ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ(Priyanka Chopra) ಮತ್ತೆ ಲಾಸ್ ಏಂಜಲೀಸ್‌ಗೆ ಹಿಂದಿರುಗಿದ್ದಾರೆ. ಇತ್ತೀಚೆಗೆ ಭಾರತಕ್ಕೆ(India) ಬಂದಿದ್ದ ಪಿಗ್ಗಿ ಮತ್ತೆ ಪತಿಯ ಮನೆಗೆ ಹಿಂದಿರುಗಿದ್ದಾರೆ. ಈನ ಬೆನ್ನಲ್ಲೇ ಮುದ್ದು ಮಗಳ ಜೊತೆಗೆ ಈಗಿಂದಲೇ ಕ್ರಿಸ್‌ಮಸ್‌ಗಾಗಿ(Christmas) ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಈ ಕುರಿತ ಪ್ರಿಯಾಂಕಾ ಫೋಟೋಸ್, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Advertisement
ಪ್ರಿಯಾಂಕಾ ಚೋಪ್ರಾ, ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜೊತೆಗೆ ಮಗಳ ಆರೈಕೆಯಲ್ಲೂ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಮುಂಬೈಗೆ ಪ್ರಿಯಾಂಕಾ ಬಂದಿದ್ದರು. ಮೂರು ವರ್ಷಗಳ ನಂತರ ಭಾರತಕ್ಕೆ ಬಂದ ಸಂಭ್ರಮವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಮೂಲಕ ಖುಷಿಯನ್ನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ:ಕನ್ನಡತಿ ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ
Advertisement
Advertisement
ಇದೀಗ ಮತ್ತೆ ಲಾಸ್ ಏಂಜಲೀಸ್‌ಗೆ ಬಂದಿಳಿದಿದ್ದಾರೆ. ಮಗಳನ್ನು ಮುದ್ದಾಡಿದ್ದಾರೆ. ಜೊತೆಗೆ ಕ್ರಿಸ್‌ಮಸ್‌ಗೆ ಭರ್ಜರಿ ತಯಾರಿ ನಡೆಯುತ್ತಿರೋದರ ಬಗ್ಗೆ ಪ್ರಿಯಾಂಕಾ ಫೋಟೋ ಶೇರ್ ಮಾಡಿದ್ದಾರೆ.
Advertisement
ಲಾಸ್ ಏಂಜಲೀಸ್‌ಗೆ ಬರುತ್ತಿದ್ದಂತೆ (ಡಿ.25)ರ ಕ್ರಿಸ್‌ಮಸ್ ಹಬ್ಬಕ್ಕೆ ತಯಾರಿ ನಡೆಯುತ್ತಿದೆ. ಮಗಳೊಂದಿಗೆ ತಯಾರಿ ಮಾಡುತ್ತಿರುವ ಫೋಟೋವನ್ನ ನಟಿ ಶೇರ್ ಮಾಡಿದ್ದಾರೆ. ಈಗಿಂದಲೇ ಕ್ರಿಸ್‌ಮಸ್‌ಗೆ ತಯಾರಿ ಮಾಡುತ್ತಿದ್ದಾರೆ. ಕ್ರಿಸ್‌ಮಸ್ ಟ್ರೀ ಕೂಡ ಮನೆಗೆ ಎಂಟ್ರಿಯಾಗಿದ್ದು, ಪ್ರಿಯಾಂಕಾ ಮನೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.