– ಸಿಎಂ ರಾಜೀನಾಮೆ ಕೊಡುವ ಅವಶ್ಯಕತೆಯಿಲ್ಲ ಎಂದ ಸಚಿವ
ಬೆಂಗಳೂರು: ಮುಡಾ (MUDA) ಸಂಬಂಧ ಏನೇ ತನಿಖೆ ನಡೆಯಲಿ ಯಾವುದೇ ಕಾರಣಕ್ಕೂ ಸಿಎಂ ಸಿದ್ದರಾಮಯ್ಯ (CM Siddaramaiah) ರಾಜೀನಾಮೆ ಕೊಡುವುದಿಲ್ಲ ಎಂದು ಸಿಎಂ ಪರ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಬ್ಯಾಟಿಂಗ್ ಮಾಡಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಸಿಎಂ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶ ನೀಡಿದ ಬಳಿಕ ಪ್ರತಿಕ್ರಿಯಿಸಿದರು.
Advertisement
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳವಾರ ಹೈಕೋರ್ಟ್ ಸೂಕ್ಷ್ಮವಾಗಿ ತನಿಖೆಗೆ ಆದೇಶ ಮಾಡಿದೆ. 17ಎ ಅಡಿ ತನಿಖೆಗೆ ಅನುಮತಿ ಕೊಟ್ಡಿದೆ. ಕೋರ್ಟ್ 218 ಬಿಎನ್‌ಎಸ್‌ಎಸ್ (Bharatiya Nagarik Suraksha Sanhita) ಅಡಿ ತಿರಸ್ಕಾರ ಮಾಡಿದೆ. ಸಿಎಂ ಕೂಡಾ ತನಿಖೆ ಮಾಡಲಿ ಎಂದು ಹೇಳಿದ್ದಾರೆ. ನಾವೇ ಮೊದಲು ನ್ಯಾಯಾಂಗ ರಚನೆ ಮಾಡಿದ್ದೇವೆ. ನಾವು ತನಿಖೆಯಿಂದ ಹಿಂದೆ ಸರಿಯಲ್ಲ. ತನಿಖೆ ಆಗಲಿ ಎಂದು ತಿಳಿಸಿದರು.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!
Advertisement
Advertisement
ರಾಜ್ಯಪಾಲರ (Governer) ಕಚೇರಿ ದುರ್ಬಳಕೆ ಆಗಿದೆ. ಬಿಜೆಪಿಗೆ (BJP) ರಾಜ್ಯಪಾಲರು ಸ್ಟೇಷನ್ ಹೌಸ್ ಆಗಿದ್ದಾರೆ. ರಾಜ್ಯಪಾಲರು ಕಾನೂನು ಪ್ರಕಾರ ಆದೇಶ ಕೊಡಬೇಕು. ಆದರೆ ಅದನ್ನು ಮಾಡಿಲ್ಲ. ಹೀಗಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎಂದಿದ್ದಾರೆ.
Advertisement
ಸಿಎಂ ರಾಜೀನಾಮೆ ಕೇಳುವ ಬಿಜೆಪಿ ಅವರಿಗೆ ನೈತಿಕತೆ ಇದೆಯಾ? ಯಡಿಯೂರಪ್ಪ ಕೇಸ್ (Yadiyurappa Case) ಬಗ್ಗೆ, ಮುನಿರತ್ನ ಬಗ್ಗೆ ಮಾತಾಡಿದ್ದಾರಾ, ಪ್ರಜ್ವಲ್ ಕೇಸ್ ಬಗ್ಗೆ ಮಾತಾಡಿದ್ದಾರಾ? ಎಲ್ಲಿ ಹೋಗಿತ್ತು ಇವರ ನೈತಿಕತೆ? ವಿಜಯೇಂದ್ರ (Vijayendra) ಮೇಲೂ ಕೇಸ್ ಇದೆ. ಇವರು ನಮಗೆ ನೈತಿಕತೆ ಹೇಳೋದಾ? ಎಂದು ಕಿಡಿಕಾರಿದರು.
ತನಿಖೆ ಆಗದೇ ಗಲ್ಲಿಗೆ ಹಾಕುವುದು ಎಷ್ಟು ಸರಿ. ನೈತಿಕತೆ ಬಗ್ಗೆ ಮಾತಾಡುವ ಇಚ್ಛೆಯಿದ್ದರೆ ಬಿಜೆಪಿ ಅವರು ಬರಲಿ. ಗಾಂಧಿ ಪ್ರತಿಮೆ ಮುಂದೆ ಚರ್ಚೆಗೆ ಬರಲಿ ಎಂದು ಸವಾಲ್ ಹಾಕಿದ್ದಾರೆ.ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ನ್ಯಾ.ಸಂತೋಷ್ ಹೆಗ್ಡೆ