Monday, 22nd October 2018

Recent News

ಕಿಚ್ಚನನ್ನು ಬಿಟ್ಟು ಮಗಳ ಜೊತೆ ಟ್ರಿಪ್ ಹೋಗಿಬಂದ ಪ್ರಿಯಾ ಸುದೀಪ್!

ಬೆಂಗಳೂರು: ಕಿಚ್ಚ ಸುದೀಪ್ ಅವರನ್ನು ಬಿಟ್ಟು ಪತ್ನಿ ಪ್ರಿಯಾ ಸುದೀಪ್ ತನ್ನ ಮಗಳು ಸಾನ್ವಿ ಜೊತೆ ಮೇಘಾಲಯ ಟ್ರಿಪ್‍ಗೆ ಹೋಗಿ ಬಂದಿದ್ದಾರೆ. ಸದ್ಯ ಅವರು ಟ್ರಿಪ್‍ಗೆ ಹೋದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರಿಗೆ ಕಾರು- ಬೈಕ್‍ಗಳಂದರೆ ಎಲ್ಲಿಲ್ಲದ ಕ್ರೇಜ್. ನೆಚ್ಚಿನ ಕಾರು ಬೈಕ್‍ಗಳನ್ನು ಖರೀದಿಸುವ ಕಿಚ್ಚ, ಕಾರು ಇಲ್ಲವೇ ಬೈಕ್ ಏರಿ ನೆಚ್ಚಿನ ಅಡ್ಡಗಳಲ್ಲಿ ರೌಂಡ್ ಹೊಡೆದು ಎಂಜಾಯ್ ಮಾಡುತ್ತಾರೆ. ಆದರೆ ಪತ್ನಿ ಪ್ರಿಯಾ ಸುದೀಪ್ ಕೊಂಚ ಟೈಮ್ ಸಿಕ್ಕರೆ ಸಾಕು ತಮಗೆ ಇಷ್ಟವಾದ ಜಾಗಕ್ಕೆ ತನ್ನ ಮುದ್ದಿನ ಮಗಳು ಸಾನ್ವಿಯನ್ನು ಕರೆದುಕೊಂಡು ಹೋಗಿ ಬಿಡುತ್ತಾರೆ.

ಪ್ರಿಯಾಗೆ ಟ್ರಿಪ್ ಹೋಗೋದೆಂದರೆ ತುಂಬಾನೇ ಇಷ್ಟ. ಪುತ್ರಿ ಸಾನ್ವಿಗೆ ಸ್ಕೂಲ್ ರಜೆಯಿದ್ದು, ಪ್ರಿಯಾ ಫ್ರೀಯಾಗಿದ್ದರೆ ಸಾಕು, ತಮ್ಮ ಇಷ್ಟದ ತಾಣಕ್ಕೆ ಹೋಗಿ ಸಖತ್ ಎಂಜಾಯ್ ಮಾಡುತ್ತಾರೆ. ಪ್ರಿಯಾ ಸುದೀಪ್ ಮೊದಲಿನಿಂದಲೂ ಸಾಹಸ ಟ್ರಿಪ್‍ಗಳನ್ನು ಇಷ್ಟಪಡುತ್ತಾರೆ.

ಪ್ರಿಯಾ ಈಗ ಸುದೀಪ್‍ರನ್ನು ಬಿಟ್ಟು ಮೇಘಾಲಯಕ್ಕೆ ಹೋಗಿ ಬಂದಿದ್ದಾರೆ. ಮೇಘಾಲಯದ ರಮಣೀಯ ತಾಣಗಳ ಸೊಬಗನ್ನು ಸವಿಯುತ್ತಾ, ಟ್ರಕ್ಕಿಂಗ್ ಮಾಡಿರುವ ಪ್ರಿಯಾ, ಸೋಷಿಯಲ್ ಮೀಡಿಯಾದಲ್ಲಿ ಮೇಘಾಲಯದ `ಮೆಘಾ’ ಅನುಭವವನ್ನು ಶೇರ್ ಮಾಡಿದ್ದಾರೆ.

ಇತ್ತೀಚೆಗೆ ಪತ್ನಿ ಪ್ರಿಯಾ ಹಾಗೂ ಸಾನ್ವಿಯನ್ನು ಕರೆದುಕೊಂಡು ಸುದೀಪ್ ಹಾಲಿಡೇ ಟ್ರಿಪ್ ಹೋಗಿದ್ದರು. ಸಿನಿಮಾ ಕೆಲಸಗಳನ್ನು ಬದಿಗಿಟ್ಟು ಫ್ಯಾಮಿಲಿ ಜೊತೆ ಮಲೇಷಿಯಾಗೆ ಹಾರಿದ್ದರು. ಏರ್ ಬಲೂನ್ ಏರಿ ಮೈಂಡ್ ರಿಫ್ರೆಶ್ ಮಾಡಿಕೊಂಡು ಸುದೀಪ್ ಕುಟುಂಬ ಮತ್ತೆ ಸಿಲಿಕಾನ್ ಸಿಟಿಗೆ ವಾಪಾಸ್ ಆಗಿತ್ತು.

ಹಿಮಾಲಯ, ಮಲೇಷಿಯಾ, ಮೇಘಾಲಯ ಈ ಮೂರು ಆಲಯಗಳಿಗೆ ಭೇಟಿ ಕೊಟ್ಟು ಪ್ರಿಯಾ ಸಖತ್ ಎಂಜಾಯ್ ಮಾಡಿದ್ದಾರೆ.

Leave a Reply

Your email address will not be published. Required fields are marked *