ಶಿವಮೊಗ್ಗ : ಕೊರೊನಾ ಎಫೆಕ್ಟ್ ನಿಂದಾಗಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದ ವಿಚಾರಣಾಧೀನ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗ ನಗರದ ಹೊರ ವಲಯದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗವಹಿಸಿ ಶಿಕ್ಷೆ ಅನುಭವಿಸುತ್ತಿದ್ದ 18 ಮಂದಿ ವಿಚಾರಣಾಧೀನ ಖೈದಿಗಳನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ. ಈ ವೇಳೆ ಬಿಡುಗಡೆಯಾದ ಖೈದಿಗಳನ್ನು ಪೊಲೀಸರ ಸಹಾಯದಿಂದ ಅವರವರ ಸ್ವಗ್ರಾಮಗಳಿಗೆ ಕಳುಹಿಸಲಾಯಿತು.
ಪೆರೋಲ್ ಅವಧಿ ಮುಗಿದ ನಂತರ ಕಾರಾಗೃಹಕ್ಕೆ ವಾಪಸ್ಸಾಗಬೇಕು. ಕಾರಾಗೃಹದಿಂದ ಹೊರಗಡೆ ಹೋದ ಬಳಿಕ ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಬಾರದು. ಅಲ್ಲದೇ ಕೊರೊನಾ ಭೀತಿ ಇರುವ ಕಾರಣ ಮನೆಯಿಂದ ಹೊರಗೆ ಬಾರದಂತೆ ಮನೆಯಲ್ಲಿಯೇ ಇರುವಂತೆ ಎಲ್ಲಾ ವಿಚಾರಣಾಧೀನ ಖೈದಿಗಳಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.