ಬಿಗ್ ಹಗ್ ಟು ಮೈ ಬೆಸ್ಟಿ ಅಂದ್ರು ಪ್ರಿಯಾ ಸುದೀಪ್

Public TV
1 Min Read
PRIYA SUDEEP

ಬೆಂಗಳೂರು: ಇಂದು ಸ್ನೇಹಿತರ ದಿನವಾಗಿದ್ದು, ಎಲ್ಲರೂ ತಮ್ಮ ಗೆಳೆಯ-ಗೆಳತಿಯರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಹೀಗೆಯೇ ನಟ ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮ ಜೊತೆಗಾರನಿಗೆ ವಿಶ್ ಮಾಡಿದ್ದಾರೆ.

ಪ್ರಿಯಾ ಸುದೀಪ್ ತಮ್ಮ ಪತಿ ಸುದೀಪ್ ಅವರನ್ನು ಬೆಸ್ಟಿ ಎಂದು ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ. ಜೊತೆಗೆ ಪತಿಯೊಂದಿಗಿನ ಫೋಟೋ ಹಾಕಿ ಫನ್ನಿಯಾಗಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತನೊಂದಿಗೆ ಸಿಲ್ಲಿಯಾಗಿರುವುದು, ಈ ಅವತಾರದಲ್ಲಿ ನಿಮ್ಮ ಪೈಲ್ವಾನ್ ಅನ್ನು ಎಂದಾದರೂ ನೋಡಿದ್ದೀರಾ? ನನ್ನ ಬೆಸ್ಟಿಗೆ ದೊಡ್ಡ ಅಪ್ಪುಗೆ” ಎಂದು ಬರೆದಿದ್ದಾರೆ. ಜೊತೆಗೆ ಎರಡು ನಗುವ ಎಮೋಜಿಯನ್ನು ಹಾಕಿದ್ದಾರೆ.

ಪ್ರಿಯಾ ಅವರು ಟ್ವೀಟ್ ಮಾಡಿದ ತಕ್ಷಣ ಅಭಿಮಾನಿಗಳು ಕಮೆಂಟ್ ಮಾಡುವ ಮೂಲಕ ಸ್ನೇಹಿತರ ದಿನದ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಪತ್ನಿಯ ಟ್ವೀಟಿಗೆ ಸುದೀಪ್ ಅವರು, ನೀನು ನನ್ನ ಅದ್ಭುತ ಸ್ನೇಹಿತೆಯಾಗಿದ್ದೀಯಾ, ನಿಮ್ಮ ಅಪ್ಪುಗೆಗೆ ತುಂಬಾ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದ್ದಾರೆ.

ನಟ ಸುದೀಪ್ ಅವರು ‘ಕೋಟಿಗೊಬ್ಬ-3’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

Capture 4

Share This Article