– ಉತ್ತರ ಕೊಡಬೇಕಾದ ಪ್ರಧಾನಿ ಎಲ್ಲಿದ್ದಾರೆ ಅಂತ ವ್ಯಂಗ್ಯ
ಬೆಂಗಳೂರು: ದೇಶದ ವಿದೇಶಾಂಗ ನೀತಿಯನ್ನು ಯಾರು ತೀರ್ಮಾನ ಮಾಡ್ತಾರೆ. ಪ್ರಧಾನಿ ಮೋದಿಯವರಾ ಅಥವಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅವರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಪ್ರಶ್ನಿಸಿದರು.
ಬೆಂಗಳೂರಿನಲ್ಲಿ(Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಸಿಂಧೂರ(Operation Sindoor) ಬಗ್ಗೆ ಮಾತನಾಡಿದ ನಾಯಕರನ್ನ ಪಾಕಿಸ್ತಾನಕ್ಕೆ ಕಳಿಸಬೇಕೆಂದು ಬಿಜೆಪಿ ನಾಯಕರು ಹೇಳ್ತಾರೆ. ಬಹಳ ಸ್ಪಷ್ಟವಾಗಿ ಮೊದಲ ದಿನದಿಂದಲೂ ಯಾವುದೇ ನಿರ್ಧಾರ ಇದ್ದರೂ ಸರ್ಕಾರದ ಜೊತೆ ಇದ್ದೇವೆ ಎಂದು ಹೇಳಿದ್ದೇವೆ. ಕದನ ವಿರಾಮ ನಿಮ್ಮಿಂದ ಆಗಿದ್ರೆ ಬಹಳ ಸಂತೋಷ. ಅದನ್ನ ಡೊನಾಲ್ಡ್ ಟ್ರಂಪ್ ಯಾಕೆ ಘೋಷಣೆ ಮಾಡ್ತಾರೆ. ನಿಮ್ಮ ಹೇಳಿಕೆಗೆ, ಅಮೆರಿಕ ಅಧ್ಯಕ್ಷರ ಹೇಳಿಕೆಗೆ ವ್ಯತ್ಯಾಸ ಯಾಕಿದೆ ಎಂದರು. ಇದನ್ನೂ ಓದಿ: ಮಗನಿಗೆ ಇನ್ನೊಂದು ವಾರದಲ್ಲಿ ಮದುವೆ ನಿಶ್ಚಿತಾರ್ಥ ಇತ್ತು: ಹತ್ಯೆಯಾದ ಟೆಕ್ಕಿಯ ತಂದೆ ಕಣ್ಣೀರು
ನನ್ನಿಂದ ಕದನ ವಿರಾಮ(Ceasefire) ಆಗಿದೆ ಎಂದು ಏಳನೇ ಬಾರಿ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಪ್ರೆಸ್ ಸೆಕ್ರೆಟರಿ, ಟ್ರಂಪ್ ಅವರಿಗೆ ಕದನ ವಿರಾಮದ ಕ್ರೆಡಿಟ್ ಸಿಗ್ತಿಲ್ಲ ಎಂದು ಅಫಿಶಿಯಲ್ ಆಗಿ ಹಾಕ್ತಾರೆ. ನಾವು ಕೇಳಿದ್ದು, ನಮ್ಮ ವಿದೇಶಾಂಗ ನೀತಿಯ ತೀರ್ಮಾನ ತೆಗೆದುಕೊಳ್ತಿರೋದು ಯಾರು? ನರೇಂದ್ರ ಮೋದಿಯವರಾ ಅಥವಾ ಡೊನಾಲ್ಡ್ ಟ್ರಂಪ್ ಅವರಾ ಎಂದು ಕೇಳಿದರು. ಇದನ್ನೂ ಓದಿ: ಜ್ಯೂ.ಎನ್‌ಟಿಆರ್ ಹುಟ್ಟುಹಬ್ಬದಂದು ಪ್ರಶಾಂತ್ ನೀಲ್ ಜೊತೆಗಿನ ಚಿತ್ರದಿಂದ ಅಪ್‌ಡೇಟ್ ಸಿಗಲ್ಲ, ಯಾಕೆ?
ಆಪರೇಷನ್ ಸಿಂಧೂರದ ಬಗ್ಗೆ ಮಾತಾಡಿದ್ದೇವಾ. ಸೇನಾ ಪಡೆಗೆ ಇವರು ಕೊಟ್ಟಿರುವ ದಾಖಲೆ ಬಗ್ಗೆ ಮಾತಾಡಿದ್ದೇವಾ? ಸೈನಿಕರಿಗೆ ಅಗೌರವ ಮಾಡ್ತಿರೋದು ಬಿಜೆಪಿ. ಸೋಫಿಯಾ ಖುರೇಷಿ ಬಗ್ಗೆ ಮಧ್ಯಪ್ರದೇಶದ ಸಚಿವರು ಮಾತಾಡ್ತಾರೆ. ಯಾಕೆ ಅವರನ್ನ ಸಚಿವ ಸಂಪುಟದಿಂದ ವಜಾ ಮಾಡ್ತಿಲ್ಲ. ಇವರಿಂದ ನಾವು ಕಲಿಯಬೇಕಾ? ಅದರ ಬಗ್ಗೆ ಬಿಜೆಪಿಯವರು ಮಾತಾಡ್ತಾರಾ, ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಲೇಜಿನ ನಾಲ್ಕನೇ ಮಹಡಿಯಿಂದ ಬಿದ್ದು ಏರೋಸ್ಪೇಸ್ ಎಂಜಿನಿಯರ್ ಸಾವು
ವಿದೇಶಾಂಗ ನೀತಿ ಬಗ್ಗೆ ಅಮೆರಿಕದ ಅಧ್ಯಕ್ಷರು ಮಾತಾಡ್ತಾರೆ. 100 ದೇಶ ಸುತ್ತಿ 200 ಜನರನ್ನ ಅಪ್ಪಿಕೊಂಡ್ರಲ್ಲ ಏನಾಯ್ತು? ಮೇಕ್ ಇನ್ ಇಂಡಿಯಾ ಮಾಡಬಾರದು. ಆಪಲ್ ಮಾಡಬಾರದು ಅಂತ ನೇರವಾಗಿ ಹೇಳ್ತಾರೆ. ತೆರಿಗೆಯನ್ನ ಶೂನ್ಯ ಮಾಡಿದ್ದೀರಾ ಎಂದು ಡೊನಾಲ್ಡ್ ಟ್ರಂಪ್ ಹೇಳ್ತಾರೆ. ಅದಕ್ಕೆ ಯಾರಾದ್ರು ಉತ್ತರ ಕೊಟ್ಟಿದ್ದೀರಾ. ಇದಕ್ಕೆ ಉತ್ತರ ಕೊಡಬೇಕಾದವರು ಯಾರು? ಇದಕ್ಕೆ ವಿಜಯೇಂದ್ರ, ಅಶೋಕ್ ಉತ್ತರ ಕೊಡ್ತಾರಾ? ಉತ್ತರ ಕೊಡಬೇಕಾದವರು ಪ್ರಧಾನಿ ಮೋದಿ(Narendra Modi), ಎಲ್ಲಿದ್ದಾರೆ ಅವರು ಎಂದು ಪ್ರಶ್ನಿಸಿದ್ದಾರೆ.