ತನ್ನ ಜೀವನದ ರಿಯಲ್ ಚಾಂಪಿಯನ್ ಯಾರೆಂಬುದನ್ನು ತಿಳಿಸಿದ ಪ್ರಿಯಾಂಕಾ ಚೋಪ್ರಾ

Public TV
1 Min Read
priyanka resize

ಲಾಸ್ ಏಂಜಲಿಸ್: 2018 ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಬಾಕ್ಸರ್ ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಆಗಿರುತ್ತಾರೆ ಎಂದು ಸ್ಟಾರ್ ನಟಿ ಪ್ರಿಯಾಂಕ ಚೋಪ್ರಾ ಹೇಳಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಚೋಪ್ರಾ ನನ್ನ ಸ್ನೇಹಿತೆಯ ಈ ಸಾಧನೆ ನನಗೆ ಹೆಮ್ಮೆ ತಂದಿದೆ. ಮೇರಿ ಕೋಮ್ ಎಂದಿಗೂ ನನ್ನ ಚಾಂಪಿಯನ್ ಎಂದು ಶುಭಾಶಯ ಕೋರಿದ್ದಾರೆ. ಈ ಹಿಂದೆ ಪ್ರಿಯಾಂಕ ಚೋಪ್ರಾ ಅವರು ಮೇರಿ ಕೋಮ್ ಅವರ ಜೀವನಾಧಾರಿತ ಚಿತ್ರದಲ್ಲಿ ಅಭಿನಯಿಸಿದ್ದರು, ಈ ಚಿತ್ರವನ್ನು ನಿರ್ದೇಶನ ಮಾಡಿದ್ದ ಓಮುಂಗ್ ಕುಮಾರ್ ಸಹ ಮೇರಿ ಕೋಮ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

03priyanka chopra3

2008 ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದಿದ್ದ ಮೇರಿ ಕೋಮ್ ಅವರ ಜೀವನ ಪ್ರಯಾಣವನ್ನು ಆಧರಿಸಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಚಿತ್ರವೂ 2014 ರಲ್ಲಿ ತೆರೆಗೆ ಬಂದಿತ್ತು.

ಆಸ್ಟೇಲಿಯಾದ ಗೋಲ್ಟ್ ಕಾಸ್ಟ್ ನಲ್ಲಿ ನಡೆಯುತ್ತಿರುವ 2018ರ ಕಾಮನ್ ವೆಲ್ಸ್ ಮಹಿಳೆಯರ ಬಾಕ್ಸಿಂಗ್ ನಲ್ಲಿ ಫೈನಲ್ ಪ್ರವೇಶಿದ್ದ ಮೇರಿ ಕೋಮ್ 45-48 ಕೆ.ಜಿ. ಬಾಕ್ಸಿಂಗ್ ಚಿನ್ನದ ಪದಕ ಗಳಿಸಿದ್ದಾರೆ. ಫೈನಲ್ ಪಂದ್ಯದಲ್ಲಿ ಐರ್ಲೆಂಡಿನ ಕ್ರಿಸ್ಟಿನಾ ಹೊರಾ ಅವರನ್ನು 5-0 ಅಂತರರಿಂದ ಮಣಿಸಿದ ಮೇರಿ ಕೋಮ್ ಚಿನ್ನದ ಪದಕ ಗೆದಿದ್ದರು. ಈಗಾಗಲೇ ಐದು ಬಾರಿ ವಿಶ್ವಚಾಂಪಿಯನ್ ಪಟ್ಟ ಗಳಿಸಿರುವ ಕೋಮ್ ಭಾರತ ಬಾಕ್ಸಿಂಗ್ ಶಕ್ತಿಯನ್ನು ಮತ್ತೊಮ್ಮೆ ವಿಶ್ವ ಮಟ್ಟದಲ್ಲಿ ತೆರೆದಿಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *