ಬೆಂಗಳೂರು: ಬಿಜೆಪಿ (BJP) ಅವರಿಂದ ಮತಗಳ್ಳತನ ಆಗುತ್ತಿದೆ ಎಂದು ನಾವು ಹೇಳಿದ್ವಿ. ಈಗ ಸಾರ್ವಜನಿಕವಾಗಿ ಮಾಹಿತಿ ಬರುತ್ತಿದೆ. ಒಂದು ವೋಟು ಡಿಲೀಟ್ ಮಾಡೋಕೆ 80 ರೂ. ತೆಗೆದುಕೊಂಡಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ (Priyank Kharge) ಟಾಂಗ್ ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಆಳಂದ ಫೈಲ್ಸ್ ಬಗ್ಗೆ ಎಸ್‌ಐಟಿ ತನಿಖೆ ಮುಗಿದಿಲ್ಲ, ಇನ್ನೂ 10 ದಿನ, ವಾರ ಆಗಬಹುದು. ಹಲವು ಸಾಕ್ಷಿಗಳು ಸಿಕ್ಕಿವೆ ಎನ್ನಲಾಗಿದೆ. ದಾಖಲೆ ಮುಂದಿಟ್ಟು ಚುನಾವಣಾ ಆಯೋಗವನ್ನ ಕೇಳುತ್ತೇವೆ, ದಾಖಲೆ ಕೊಟ್ಟು ಮಾತಾಡ್ತೀವಿ. ಇದು ಆಳಂದದ ಪ್ರಶ್ನೆ ಅಲ್ಲ, ಇಡೀ ವ್ಯವಸ್ಥೆಯ ಪ್ರಶ್ನೆ ಎಂದು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಜೋರಾದ ಉತ್ತರಾಧಿಕಾರಿ ಕದನ – ಯತೀಂದ್ರ ವಿರುದ್ಧ ಶಿಸ್ತುಕ್ರಮವೋ? ಸಿಎಂ ಪುತ್ರ ಅಂತ ಎಚ್ಚರಿಕೆಯೋ?
ಫ್ರೀ ಆಂಡ್ ಫೇರ್ ಎಲೆಕ್ಷನ್ ಅಂತಾರೆ, ಫ್ರೀನೂ ಇಲ್ಲ. ಫೇರ್ ಕೂಡ ಇಲ್ಲ. ಹಣ ಕೊಟ್ಟು ಕೊಂಡುಕೊಳ್ತಾರೆ ಅಂದ್ರೆ ಹೇಗೆ? ಚುನಾವಣಾ ಆಯೋಗ ಈ ಬಗ್ಗೆ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸಚಿವ ಎಂ.ಬಿ.ಪಾಟೀಲ್ ಕೂಡ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿ ಏನು ಹೇಳಿದ್ರು? ಏನು ಆರೋಪ ಮಾಡಿದ್ರು ಎಂದು ಈಗ ಗೊತ್ತಾಗ್ತಿದೆ. ಒಂದು ವೋಟ್ ಚೋರಿಗೆ 80 ರೂಪಾಯಿ ಅಂತೆ. ಪ್ರತಿ ಸಲ ಸಾಕ್ಷಿ ಕೊಡಿ, ಸಾಕ್ಷಿ ಕೊಡಿ ಅಂತಿದ್ದರು. ಅವರಿಗೆ ಅಫಿಡವಿಟ್ ನೀವು ಕೇಳ್ತೀರಾ? ಈಗ ಬಿಜೆಪಿ ಹಾಗೂ ಎಲೆಕ್ಷನ್ ಕಮಿಷನ್ ಹೇಳಲಿ. ನವೆಂಬರ್ ಕ್ರಾಂತಿ ಅಲ್ಲ, ಈಗ ಎಲೆಕ್ಷನ್ ಕಮಿಷನ್ ಕ್ರಾಂತಿ ಎಂಧು ಟಕ್ಕರ್ ಕೊಟ್ಟಿದ್ದಾರೆ.ಇದನ್ನೂ ಓದಿ: ಆಳಂದ ವೋಟ್ ಚೋರಿ ಕೇಸಲ್ಲಿ ಯಾರೇ ಇದ್ರೂ ಸರ್ಕಾರ ಕ್ರಮ ತೆಗೆದುಕೊಳ್ಳಲಿ – ರವಿಕುಮಾರ್

