ಚೆನ್ನೈ: ಕಾಲಿವುಡ್ ನಟ ದಳಪತಿ ವಿಜಯ್ ಅವರಿಂದ ಕಲಿತ ಪಾಠವನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ರಿವೀಲ್ ಮಾಡಿದ್ದಾರೆ.
Advertisement
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, 2000ರಲ್ಲಿ ನಾನು ಮಿಸ್ ವರ್ಲ್ಡ್ ಅವಾರ್ಡ್ ಗೆದ್ದ ನಂತರ ಸಿನಿಮಾಕ್ಕೆ ನಾನು ಇನ್ನೂ ಹೊಸಬಳಾಗಿದ್ದೆ. ಮೊದಲಿಗೆ ತಮಿಝನ್ ಎಂಬ ತಮಿಳು ಚಿತ್ರ ಹಾಗೂ ಅಂದಾಜ್ ಮತ್ತು ದಿ ಹೀರೋ ಎಂಬ ಎರಡು ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದೆ. ನನಗೆ ಈಗಲೂ ನೆನಪಿದೆ ಸೆಟ್‍ಗೆ ಹೋದಾಗ ನನಗೆ ಏನು ಸಹ ತಿಳಿದಿರಲಿಲ್ಲ. ನಟನೆ ಎಂಬುದು ನಿಜವಾಗಿಯೂ ನೀವು ಧರಿಸುವ ಡ್ರೆಸ್ ಹಾಗೂ ಮೇಕಪ್ ಗೆ ಸಂಬಂಧಿಸುತ್ತದೆ. ನಾನು ಸೆಟ್‍ಗೆ ಹೋದಾಗ ಕಾಗದದ ಮೇಲೆ ನೀಡಿರುವ ಡೈಲಾಂಗ್ ತೆಗೆದುಕೊಂಡು ಪಾತ್ರಕ್ಕೆ ಜೀವ ತುಂಬಿಸುವುದು ಹೇಗೆ ಎಂದು ಯೋಚಿಸುತ್ತಿದ್ದೆ. ಈ ಅನುಭವ ಬಹಳ ಕಷ್ಟಕರವಾಗಿತ್ತು.
Advertisement
Advertisement
ನಾನು ಡೈಲಾಗ್ ಫೋನೆಟಿಕ್ ಆಗಿ ಕಲಿಯುತ್ತಿದ್ದೆ. ನಂತರ ಅದನ್ನು ಕಂಠಪಾಠ ಮಾಡುತ್ತಿದ್ದೆ. ಅದರ ಹಿಂದಿನ ಅರ್ಥವನ್ನು ಅರ್ಥಮಾಡಿಕೊಳ್ಳುತ್ತಿದ್ದೆ ಮತ್ತು ನಂತರ ನನ್ನ ಸಾಲುಗಳನ್ನು ಹೇಳುತ್ತಿದ್ದೆ. ಈ ವೇಳೆ ನನ್ನ ನನ್ನ ಕೋ ಸ್ಟಾರ್ ವಿಜಯ್ ಅವರನ್ನು ನೋಡಿದೆ. ನನ್ನ ಜೀವನದ ಪ್ರಮುಖ ವ್ಯಕ್ತಿಗಳಲ್ಲಿ ಅವರು ಸಹ ಒಬ್ಬರು. ಅವರು ವಿಶಾಲವಾದ ಹೃದಯವನ್ನು ಹೊಂದಿದ್ದಾರೆ. ಒಂದು ಬಾರಿ ಸೆಟ್‍ಗೆ ಅವರು ಬಂದರೆ ಮತ್ತೆ ಸೆಟ್‍ನಿಂದ ಹೊರಹೋಗುತ್ತಿರಲಿಲ್ಲ. ನಾನು ಕೂಡ ಅದನ್ನು ಪಾಲಿಸುತ್ತೇನೆ. ಚಿತ್ರೀಕರಣದ ವೇಳೆ ನನ್ನ ಟ್ರೇಲರ್‌ಗೆ ನಾನು ಹೋಗುವುದು ಬಹಳ ಕಡಿಮೆ. ಇಲ್ಲದಿದ್ದರೆ ಬಹಳಷ್ಟು ಹೊತ್ತು ಕಾಯಬೇಕಾಗುತ್ತದೆ. ನಾನು ಸಾಮಾನ್ಯವಾಗಿ ಸೆಟ್‍ನಲ್ಲಿಯೇ ಸುತ್ತಾಡುತ್ತಿರುತ್ತೇನೆ. ನಾವು ಏಕೆ ಡಿಫರೆಂಟ್ ಶಾಟ್‍ಗಳನ್ನು ತೆಗೆದುಕೊಳ್ಳುತ್ತಿರುತ್ತೇವೆ ಎಂದು ತಿಳಿಯಲು ಹೆಚ್ಚಾಗಿ ಯೋಚಿಸುತ್ತಿರುತ್ತೇನೆ. ನಾನು ಸಿಬ್ಬಂದಿಯೊಂದಿಗೆ ಮಾತನಾಡಲು ಬಯಸುತ್ತೇನೆ. ನಾನು ಯಾವಾಗಲೂ ಎಲ್ಲರ ಮಧ್ಯೆ ಇರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಊ ಅಂತಾವಾ’ ವಿವಾದದ ಕುರಿತು ಮೌನ ಮುರಿದ ದೇವಿ ಶ್ರೀ ಪ್ರಸಾದ್
Advertisement
ಪ್ರಿಯಾಂಕಾ ಚೋಪ್ರಾ ಅವರು ದಳಪತಿ ವಿಜಯ್ ಜೊತೆಗೆ ತಮಿಝನ್ ಎಂಬ ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದರು. ನಟನೆ ಅಷ್ಟೇ ಅಲ್ಲದೇ ಡಿ ಇಮ್ಮಾನ್ ಸಂಯೋಜಿಸಿರುವ ಉಲ್ಲತೈ ಕಿಲ್ಲಾತೆ ಎಂಬ ಹಾಡನ್ನು ಸಹ ಹಾಡಿದ್ದಾರೆ. ಇದನ್ನೂ ಓದಿ: ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!