ಬೆಂಗಳೂರು: ಪವರ್ ಶೇರಿಂಗ್ ವಿಚಾರದಲ್ಲಿ ಹೈಕಮಾಂಡ್ ಎಲ್ಲವನ್ನೂ ತೀರ್ಮಾನ ಮಾಡುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ಸಿಎಂ ಹಾಗೂ ಡಿಸಿಎಂ ಜೊತೆಗಿನ ಸಭೆ ವಿಚಾರ ನನಗೆ ಗೊತ್ತಿಲ್ಲ. ಖರ್ಗೆಯವರು ಏನು ಹೇಳಿದ್ದಾರೆ? ಅಗತ್ಯ ಇದ್ದಾಗ ಕರೆದು ಮಾತನಾಡುತ್ತೇವೆ ಎಂದಿದ್ದಾರೆ. ನಾನು ಡಿ.ಕೆ.ಶಿವಕುಮಾರ್ ಭೇಟಿಯಲ್ಲಿ ಏನು ವಿಶೇಷ ಇದೆ? ನಾನು ಡಿಸಿಎಂ ಭೇಟಿ ಮಾಡದೆ ಕೇಶವ ಕೃಪಕ್ಕೆ ಹೋಗೋಕೆ ಆಗುತ್ತಾ? ನಾಳೆ ದಿನ ಖರ್ಗೆ ಅವರ ಭೇಟಿಗೂ ಕೇಳಿದರೆ ಏನು ಹೇಳೋದು ಎಂದು ಪ್ರಶ್ನಿಸಿದರು.
ನಾಯಕತ್ವ ವಿಚಾರವಾಗಿ ಹೈಕಮಾಂಡ್ ಮೀಟಿಂಗ್ ಬಗ್ಗೆ ಸದ್ಯಕ್ಕೆ ಅಧಿಕೃತ ಮಾಹಿತಿ ಇಲ್ಲ. ಖರ್ಗೆ ಸಾಹೇಬ್ರು ಹೇಳಿದ್ರೆ ಸಭೆ ಆಗುತ್ತೆ. ಅಧಿಕೃತ ಆಹ್ವಾನ ಯಾರೂ ನೀಡಿಲ್ಲ. ಎಐಸಿಸಿ ಅಧ್ಯಕ್ಷರು ಕರೆದರೆ ಎಲ್ಲರೂ ಹೋಗ್ತಾರೆ. ಸಮಯ ಪ್ರಜ್ಞೆ ಹೈಕಮಾಂಡ್ ನಾಯಕರಿಗಿದೆ. 130 ವರ್ಷಗಳಿಂದ ಇದೆ ತರಹ ನಡೆದುಕೊಂಡು ಬಂದಿದೆ. ಇದು ಇವತ್ತು ನಿನ್ನೆಯದಲ್ಲ. ನಿಮಗೆ ಹೇಗೆ ಗೊತ್ತು ಹೈಕಮಾಂಡ್ ಕರೆಯುತ್ತೆ ಅಂತ? ದೆಹಲಿಯಿಂದ ಸಂದೇಶ ಬರಲಿ. ಸಿಎಂ, ಡಿಸಿಎಂ ಇಬ್ಬರೂ ಹೋಗ್ತಾರೆ ಎಂದು ತಿಳಿಸಿದರು.
ಸಮಯ ಪ್ರಜ್ಞೆ ಹೈಕಮಾಂಡ್ ನಾಯಕರಿಗಿದೆ. ಅವರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ. ಸಿಎಂ, ಡಿಸಿಎಂ ನಡುವೆ ಪೋಸ್ಟ್ ವಾರ್ ವಿಚಾರದಲ್ಲಿ ಸುಮ್ಮನೆ ಹಾಗೆ ಪೋಸ್ಟ್ ಮಾಡಿದ್ರೆ ಒಪ್ಪುತಿದ್ದೆ. ಮೊನ್ನೆ ಭಾಷಣ ಮಾಡಿದ್ದನ್ನು ಪೋಸ್ಟ್ ಮಾಡಿದ್ದಾರೆ. ಅದನ್ನೇ ಮಾಧ್ಯಮ ಹಾಗೂ ಬಿಜೆಪಿ ಸುದ್ದಿ ಮಾಡುತ್ತಿದ್ದೀರಾ ಎಂದರು.

