಲೋಕಸಭಾ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಸ್ಪರ್ಧಿಸುತ್ತಿದ್ದಾರೆ ಎಂದು ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಆರೋಪಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕೇರಳ ಸಿಎಂ, ಕಾಂಗ್ರೆಸ್‌ನ ಜಾತ್ಯತೀತ ಮುಖವಾಡ ಈಗ ಬಯಲಾಗಿದೆ ಎಂದು ಟೀಕಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಜಮಾತ್-ಎ-ಇಸ್ಲಾಮಿ (Jamaat-E-Islami) ಬೆಂಬಲದೊಂದಿಗೆ ಸ್ಪರ್ಧೆ ಮಾಡ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ನಿಲುವೇನು? ಅವರ ಸಿದ್ಧಾಂತ ಪ್ರಜಾಪ್ರಭುತ್ವದ ಜೊತೆ ಹೊಂದಾಣಿಕೆ ಆಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ಜಮಾತ್-ಎ-ಇಸ್ಲಾಮಿ ದೇಶ ಅಥವಾ ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲ, ರಾಷ್ಟ್ರದ ಆಡಳಿತ ರಚನೆಯನ್ನು ಕಡೆಗಣಿಸುತ್ತದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹಳ ಹಿಂದಿನಿಂದಲೂ ಚುನಾವಣೆಗಳನ್ನು ವಿರೋಧಿಸುತ್ತಾ ಬಂದಿದೆ. ಹಿಂದೆ ಕಾಶ್ಮೀರದಲ್ಲಿ (Kashmir) ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿತ್ತು ಎಂದು ದೂರಿದ್ದಾರೆ.
Advertisement
ವಯನಾಡಿನಲ್ಲಿರುವ ಜಮಾತ್-ಎ-ಇಸ್ಲಾಮಿ ಜಮ್ಮು-ಕಾಶ್ಮೀರದಲ್ಲಿರುವ ಸಂಘಟನೆಗಿಂತ ಭಿನ್ನ ಎಂದು ಹೇಳಿಕೊಳ್ಳುತ್ತೆ. ಆದ್ರೆ ಸಿದ್ಧಾಂತ ಒಂದೇ ಅಲ್ಲವೇ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಕೇಸ್ – ವಿವಿ ಯಾರು ಸ್ಥಾಪಿಸಿದ್ರು ಅನ್ನೋದರ ಮೇಲೆ ನಿರ್ಧರಿಸಲಾಗುತ್ತೆ: ಸುಪ್ರೀಂ
Advertisement
ಜಾತ್ಯತೀತತೆ ಪರವಾಗಿ ನಿಲ್ಲುವವರು ಎಲ್ಲಾ ರೀತಿಯ ಮತೀಯತೆಯನ್ನು ವಿರೋಧಿಸಬೇಕಲ್ಲವೇ? ಆದ್ರೆ ಕಾಂಗ್ರೆಸ್‌ನಿಂದ ಜಮಾತ್ ಎ ಇಸ್ಲಾಮಿಯನ್ನು ವಿರೋಧಿಸಲು ಸಾಧ್ಯವಿಲ್ಲ. ಏಕೆಂದರೆ ಅದರ ಬೆಂಬಲದೊಂದಿಗೆ ಕಾಂಗ್ರೆಸ್ ಸ್ಪರ್ಧೆ ಮಾಡುತ್ತಿದೆ. ಅದಕ್ಕಾಗಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಇಸ್ಲಾಮಿಯೊಂದಿಗೆ ಮೈತ್ರಿ ಉಳಿಸಿಕೊಳ್ಳಲು ತ್ಯಾಗ ಮಾಡುತ್ತಿರುವಂತೆ ತೋರುತ್ತದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಿವಾದಕ್ಕೆ ಕಾರಣವಾದ ರಾಗಾ `ರೆಡ್ ಬುಕ್’ – ಸಂವಿಧಾನ ಪ್ರತಿ ಎಂದ ಪುಸ್ತಕದಲ್ಲಿ ಖಾಲಿ ಹಾಳೆ: ಫಡ್ನವಿಸ್ ಕೌಂಟರ್
ಈ ಮಧ್ಯೆ, ವಯನಾಡ್ ಭೂಕುಸಿತದ ವೇಳೆ ಕೇರಳಕ್ಕೆ ಕರ್ನಾಟಕ ಕಾಂಗ್ರೆಸ್ ಕೂಡ ಸಾಕಷ್ಟು ರೇಷನ್ ಕಿಟ್‌ಗಳನ್ನು ಕಳಿಸಿಕೊಟ್ಟಿತ್ತು. ಅದರಲ್ಲಿ ಉಳಿದಿದ್ದ ಕೆಲವು ರೇಷನ್ ಕಿಟ್‌ಗಳನ್ನು ಈಗ ಉಪಚುನಾವಣೆಗೆ ಬಳಸಲಾಗ್ತಿದೆ ಅಂತ ಆರೋಪ ಬಂದಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸಿದ್ದರಾಮಯ್ಯ, ಡಿಕೆಶಿ ಚಿತ್ರವಿರುವ ಫುಡ್‌ಕಿಟ್‌ಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ವಯನಾಡಿನ ತೊಲ್ಪೆಟ್ಟಿಯಲ್ಲಿ ಫುಡ್ ಕಿಟ್ ಸಂಗ್ರಹಿಸಿದ್ದ ಮನೆ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: Waqf Amendment Bill | ವಿಪಕ್ಷ ನಾಯಕರಿಂದ ಜೆಪಿಸಿ ರಾಜ್ಯ ಪ್ರವಾಸ ಬಹಿಷ್ಕಾರ