ಮುಂಬೈ: ಬಾಲಿವುಡ್ ಸಿನಿಮಾಗಳಲ್ಲಿ ದಕ್ಷಿಣ ಭಾರತದ ಕಲಾವಿದರೂ ಹಿಂದಿಯನ್ನು ಅಸಾಧಾರಣವಾಗಿ ಮಾತನಾಡುತ್ತಿರುವುದಾಗಿ ಬಿಗ್ ಸ್ಕ್ರೀನ್ ಮೇಲೆ ತೋರಿಸಲಾಗುತ್ತಿದೆ ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ.
ನಟಿ ಶ್ರೀದೇವಿ, ರೇಖಾ ಮತ್ತು ಹೇಮಾ ಮಾಲಿನಿಯಂತಹ ಕಲಾವಿದರ ಬಳಿಕ ಹಿಂದಿ ಸಿನಿಮಾದಲ್ಲಿ ದಕ್ಷಿಣ ಭಾರತೀಯರಿಗೆ ಪ್ರಾತಿನಿಧ್ಯದ ಕೊರತೆ ಇತ್ತು. ಆದರೆ ಈಗ ಎಲ್ಲ ಬದಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು
Advertisement
Advertisement
ಇತ್ತೀಚೆಗಷ್ಟೇ ಸಂದರ್ಶವೊಂದರಲ್ಲಿ ಮಾತನಾಡಿದ ಅವರು, ಕೊನೆಗೂ ದಕ್ಷಿಣ ಭಾರತದ ಕಲಾವಿದರ ಪ್ರತಿಭೆಗೆ ಮನ್ನಣೆ ಸಿಗುತ್ತಿದೆ. ಈ ಹಿಂದಿ ಶ್ರೀದೇವಿ, ರೇಖಾ, ಹೇಮಾ ಮಾಲಿನಿ, ವೈಜಯಂತಿಮಾಲಾ ಮುಂತಾದವರು ಬಾಲಿವುಡ್ ಆಳಿದ ಕಾಲವಿತ್ತು. ನಂತರ ಬಾಲಿವುಡ್ನಲ್ಲಿ ಹಿಂದಿ ಮಾತನಾಡುವ ಕಲಾವಿದರೂ ಮಾತ್ರ ಇದ್ದರು. ಆದರೆ ಇದೀಗ ದಕ್ಷಿಣ ಭಾರತದ ಕಲಾವಿದರಾದ ಚೆನ್ನೈನವರಾಗಿರಬಹುದು, ಕೇರಳದವರಾಗಿರಬಹುದು ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರು ಹಿಂದಿ ಬರದಿದ್ದರೂ ಮಾತನಾಡುತ್ತಾರೆ. ಇದು ನೋಡಲು ನನಗೆ ಬಹಳ ತಮಾಷೆಯಾಗಿ ಕಾಣಿಸುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ನಾನು ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ ಮತ್ತು ದಕ್ಷಿಣ ಭಾರತೀಯರು ಹಿಂದಿಯನ್ನು ಮಾತನಾಡುವ ವರ್ಷನ್ ಬೇರೆಯಾಗಿರುತ್ತದೆ ಅಷ್ಟೇ. ಕೆಲವರು ಮಾತ್ರ ಸ್ಪಷ್ಟವಾಗಿ ಉಚ್ಛರಿಸುತ್ತಾರೆ. ಆದರೆ ಒಂದು ಹಂತದ ಬಳಿಕ ಇದು ಬಾಲಿವುಡ್ ತಂತ್ರಜ್ಞಾನರನ್ನು ಸೆಳೆಯಲು ಪ್ರಾರಂಭಿಸಿತು. ಇದೀಗ ಸಾಕಷ್ಟು ದಕ್ಷಿಣ ಭಾರತದ ತಂತ್ರಜ್ಞರು ಬಾಲಿವುಡ್ಗೆ ಬಂದು ತಮ್ಮ ಛಾಪು ಮೂಡಿಸುತ್ತಿರುವುದನ್ನು ನೋಡಬಹುದಾಗಿದೆ. ಕೊನೆಗೂ ದಕ್ಷಿಣ ಭಾರತದ ಪ್ರತಿಭೆಗಳು ಬಾಲಿವುಡ್ ಮಿಂಚುತ್ತಿದ್ದಾರೆ ಮತ್ತು ದಕ್ಷಿಣದ ಸ್ಟಾರ್ ನಟರು ಬಾಲಿವುಡ್ನಲ್ಲಿ ಅವಕಾಶ ಪಡೆಯುತ್ತಿರುವುದು ನನಗೆ ಬಹಳ ಸಂತೋಷವಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ
ಪ್ರಿಯಾಮಣಿ ಅವರು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2013 ರಲ್ಲಿ ತೆರೆಕಂಡ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಹೆಜ್ಜೆಹಾಕಿದ್ದರು. ಇತ್ತೀಚೆಗಷ್ಟೆ ದಿ ಫ್ಯಾಮಿಲಿ ಮ್ಯಾನ್-2 ಸೀಸನ್ನಲ್ಲಿ ಮನೋಜ್ ಬಾಜ್ಪೇಯಿ ಅವರ ಪತ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಮೆಜಾನ್ ಪ್ರೈಮ್ನಲ್ಲಿ ಈ ವೆಬ್ ಸೀರಿಸ್ ಬಿಡುಗಡೆಗೊಂಡು ಸಾಕಷ್ಟು ಹಿಟ್ ಪಡೆದುಕೊಂಡಿತ್ತು.