ಗುವಾಹಟಿ: ಮುಂಬೈ (Mumbai) ಮತ್ತು ಅಸ್ಸಾಂ (Assam) ನಡುವಿನ ರಣಜಿ (Ranji) ಪಂದ್ಯದಲ್ಲಿ ತ್ರಿಶತಕ ಸಿಡಿಸಿ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಮುಂಬೈಕರ್ ಪೃಥ್ವಿ ಶಾ (Prithvi Shaw) ಬರೆದಿದ್ದಾರೆ.
Advertisement
ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ 23ರ ಹರೆಯದ ಪೃಥ್ವಿ ಶಾ ಅಸ್ಸಾಂ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದರು. 2ನೇ ದಿನದಾಟದಲ್ಲಿ ಪೃಥ್ವಿ ಶಾ 379 ರನ್ (383 ಎಸೆತ, 49 ಬೌಂಡರಿ, 4 ಸಿಕ್ಸ್) ಚಚ್ಚಿ ಔಟ್ ಆದರು. ಈ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ. 2016ರಲ್ಲಿ ಸಮಿತ್ ಗೂಹೆಲ್ ಆರಂಭಿಕರಾಗಿ ಸಿಡಿಸಿದ 359 ರನ್ ದಾಖಲೆಯಾಗಿತ್ತು. ಈ ದಾಖಲೆಯನ್ನು ಪೃಥ್ವಿ ಶಾ ಮುರಿದಿದ್ದಾರೆ. ಇದನ್ನೂ ಓದಿ: ಬೆಂಕಿ ಎಸೆತ ಎಸೆದ ಉಮ್ರಾನ್ ಮಲಿಕ್ – ಗಂಟೆಗೆ 156 ಕಿ.ಮೀ ವೇಗದಲ್ಲಿ ಬೌಲಿಂಗ್ ದಾಖಲೆ
Advertisement
ಜೊತೆಗೆ ಮುಂಬೈ ಪರ ರಣಜಿ ಪಂದ್ಯದಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಆಟಗಾರ ಎಂಬ ನೂತನ ದಾಖಲೆಯನ್ನೂ ಬರೆದಿದ್ದಾರೆ. ಈ ಹಿಂದೆ ಮುಂಬೈ ಪರ ಸಂಜಯ್ ಮಾಂಜ್ರೇಕರ್ 377 ರನ್ ಸಿಡಿಸಿದ್ದು, ಹೆಚ್ಚಿನ ರನ್ ಆಗಿತ್ತು. ಈ ದಾಖಲೆಯನ್ನು ಮುರಿದು ನೂತನ ದಾಖಲೆಯನ್ನು ಪೃಥ್ವಿ ಶಾ ಬರೆದಿದ್ದಾರೆ.
Advertisement
Cricketer #PrithviShaw has smashed the second-highest score ever in the #RanjiTrophy
His 379 is only behind Bhausaheb Nimbalkar's 443* in 1948. pic.twitter.com/NYPUEfcCaB
— the shubhankar Mishra (@theshubhankarM1) January 11, 2023
Advertisement
379 ರನ್ ಬಾರಿಸಿ ಮುನ್ನಗ್ಗುತ್ತಿದ್ದ ಪೃಥ್ವಿ ಶಾರನ್ನು ಕಡೆಗೆ ರಿಯಾನ್ ಪರಾಗ್ ಎಲ್‍ಬಿಡಬ್ಲ್ಯೂ ಬಲೆ ಬೀಳಿಸಿ ಔಟ್ ಮಾಡಿದರು. ಈ ಮೂಲಕ ಪೃಥ್ವಿ ಶಾ 21 ರನ್‍ಗಳ ಅಂತರದಿಂದ 400 ರನ್ ಸಿಡಿಸುವ ಅವಕಾಶ ವಂಚಿತರಾದರು. ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ ಮಹಾರಾಷ್ಟ್ರದ ವಿರುದ್ಧ ಬಿ.ಬಿ ನಿಂಬಾಳ್ಕರ್ 1948-49ರಲ್ಲಿ ಸಿಡಿಸಿದ 443 ರನ್ ಭಾರತೀಯ ಆಟಗಾರನ ಅತೀ ಹೆಚ್ಚಿನ ರನ್ ಗಳಿಕೆಯಾಗಿದೆ. ಇದನ್ನೂ ಓದಿ: ಮಂಕಡ್ ರನೌಟ್ ಮಾಡಿದ ಶಮಿ – ಮನವಿ ವಾಪಸ್ ಪಡೆದ ರೋಹಿತ್ ನಡೆಗೆ ಭಾರೀ ಮೆಚ್ಚುಗೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k