ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಿಕ ಜನರು ಹೆಚ್ಚಾಗಿ ಟ್ಯಾಕ್ಸಿ, ಆಟೋ, ಕ್ಯಾಬ್ ಎಂಬ ಆ್ಯಪ್ (APP) ಆಧಾರಿತ ಸೇವೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳು (Private Vehicles) ಗ್ರಾಹಕರಿಂದ ದುಪ್ಪಟು ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪವಿದೆ.
Advertisement
Advertisement
ಪ್ರಯಾಣಿಕರು ಅಗತ್ಯಕ್ಕೋ, ಅನಿವಾರ್ಯತೆಗಾಗಿಯೋ ದುಪ್ಪಟ್ಟು ಹಣ ಕೊಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೊನೆಗೂ ಎಚ್ಚೆತ್ತಿರುವ ಸಾರಿಗೆ ಇಲಾಖೆ ಆಪರೇಷನ್ ಸಾರಿಗೆ ಶುರು ಮಾಡಿದೆ. ಖುದ್ದು ಸಾರ್ವಜನಿಕರು ದೂರು ಕೊಡಲು ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಆಟೋಗಳು ಪ್ರಯಾಣಿಕರಿಗೆ ದುಬಾರಿ ದುಡ್ಡು ನೀಡುವಂತೆ ಡಿಮ್ಯಾಂಡ್ ಮಾಡಿದರೆ 9449863426 ಈ ಸಹಾಯವಾಣಿಗೆ ಕರೆ ಮಾಡಿ ದೂರು ಕೊಡಬಹುದು. ಈ ಮೂಲಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ – ಇಂದು, ನಾಳೆ ಅಂತರರಾಜ್ಯ ಸಂಚಾರಕ್ಕೆ ಬದಲಿ ಮಾರ್ಗ ಬಳಸಿ
Advertisement
Advertisement
ಹಬ್ಬಗಳ ಸಂದರ್ಭದಲ್ಲಿ ಜನರ ಲೂಟಿ ಮಾಡುತ್ತಿರುವ ಖಾಸಗಿ ಬಸ್‍ಗಳ ಬಗ್ಗೆ ಪಬ್ಲಿಕ್ ಟಿವಿ ಸತತ ವರದಿ ಬಿತ್ತರಿಸುತ್ತಲೇ ಇದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ಸಾರಿಗೆ ಇಲಾಖೆ 12 ತನಿಖಾ ತಂಡಗಳನ್ನು ನೇಮಿಸಿದೆ. ಈ ತಂಡ ಬಸ್‍ಗಳ ಟಿಕೆಟ್ ಬಗ್ಗೆ ಪರಿಶೀಲನೆ ನಡೆಸಲಿದ್ದು, ಪ್ರಯಾಣಿಕರು ಕೂಡ ನೇರವಾಗಿ ದೂರು ಕೊಡಬಹುದು ಎಂದು ಸಾರಿಗೆ ಇಲಾಖೆ ಹೇಳಿದೆ. ಇದನ್ನೂ ಓದಿ: ನಾನು ಕೃಷಿಕ ಎಂದಿದ್ದ ಡಿಕೆಶಿಗೆ ಶಾಕ್ ನೀಡಲು ಸಿಬಿಐ ತಯಾರಿ