ಉಡುಪಿ: ಗುಜರಾತ್‍ನಲ್ಲಿ ನಡೆದ ಮೇಯರ್, ಉಪಮೇಯರ್‌ಗಳ ಸಮ್ಮೇಳನದಲ್ಲಿ (Mayors Conclave) ಉಡುಪಿ (Udupi) ನಗರಸಭೆಯನ್ನು (Municipal Corporation) ಪ್ರಧಾನಿ ನರೇಂದ್ರ ಮೋದಿ (Narendra Modi) ಉಲ್ಲೇಖ ಮಾಡಿ ಮಾತನಾಡಿದ್ದಾರೆ. ದೇಶದಲ್ಲೇ ಉಡುಪಿ ನಗರಸಭೆ ಬಿಜೆಪಿಗೆ ಅಧಿಕಾರ ತಂದುಕೊಟ್ಟ ಮೊದಲ ಸಂಸ್ಥೆ ಎಂದು ಹಾಡಿಹೊಗಳಿದ್ದಾರೆ.
Advertisement
ದೇಶದಲ್ಲಿ ಬಿಜೆಪಿಗೆ (BJP) ಅಧಿಕಾರದ ಮೊದಲ ಅವಕಾಶ ನೀಡಿದ ನಗರ ಉಡುಪಿ. ದಶಕಗಳ ಹಿಂದಿನ ಉಡುಪಿ ನಗರಾಡಳಿತದ ಗುಣಮಟ್ಟವನ್ನು ಗುಜರಾತಿನಲ್ಲಿ ಮೇಯರ್ ಮತ್ತು ಉಪಮೇಯರ್‌ಗಳ ಸಮ್ಮೇಳನದಲ್ಲಿ ಪ್ರಧಾನಿ ಉಲ್ಲೇಖಿಸಿದರು. ಜನಸಂಘ ಕಾಲದ ವಿಚಾರ ತಿಳಿದಿದ್ದವರಿಗೆ ಗೊತ್ತಿರಬಹುದು, ಕರ್ನಾಟಕ ರಾಜ್ಯದ, ಉಡುಪಿ ಪುರಸಭೆಯಲ್ಲಿ ಆಡಳಿತ ನಡೆಸುವ ಅಧಿಕಾರವನ್ನು ಅಲ್ಲಿನ ಜನತೆ ಅನೇಕ ಬಾರಿ ಜನ ಸಂಘಕ್ಕೆ ನೀಡಿದ್ದರು. ಆ ವೇಳೆ ನಗರಾಡಳಿತ ಸಂಸ್ಥೆಗಳ ಸ್ಪರ್ಧೆಯಲ್ಲಿ ಯಾವತ್ತೂ ಉಡುಪಿ ಪ್ರಥಮ ಸ್ಥಾನ ಕಾಯ್ದುಕೊಳ್ಳುತ್ತಿತ್ತು. ಜನಸಂಘ ಕಾಲದ ನಮ್ಮ ಕಾರ್ಯ ಕ್ಷಮತೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಬಲವಂತದ ಮತಾಂತರ ತಡೆಗೆ ನಿರ್ದೇಶನ ಕೋರಿ ಅರ್ಜಿ – ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
Advertisement
Today, when regeneration of our cities is the need of the hour, the focus must move beyond an election centric approach to public welfare. pic.twitter.com/6UZZBIO5mv
— Narendra Modi (@narendramodi) September 20, 2022
Advertisement
ಉಡುಪಿ ನಗರಸಭೆಯಲ್ಲಿ ಈಗಲೂ ಬಿಜೆಪಿ ಆಡಳಿತ ನೀಡುವ ಮೂಲಕ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸುತ್ತಿದೆ. ಪಕ್ಷದ ಮೇಲೆ ಉಡುಪಿ ನಗರದ ಜನ ಇಟ್ಟಿರುವ ವಿಶ್ವಾಸ ಎಂದು ಪ್ರಧಾನಿ ಹೇಳಿದರು. ಈ ಸಭೆಯಲ್ಲಿ ರಾಷ್ಟ್ರಾದ್ಯಂತ ಭಾರತೀಯ ಜನತಾ ಪಾರ್ಟಿ ನೇತೃತ್ವದ ಮೇಯರ್, ಉಪಮೇಯರ್‌ಗಳು ಉಪಸ್ಥಿತರಿದ್ದು, ಪ್ರಧಾನಿಗಳ ಈ ಮಾತಿಗೆ ಸಾಕ್ಷಿಯಾದರು. ಬಿಜೆಪಿ ವರಿಷ್ಠ ಲಾಲ್ ಕೃಷ್ಣ ಅಡ್ವಾಣಿ (LalKrishna Advani) ಅವರು, ಬಿಜೆಪಿಯ ಬಹುತೇಕ ಎಲ್ಲಾ ಸಭೆಗಳಲ್ಲಿ ಉಡುಪಿ ನಗರ ಆಡಳಿತದ ಉಲ್ಲೇಖ ಮಾಡುತ್ತಿದ್ದರು. ಇದೀಗ ಮೋದಿಯವರ ಈ ಹೊಗಳಿಕೆಯ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್: ಆರೋಪಿಗಳ ಕೆಲಸ ಏನು?