ಬಹುಭಾಷಾ ನಟಿ ಪ್ರಿಯಾಮಣಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪ್ರಿಯಾಮಣಿ ವೈಟ್ ಡ್ರೆಸ್‌ನಲ್ಲಿ ಹಾಟ್ ಲುಕ್‌ನಿಂದ ಗಂಡ್ ಹೈಕ್ಳ ನಿದ್ದೆಗೆಡಿಸಿದ್ದಾರೆ. ನಯ ಅವತಾರದ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.
ಪುನೀತ್ ನಟನೆಯ `ರಾಮ್’ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ, ನಂತರ ಸಾಲು ಸಾಲು ಕನ್ನಡ ಚಿತ್ರದ ಮೂಲಕ ಮೋಡಿ ಮಾಡಿದ್ದರು. ಟಾಲಿವುಡ್ ಮತ್ತು ಬಾಲಿವುಡ್‌ನಲ್ಲೂ ಬಹುಬೇಡಿಕೆಯ ನಟಿಯಾಗಿ ಮಿಂಚ್ತಿದ್ದಾರೆ. ಈಗ ಸಿನಿಮಾಗಳ ಮಧ್ಯೆ ಕೊಂಚ ಫೋಟೋಶೂಟ್‌ಗೆ ಟೈಮ್ ಕೊಟ್ಟು, ಕ್ಯಾಮೆರಾ ಎದುರು ಮಿರ ಮಿರ ಅಂತಾ ಮಿಂಚಿದ್ದಾರೆ. ಇದನ್ನೂ ಓದಿ:‘ಆಸ್ಕರ್’ ಕಮಿಟಿಯಲ್ಲಿ ಭಾರತದ ಮೂವರಿಗೆ ಸ್ಥಾನ : ತಮಿಳು ನಟ ಸೂರ್ಯಗೂ ಚಾನ್ಸ್
View this post on Instagram
ಕಣ್ಣಿಗೆ ಚೆಂದದ ಸ್ಟೈಲೀಶ್ ಗ್ಲ್ಯಾಸ್ ಹಾಕಿ, ವೈಟ್ ಡ್ರೆಸ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ನಯಾ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇನ್ನು ಕನ್ನಡ, ತಮಿಳು, ತೆಲುಗು ಸೇರಿದಂತೆ ಸಾಲು ಸಾಲು ಚಿತ್ರಗಳು ಪ್ರಿಯಾಮಣಿ ಕೈಯಲ್ಲಿದೆ.
Live Tv