ಬೆಂಗಳೂರು: ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ಪ್ರೈಸ್ ಕಾದಿದೆ ಎಂದು ಕಿಚ್ಚ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಟ್ವೀಟ್ ಮಾಡಿದ್ದರು. ಈಗ ಆ ಸರ್ಪ್ರೈಸ್ ಏನೆಂಬುದನ್ನು ರಿವೀಲ್ ಮಾಡಿದ್ದಾರೆ.
ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ, “ಕಿಚ್ಚ ಸುದೀಪ್ ಅವರ ಎಲ್ಲ ಸ್ನೇಹಿತರಿಗೆ ನಾನು ಈ ಯುಗಾದಿ ಉಡುಗೊರೆ ನೀಡುತ್ತಿದ್ದೇನೆ. ಸುದೀಪ್ ಅವರನ್ನು ನಿಮ್ಮ ಇನ್ನಷ್ಟು ಹತ್ತಿರಕ್ಕೆ ತರುತ್ತಿದ್ದೇನೆ. ಕಿಚ್ಚ ಕ್ರಿಯೆಶನ್ಸ್ ನ ಆಫೀಶಿಯಲ್ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ. “ಕಿಚ್ಚ ಅಂದ್ರೆ ಕೃಷ್ಣ ಅಲ್ವಾ” ಎಂದು ವಿಡಿಯೋ ಹಾಕಿ ಟ್ವೀಟ್ ಮಾಡಿದ್ದಾರೆ.
Ugadi gift to all Kichcha’s friends,bringing him much more closer to you. Watch & subscribe to the official YouTube channel of Kichcha Creatiions. A small video of my personal admiration. "Kichha Andre Krishna” alwa!!
Watch n share with lovehttps://t.co/HM8uWLfzoX@KicchaSudeep
— Priya Sudeep/ಪ್ರಿಯ (@iampriya06) April 5, 2019
ಈ ಬಗ್ಗೆ ಕಿಚ್ಚ ಸುದೀಪ್ ಅವರು ಕೂಡ ಟ್ವೀಟ್ ಮಾಡಿದ್ದಾರೆ. ಈ ಪ್ರೀತಿಗೆ, ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನೀವು ಮನಸಾರೆ ಕೆಲಸ ಮಾಡಿದ್ದೀರಾ. ಅದನ್ನು ನಾನು ನೋಡಬಹುದು. ಕಿಚ್ಚ ಕ್ರಿಯೆಶನ್ಸ್ ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಕ್ಕೆ ಪ್ರಿಯಾಗೂ ಧನ್ಯವಾದಗಳು. ಈ ಚಾನೆಲ್ ಕೇವಲ ನನ್ನ ಬಗ್ಗೆ ಅಲ್ಲ. ಹೊಸ ಪ್ರತಿಭೆಗಳಿಗೆ ಇಲ್ಲಿ ಅವಕಾಶವಿದೆ ಎಂದು ಟ್ವೀಟ್ ಮಾಡಿದ್ದಾರೆ.
Tnx to th entire team for this love. U all have worked from heart n I can see that.
Tnx @iampriya06 for launching kicchaCreatiions YouTube channel.
This channel jus isn't about me, it's also a platform to unleash young n new talents… Mch luv n Huggs????????https://t.co/tblhAQkWyG
— Kichcha Sudeepa (@KicchaSudeep) April 5, 2019
ಇತ್ತೀಚೆಗೆ ಪ್ರಿಯಾ ಸುದೀಪ್, “ಯುಗಾದಿ ಹಬ್ಬಕ್ಕೆ ನಿಮಗೆಲ್ಲಾ ಸರ್ಪ್ರೈಸ್ ಕಾದಿದೆ” ಎಂದು ಟ್ವೀಟ್ ಮಾಡುವುದರ ಮೂಲಕ ಎಲ್ಲರಿಗೂ ಕುತೂಹಲ ಮೂಡಿಸಿದ್ದರು. ಪ್ರಿಯಾ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ ಸುದೀಪ್ ಅವರ ಫೋಟೋ ಹಾಕಿ ಅದರಲ್ಲಿ ಯುಗಾದಿ Bonanza. ಈ ಯುಗಾದಿ ಹಬ್ಬದಂದು ಎಲ್ಲ ಸುದೀಪ್ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ಕಾದಿದೆ ಎಂದು ಟ್ವೀಟ್ ಮಾಡಿದ್ದರು. ಯುಗಾದಿ ಹಬ್ಬಕ್ಕೆ ನನ್ನ ಎಲ್ಲಾ ಸ್ನೇಹಿತರಿಗೂ ಒಂದು ಗಿಫ್ಟ್ ಕಾದಿದೆ ಎಂದು ಬರೆದುಕೊಂಡಿದ್ದರು.