– ಪ್ರಜ್ವಲ್‌ಗೇ ಖಿನ್ನತೆ ಆಗಿದ್ರೆ ಸಂತ್ರಸ್ತೆಯರ ಪರಿಸ್ಥಿತಿ ಏನು ಎಂದು ಪ್ರಶ್ನೆ
ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಸಲೂನ್ ಹೋಗಿ, ಕ್ಲೀನ್ ಆಗಿ ಬಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದಿಯಾ? ಇವರಿಗೇ ಖಿನ್ನತೆ ಆಗಿದ್ದರೇ ಸಂತ್ರಸ್ತೆಯರ ಪರಿಸ್ಥಿತಿ ಏನು? ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಪ್ರಜ್ವಲ್ ವೀಡಿಯೋವೊಂದನ್ನ ರಿಲೀಸ್ ಮಾಡಿರೋದು ಅಚ್ಚರಿ ಆಗುತ್ತಿದೆ. 6-7 ಹಂತಹಳ ಚುನಾವಣೆ (Lok Sabha Elections) ಆದ್ಮೇಲೆ ಹೊರಬಂದಿದ್ದಾರೆ. 30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ? ನಿಮ್ಮ ಸ್ವಾಭಿಮಾನ, ಕುಟುಂಬದ ಮರ್ಯಾದೆಗಿಂತಲೂ ದೊಡ್ಡದು ವಿದೇಶದಲ್ಲಿ ಏನಿತ್ತು? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್’ ಖಾತೆ ಮಾಡಿಸಲು ಮಹಿಳೆಯರ ಕ್ಯೂ
ಅಮಿತ್ ಶಾ (Amit Shah) ಅವರೋ ಅಥವಾ ಬಿಜೆಪಿಯವರೋ (BJP) ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಕೇಸ್ – ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು
30 ದಿನಗಳು ಬೇಕಾ ಇವರು ಸ್ಪಂದಿಸೋದಕ್ಕೆ? ಪ್ರಜ್ವಲ್ ಅಷ್ಟು ಕ್ಲೀನ್ ಆಗಿದ್ದಿದ್ದರೆ ಮೊದಲ ದಿನವೇ ರಿಯಾಕ್ಟ್ ಮಾಡಬೇಕಿತ್ತು. ಕುಂಭಕರ್ಣ ನಿದ್ರೆಯಿಂದ ಎದ್ದಮೇಲೆ ರಾಹುಲ್ ಗಾಂಧಿ.. ರಾಹುಲ್ ಗಾಂಧಿ ಅಂದ್ರೆ? ಇವರಿಗೆ ಇದೆಲ್ಲ ರಾಹುಲ್ ಗಾಂಧಿ ಹೇಳಿಕೊಟ್ಟರಾ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತಾಡಿದ್ರು. ಅವರೆಲ್ಲರನ್ನೂ ಬಿಟ್ಟು ಕೇವಲ ರಾಹುಲ್ ಗಾಂಧಿ ಬಗ್ಗೆ ಯಾಕೆ ಮಾತಾಡ್ತಿದ್ದೀರಿ? ಇದರ ನಿರ್ದೇಶಕರು ಅಮಿತ್ ಶಾ ಅವರೇ ಇರಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ