10,000 ಕೊಡ್ತೀನಿ ಬಾ – ಯುವತಿಯನ್ನು ಮಂಚಕ್ಕೆ ಕರೆದ ಕಾಮುಕ ಪ್ರಿನ್ಸಿಪಾಲ್ ಅರೆಸ್ಟ್

Public TV
1 Min Read
Tumakur Yogesh

ತುಮಕೂರು: ಹತ್ತು ಸಾವಿರ ಕೊಡ್ತೀನಿ ಬಾ ಎಂದು ಯುವತಿಯನ್ನು ಮಂಚಕ್ಕೆ ಕರೆದ ಪ್ರಿನ್ಸಿಪಾಲ್‍ನನ್ನು ತುಮಕೂರು (Tumakur) ಮಹಿಳಾ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಆರೋಪಿ ತುಮಕೂರಿನ ಜಯನಗರದಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಕೆಲಸ ಮಾಡುತ್ತಿದ್ದ. ಇದಕ್ಕೂ ಮುನ್ನ 2019ರಲ್ಲಿ ತುಮಕೂರು ನಗರದ ಬಾರ್ ಲೈನ್ ರಸ್ತೆಯಲ್ಲಿರುವ ಖಾಸಗಿ ಕಾಲೇಜೊಂದರಲ್ಲಿ ಇಂಗ್ಲಿಷ್ ಪ್ರಾದ್ಯಾಪಕನಾಗಿದ್ದ. ಈ ಸಮಯದಲ್ಲಿ ಆರೋಪಿ ವಿದ್ಯಾರ್ಥಿನಿಯೊಬ್ಬಳ ನಂಬರ್ ಪಡೆದು ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರಳಿದ ಸಾರಿಗೆ ಬಸ್ – ಪ್ರಯಾಣಿಕರು ಸೇಫ್

ಸಂತ್ರಸ್ತೆ ಕಾಲೇಜು ಬಿಟ್ಟರೂ, ಯೋಗೇಶ್ ಸಂದೇಶ ಕಳುಹಿಸುವುದನ್ನು ಬಿಟ್ಟಿರಲಿಲ್ಲ. ಇದರಿಂದ ಸಂತ್ರಸ್ತೆ ಬೇಸತ್ತು ಆತನ ನಂಬರ್ ಬ್ಲಾಕ್ ಮಾಡಿದ್ದಳು. ಇದಾದ ಬಳಿಕ ಒಂದು ವರ್ಷದಿಂದ ಸೈಲೆಂಟ್ ಆಗಿದ್ದ ಯೋಗೇಶ್, ಜು.22 ರಂದು ರಸ್ತೆಯಲ್ಲಿ ಯುವತಿಯನ್ನು ಕಂಡು, ಮತ್ತೊಂದು ನಂಬರ್‌ನಿಂದ ಸಂದೇಶ ಕಳುಹಿಸಿ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲದೇ ಈ ಬಾರಿ ನನಗೆ ನೀನು ಬೇಕು, 10 ಸಾವಿರ ಹಣ ಕೊಡ್ತೀನಿ ಎಂದು ಪೀಡಿಸಿದ್ದ.

ಈ ವಿಚಾರವನ್ನು ಸಂತ್ರಸ್ತೆ ತಂದೆಗೆ ತಿಳಿಸಿದ್ದಳು. ಬಳಿಕ ಈ ಸಂಬಂಧ ತುಮಕೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಇದೀಗ ಲೈಂಗಿಕ ಕಿರುಕುಳ ಹಾಗೂ ಅಟ್ರಾಸಿಟಿ ಕೇಸ್ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಜಗಳ| ಚಹಾಗೆ ಇಲಿ ಪಾಷಾಣ ಬೆರೆಸಿ ಮಗು ಜೊತೆ ಕುಡಿದ್ಳು – ಪುತ್ರಿ ಸಾವು, ತಾಯಿ ಗಂಭೀರ

Share This Article