ಕಾರವಾರ: ರಾಜ್ಯದಲ್ಲಿ ಖಾಸಗಿ ಅಂಬುಲೆನ್ಸ್‌ಗಳು ಬಡ ಜನರಿಗೆ ಹೆಚ್ಚಿನ ದರ ವಿಧಿಸುತ್ತಿರುವುದಕ್ಕೆ ಸರ್ಕಾರ ಶಾಕ್ ನೀಡಲು ಮುಂದಾಗಿದೆ. ಖಾಸಗಿ ಅಂಬುಲೆನ್ಸ್‌ಗಳನ್ನು ಕೆಪಿಎಂಇ ನಡಿಯಲ್ಲಿ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖಾಸಗಿ ಅಂಬುಲೆನ್ಸ್‌ಗಳು ಬೇಕಾಬಿಟ್ಟಿ ದರ ವಿಧಿಸುತ್ತಿದೆ. ಇದರಿಂದ ಬಡವರಿಗೆ ಹೊರೆಯಾಗುತ್ತಿದೆ. ಅಂಬುಲೆನ್ಸ್‌ಗಳು ಹೇಗಿರಬೇಕು, ಮಾನದಂಡ ಹೇಗಿರಬೇಕು. ಇದರಲ್ಲಿ ದರ ನಿಯಂತ್ರಣವನ್ನು ಸಹ ಮಾಡುತಿದ್ದೇವೆ ಎಂದು ಹೇಳಿದ್ದಾರೆ.
ಮೊಬೈಲ್ ಹೆಲ್ತ್ ಯುನಿಟ್‌ಗಳು ಮತ್ತು ಅಂಬುಲೆನ್ಸ್‌ಗಳು ಎರಡಕ್ಕೂ ಕೆಪಿಎಂಇ ಲೈಸೆನ್ಸ್ ಕಡ್ಡಾಯ ಮಾಡಲಾಗುತ್ತದೆ. ಓಲಾ, ಊಬರ್ ಆ್ಯಪ್‌ಗಳ ರೀತಿ ಅಂಬುಲೆನ್ಸ್‌ಗಳನ್ನು ಸಹ ಆ್ಯಪ್‌ನಲ್ಲಿ ಬುಕ್ ಮಾಡಬಹುದು. ಸರ್ವಿಸ್ ಯಾರೇ ಕೊಡಲಿ ದರ ಮೊದಲೇ ಫಿಕ್ಸ್ ಮಾಡುತಿದ್ದೇವೆ ಎಂದಿದ್ದಾರೆ.
ಪಾರದರ್ಶಕತೆ ತರುತಿದ್ದೇವೆ. ಅಂಬುಲೆನ್ಸ್‌ಗಳು ಕ್ವಾಲಿಟಿ ಇರುವುದಿಲ್ಲ. ಅದರಲ್ಲಿ ಬರೀ ಗಾಡಿ ಇರುತ್ತದೆ. ಒಂದು ಬೆಡ್ ಮಾತ್ರ ಇರುತ್ತವೆ. ಹೀಗಾಗಿಯೇ ಅಂಬುಲೆನ್ಸ್‌ಗಳಿಗೆ ಮಾನದಂಡ ತರುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.