ಬೆಂಗಳೂರು: ನಾನೊಬ್ಬ ಕೃಷಿಕ, ನನಗೆ ಕೃಷಿಯಿಂದಲೇ(Agriculture) ಆದಾಯ ಬರುತ್ತಿದೆ ಎಂದಿದ್ದ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ (DK Shivakumar) ಸಿಬಿಐಗೆ ಈಗ ಶಾಕ್ ಕೊಡಲು ತಯಾರಿ ನಡೆಸುತ್ತಿದೆ.
ಡಿಕೆಶಿ ಆಸ್ತಿಯನ್ನು ಸಿಬಿಐ(CBI) ಈಗ ಮೌಲ್ಯಮಾಪನ ಮಾಡುತ್ತಿದೆ. ಡಿಕೆಶಿಯ ಆದಾಯದ ಮೂಲವನ್ನು ಬೆನ್ನತ್ತಿರುವ ಸಿಬಿಐ, ಯಾವ ಬೆಳೆ ಬೆಳೆಯುತ್ತಾರೆ? ತೋಟದಿಂದ ಎಷ್ಟು ವರ್ಷದಿಂದ ಫಲ ಬರುತ್ತಿದೆ? ಎಷ್ಟು ಲಾಭ ಬರುತ್ತಿದೆ? ಎಷ್ಟು ವರ್ಷದಿಂದ ವಾಣಿಜ್ಯ ಬೆಳೆ ಬೆಳೆಯುತ್ತಿದ್ದಾರೆ? ಜಮೀನು ಖರೀದಿಸಿದ್ದು ಯಾವಾಗ ಎಂಬ ಬಗ್ಗೆ ದಾಖಲೆಗಳನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: 5.20 ಕೋಟಿ ರೂ. ನಷ್ಟ ಭರಿಸಲು ಪಿಎಫ್‍ಐಗೆ ಹೈಕೋರ್ಟ್ ಸೂಚನೆ
Advertisement
Advertisement
ಅಷ್ಟೇ ಅಲ್ಲದೇ ಕೃಷಿ ಭೂಮಿಗೆ ಸಂಬಂಧಿಸಿದ ಕಳೆದ ಹತ್ತು ವರ್ಷದ ಪಹಣಿಯನ್ನು (RTC) ಪಡೆಯಲಾಗಿದೆ. ಮೂಲಗಳ ಪ್ರಕಾರ ಇನ್ನೆರಡು ದಿನದಲ್ಲಿ ವಾಣಿಜ್ಯ ಆಸ್ತಿಗಳ ಮೌಲ್ಯಮಾಪನ ಮಾಡಲಿದ್ದು, ಮಾಲ್‍ಗಳು, ಅಪಾರ್ಟ್‌ಮೆಂಟ್ ಮನೆಗಳ ಮೌಲ್ಯಮಾಪನ ನಡೆಯಲಿದೆ.
Advertisement
ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ತನಿಖೆ ರದ್ದಿಗೆ ಮನವಿ ಮಾಡಿರುವ ಡಿಕೆಶಿಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಲು ಸಿಬಿಐ ಸಿದ್ಧತೆ ಮಾಡಿದೆ.