ಬೆಂಗಳೂರು: ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿರುವ ಪೃಥ್ವಿ ಶಾ ಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದರು. ಇದರ ಬೆನ್ನಲ್ಲೇ ವಿಂಡೀಸ್ ವಿರುದ್ಧ ಅಂತ್ಯಗೊಂಡ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಪರ ಗೆಲುವಿನ ರನ್ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.
2ನೇ ಇನ್ನಿಂಗ್ಸ್ ನಲ್ಲಿ 72 ರನ್‍ಗಳ ಸುಲಭ ಗುರಿ ಪಡೆದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೇ 16.1 ಓವರ್ ಗಳಲ್ಲಿ ಭರ್ಜರಿ ಗೆಲುವು ಪಡೆಯಿತು. ಆರಂಭಿಕರಾಗಿ ಕಣಕ್ಕೆ ಇಳಿದ ಪೃಥ್ವಿ ಶಾ 45 ಎಸೆತಗಳಲ್ಲಿ 4 ಬೌಂಡರಿಗಳ ಸಮೇತ 33 ರನ್ ಸಿಡಿಸಿದರು. 16 ಓವರ್ ಮೊದಲ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಶಾ ಈ ಅಪರೂಪದ ದಾಖಲೆ ಬರೆದರು.
Advertisement
And, the Man of the Series award goes to young @PrithviShaw ????????????#INDvWI pic.twitter.com/PU4wB07Shq
— BCCI (@BCCI) October 14, 2018
Advertisement
ಈಗಾಗಲೇ ಉತ್ತಮ ಆರಂಭಿಕ ಆಟಗಾರ ಎಂದು ಸಾಬೀತು ಪಡಿಸಿರುವ ಶಾ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು. 2ನೇ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ ಬಿರುಸಿನ ಆಟವಾಡಿ ಕೇವಲ 39 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಮಿಂಚಿದ್ದರು. ಅಂತಿಮವಾಗಿ 70 ಎಸೆತಗಳಲ್ಲಿ 11 ಅಕರ್ಷಕ ಬೌಂಡರಿ, 1 ಸಿಕ್ಸರ್ ನೆರವಿನಿಂದ 70 ರನ್ ಗಳಿಸಿ ಔಟಾದರು. ಇದರೊಂದಿಗೆ ಅರ್ಹವಾಗಿಯೇ ಸರಣಿಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
Advertisement
ಇತ್ತ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್, 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಪಂದ್ಯದ ಗೆಲುವಿಗೆ ಕಾರಣರಾದ ಉಮೇಶ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಮೂಲಕ ಉಮೇಶ್ ಯಾದವ್ ತವರು ನೆಲದ ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದ ಶ್ರೀನಾಥ್, ಅನಿಲ್ ಕುಂಬ್ಳೆ, ಕಪಿಲ್ ದೇವ್, ವೆಂಕಟೇಶ್ ಪ್ರಸಾದ್, ಜಹೀರ್ ಖಾನ್, ಇಶಾಂತ್ ಶರ್ಮಾ ಮತ್ತು ಇರ್ಫಾನ್ ಪಠಾಣ್ ಸಾಲಿಗೆ ಸೇರಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
Highest Test career batting averages
118.50* – Prithvi Shaw (India)
112.00 – Andy Ganteaume (W Indies)
99.94 – Don Bradman (Australia)#INDvWI
— Mohandas Menon (@mohanstatsman) October 14, 2018
Congratulations to @y_umesh for bagging the Man of the Match award for his 10 wickets across the two innings. ???????? pic.twitter.com/J2F9FxyvX8
— BCCI (@BCCI) October 14, 2018
????????????????
A clinical performance by #TeamIndia as they beat the Windies by 10 wickets to clinch the series 2-0. This is their 10 consecutive victory at home ????????@Paytm #INDvWI pic.twitter.com/Mr0Qv7hEWF
— BCCI (@BCCI) October 14, 2018