ಬೆಂಗಳೂರು: ಹೆಸರಘಟ್ಟದ ಸಂರಕ್ಷಿತ ಹುಲ್ಲುಗಾವಲು ರಾಜ್ಯದಲ್ಲಿರುವ ಬೆರಳೆಣಿಕೆಯ ಅಳಿವಿನಂಚಿನಲ್ಲಿರುವ ಹುಲ್ಲುಗಾವಲು ಪ್ರದೇಶವಾಗಿದೆ. ಅರಣ್ಯ ಇಲಾಖೆ ಹೆಸರಘಟ್ಟ ಹುಲ್ಲಗಾವಲನ್ನು ರಕ್ಷಿತ ಪ್ರದೇಶವೆಂದು ಘೋಷಿಸಿದೆ. ಅರಣ್ಯ ಇಲಾಖೆಗೆ ಸೇರಿದ ಈ ಪ್ರದೇಶಕ್ಕೆ ಖಾಸಗಿ ಸೆಕ್ಯೂರಿಟಿ ಗಾರ್ಡ್ ಇರೋದು ದುರಂತ.
ಹುಲ್ಲುಗಾವಲು ಪ್ರದೇಶದ ಹೊರಗೆ ‘ಅವರ್ ನೇಟಿವ್ ವಿಲೇಜ್’ ಅನ್ನೋ ರೆಸಾರ್ಟ್ ಇದೆ. ಆ ರೆಸಾರ್ಟ್ ನ ಸೆಕ್ಯೂರಿಟಿ ಇದೇ ಹುಲ್ಲುಗಾವಲು ಪ್ರದೇಶದಲ್ಲಿ ಕಾರು, ಬೈಕು ತೆಗೆದುಕೊಂಡು ಹೋಗೋಕೆ ಬಿಡುತ್ತಿದ್ದಾನೆ. ಅಷ್ಟೇ ಅಲ್ಲ ಈ ಸೆಕ್ಯೂರಿಟಿ ಗಾರ್ಡ್ ಗೆ ದುಡ್ಡು ಕೊಟ್ಟು ಒಳಗೆ ಬರುವ ಯುವಕರು ಫೋಟೋಗ್ರಾಫಿ ಮಾಡ್ತಾರೆ. ಬೈಕ್ ಸ್ಟಂಟ್ ಮಾಡಿ ಮಜಾ ಮಾಡಿ ಹಿಂದಿರುಗುತ್ತಾರೆ. ಯಾರನ್ನೂ ಒಳಗೆ ಬಿಡದೆ ಹುಲ್ಲುಗಾವಲ್ಲನ್ನ ರಕ್ಷಿಸಬೇಕಾದ ಅರಣ್ಯ ಇಲಾಖೆ ತನಗೆ ಏನು ಗೊತ್ತಿಲ್ಲದಂತೆ ಕುಳಿತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಲ್ಲುಗಾವಲಿನ ಪ್ರದೇಶದಲ್ಲಿ ನೆಲದಲ್ಲಿ ಗೂಡು ಮಾಡುವ ಪಕ್ಷಿಗಳು ವಾಸಿಸುತ್ತವೆ. ಅಪರೂಪದ ಬೆರಳೆಣಿಕೆಯಷ್ಟೇ ಮಾತ್ರ ಇರುವ ಗ್ರೇಟ್ ಇಂಡಿಯನ್ ಬಸ್ಟರ್ಟ್ ಪಕ್ಷಿಗಳ ವಾಸಸ್ಥಾನ ಇದೇ ಹುಲ್ಲುಗಾವಲು. ಆದ್ರೆ ಇಲ್ಲಿ ಯಾರೂ ಕೇಳೋರು ಇಲ್ಲ ಹೇಳೋರು ಇಲ್ಲ. ಪಶುಪಾಲನ ಇಲಾಖೆ ನಿರ್ಭಂಧಿತ ಪ್ರದೇಶ ಅಂತ ಬೋರ್ಡ್ ಹಾಕಿರೋದು ಬಿಟ್ರೆ ಒಳಗೆ ಎಂಟ್ರಿಯಾಗುವುದನ್ನ ತಡೆಯೋಕೆ ಯಾರೂ ಇಲ್ಲ ಎಂದು ಸ್ಥಳೀಯ ನಿವಾಸಿ ಕಾರ್ತಿಕ್ ಹೇಳುತ್ತಾರೆ.
ಮೊದಲು ಸಿನಿಮಾ ಶೂಟಿಂಗ್‍ಗೆ ಅವಕಾಶ ನೀಡಲಾಗ್ತಿತ್ತು. ಈಗ ಅದಕ್ಕೂ ಅವಕಾಶ ನೀಡ್ತಿಲ್ಲ. ಆದ್ರೆ ಹೀಗೆ ಕಳ್ಳದಾರಿಯ ಮೂಲಕ ಬಂದು ಹುಲ್ಲುಗಾವಲನ್ನ ಹಾಳುಗೆಡವಲಾಗ್ತಿದೆ, ಬೆಂಗಳೂರಿಗೆ ಅಂತ ಇರುವ ಒಂದೇ ಒಂದು ಹುಲ್ಲುಗಾವಲು ಪ್ರದೇಶವನ್ನ ಕಾಪಾಡಿಕೊಳ್ಳುವ ಜವಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv