ಸ್ಯಾಂಡಲ್ ವುಡ್ ಹೆಸರಾಂತ ನಟ ಕಿಚ್ಚ ಸುದೀಪ್ (Sudeep) ಗೆ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ಪುಟ್ಟೇನಹಳ್ಳಿ (Puttenahalli) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ (Video Leak) ಮಾಡುವುದಾಗಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ಸುದೀಪ್ ಅವರ ಆಪ್ತ ಜಾಕ್ ಮಂಜು ದೂರು ನೀಡಿದ್ದಾರೆ.
Advertisement
ಜಾಕ್ ಮಂಜು (Jack Manju) ನೀಡಿದ ದೂರಿನನ್ವಯ ಪೊಲೀಸರು ಎಫ್.ಐ.ಆರ್ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸುದೀಪ್ ಅವರ ಖಾಸಗಿ ವಿಡಿಯೋ ಲೀಕ್ ಮಾಡುತ್ತೇವೆ ಎನ್ನುವುದರ ಜೊತೆಗೆ ಕೆಲ ಅವಾಚ್ಯ ಶಬ್ದಗಳನ್ನು ಸಹ ಲೆಟರ್ ನಲ್ಲಿ ದುಷ್ಕರ್ಮಿಗಳು ಬರೆದಿದ್ದಾರೆ ಎನ್ನಲಾಗುತ್ತಿದೆ. ಈ ಪತ್ರವು ಸುದೀಪ್ ಅವರ ಮ್ಯಾನೇಜರ್ ಜಾಕ್ ಮಂಜುಗೆ ಸಿಕ್ಕಿದ್ದು ಅದನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಮಾಜಿ ಪತಿ ಹೊಸ ಸಂಬಂಧದ ಬಗ್ಗೆ ನಾನೇನು ಮಾತನಾಡಲೇ ಇಲ್ಲ: ಸಮಂತಾ ಸ್ಪಷ್ಟನೆ
Advertisement
Advertisement
ಜಾಕ್ ಮಂಜು ನೀಡಿದ ದೂರನ್ನು ಆಧರಿಸಿ ಐಪಿಸಿ 504, 506 ಹಾಗೂ ಐಟಿ ಆಕ್ಟ್ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸುದೀಪ್ ಅವರು ಬಿಜೆಪಿಗೆ ಸೇರುತ್ತಿದ್ದಾರೆ ಎನ್ನುವ ಸುದ್ದಿಯ ಜೊತೆಗೆ ಈ ಪತ್ರ ಕೂಡ ಸಾಕಷ್ಟು ಸಂಚಲನವುಂಟು ಮಾಡಿದೆ. ಈ ಪತ್ರ ಬಂದಿರುವುದು ಎಲ್ಲಿಂದ? ಬರೆದವರು ಯಾರು ಎನ್ನುವುದರ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನೂ ನಡೆಸುತ್ತಿದ್ದಾರೆ.