ಮಾಲಿವುಡ್ (Mollywood) ನಟಿ ಪ್ರಿಯಾ ವಾರಿಯರ್ ಸದ್ಯ ಮಾಲ್ಡೀವ್‌ಗೆ ಹಾರಿದ್ದಾರೆ. ಕಡಲ ಕಿನಾರೆಯಲ್ಲಿ ಸಖತ್ ಮೋಜು- ಮಸ್ತಿ ಮಾಡುತ್ತಾ ಕಾಲು ಕಳೆಯುತ್ತಾರೆ. ನಟಿಯ ಹಾಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
‘ಒರು ಅಡಾರ್ ಲವ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಪ್ರಿಯಾ ವಾರಿಯರ್ ಅವರು ಕಣ್ಣು ಹೊಡೆದು ದೇಶದೆಲ್ಲಡೆ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದರು. ಸದ್ಯ ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚ್ತಿರುವ ನಟಿ ಪ್ರಿಯಾ ‘ವಿಷ್ಣುಪ್ರಿಯಾ’ (Vishnu Priya) ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡ್ತಿದ್ದಾರೆ. ಇದನ್ನೂ ಓದಿ:ರಾಜಕಾರಣ ಬದಿಗಿಟ್ಟು ಪುತ್ರನ ಮದುವೆಗೆ ಮುಖ್ಯಮಂತ್ರಿಯನ್ನು ಆಹ್ವಾನಿಸಿದ ಸುಮಲತಾ
View this post on Instagram
ಬಹುಭಾಷಾ ನಟಿ ಪ್ರಿಯಾ, ಮಾಲ್ಡೀವ್ಸ್‌ನಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಕಡಲ ಕಿನಾರೆಯಲ್ಲಿ ಟೂ ಪೀಸ್ ಬಿಕಿನಿಯಲ್ಲಿ ತೊಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಿಯಾ ಹಾಟ್ ಅವತಾರಕ್ಕೆ ಪಡ್ಡೆಹುಡುಗರು ಫುಲ್ ಫಿದಾ ಆಗಿದ್ದಾರೆ. ಸದ್ಯ ನಟಿಯ ಬಿಕಿನಿ ಫೋಟೋಗಳು ಸದ್ದು ಮಾಡುತ್ತಿದೆ.
View this post on Instagram
ಮೊದಲ ಸಿನಿಮಾದಲ್ಲಿ ಸಂಚಲನ ಮೂಡಿಸಿದ ಹಾಗೇ ನಂತರದ ಸಿನಿಮಾಗಳಲ್ಲಿ ಪ್ರಿಯಾಗೆ ಸಕ್ಸಸ್ ತಂದು ಕೊಡಲಿಲ್ಲ. ಸಾಲು ಸಾಲು ಚಿತ್ರಗಳನ್ನ ಒಪ್ಪಿಕೊಂಡಿರುವ ನಟಿಗೆ ಲಕ್ ಬದಲಾಗುತ್ತಾ.? ಮತ್ತೆ ಸಂಚಲನ ಮೂಡಿಸುತ್ತಾರೆ ಕಾದುನೋಡಬೇಕಿದೆ.