ಬೆಂಗಳೂರು: ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ವೇಳೆ ಬಿಜೆಪಿ ರೋಡ್ ಶೋ ಮತ್ತು ಬೃಹತ್ ಸಮಾವೇಶಕ್ಕೆ ಪ್ಲಾನ್ ಮಾಡಿಕೊಳ್ಳುತ್ತಿದೆ.
ಚುನಾವಣಾ ವರ್ಷ ಆರಂಭವಾಗಿರುವದರಿಂದ ಈಗಿನಿಂದಲೇ ಚುನಾವಣಾ ರಣಕಹಳೆ ಮೊಳಗಿಲು ಬಿಜೆಪಿ ತೀರ್ಮಾನಿಸಿದೆ. ಇದಕ್ಕೆ ಮೋದಿ ಪ್ರವಾಸವನ್ನು ಬಳಸಿಕೊಳ್ಳಲು ಮುಂದಾಗಿದೆ. ಜೂನ್ 20ರಂದು ಬೆಂಗಳೂರಿನ ಕೊಮ್ಮಘಟ್ಟ ಮತ್ತು ಜೂನ್ 21ರಂದು ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಎರಡು ಬೃಹತ್ ಸಮಾವೇಶ ಹಮ್ಮಿಕೊಳ್ಳಲು ರಾಜ್ಯ ಬಿಜೆಪಿ ಪ್ಲಾನ್ ಮಾಡ್ತಿದೆ. ಇದನ್ನೂ ಓದಿ: 3 ದಿನ, 30 ಗಂಟೆ ಪ್ರಶ್ನೆ – ಶುಕ್ರವಾರ ಮತ್ತೆ ರಾಹುಲ್‌ಗೆ ಸಮನ್ಸ್
ಜೂನ್ 20ರಂದು ಬೆಂಗಳೂರಿಗೆ ಎಂಟ್ರಿ ಕೊಡುವಾಗಲೇ ಯಲಹಂಕದಿಂದ ಐಐಎಸ್‍ಸಿವರೆಗೆ 14 ಕಿಲೋಮೀಟರ್ ರೋಡ್ ಶೋ ಮತ್ತು ಕೊಮ್ಮಘಟ್ಟದಿಂದ ಜ್ಞಾನಭಾರತಿ ವಿವಿವರೆಗೂ 12 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಇಂದಿನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದ್ರೆ, ರಾಜ್ಯ ಬಿಜೆಪಿಯ ಈ ಪ್ಲಾನ್‍ಗಳಿಗೆ ಪ್ರಧಾನಿ ಕಚೇರಿಯಿಂದ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.