ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು ತಮ್ಮ ಹುಟ್ಟುಹಬ್ಬವನ್ನು (Birthday) ಆಚರಿಸುತ್ತಿದ್ದು, ಬೆಳಗ್ಗೆ 11 ಗಂಟೆಯ ಸುಮಾರಿಗೆ ದೆಹಲಿಯ ದ್ವಾರಕಾದಲ್ಲಿ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸ್ಪೋ ಸೆಂಟರ್ (IICC) ಯಶೋಭೂಮಿಯನ್ನು (YashoBhoomi) ಉದ್ಘಾಟಿಸಲಿದ್ದಾರೆ.
ಈ ಕುರಿತು ಮೋದಿ ಟ್ವೀಟ್ ಮಾಡಿದ್ದು, ನಾನು ದೆಹಲಿಯ ದ್ವಾರಕಾದಲ್ಲಿ ಅತ್ಯಾಧುನಿಕ ಮತ್ತು ಆಧುನಿಕ ಸಮಾವೇಶ ಮತ್ತು ಎಕ್ಸ್ಪೋ ಕೇಂದ್ರವಾದ ಯಶೋಭೂಮಿಯ ಹಂತ-1 ಅನ್ನು ಉದ್ಘಾಟಿಸುತ್ತೇನೆ. ಸಮ್ಮೇಳನಗಳು ಮತ್ತು ಸಭೆಗಳಿಗೆ ಇದು ಅತ್ಯಂತ ಬೇಡಿಕೆಯ ತಾಣವಾಗಿದೆ ಎಂದು ನನಗೆ ವಿಶ್ವಾಸವಿದೆ. ಇದು ಪ್ರಪಂಚದಾದ್ಯಂತ ಪ್ರತಿನಿಧಿಗಳನ್ನು ಸೆಳೆಯುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ- ರಾಷ್ಟ್ರಪತಿ ಸೇರಿದಂತೆ ಗಣ್ಯರಿಂದ ಶುಭಾಶಯ
Advertisement
Advertisement
ಸುಸ್ಥಿರತೆಗೆ ಯಶೋಭೂಮಿ ಸಮನಾರ್ಥಕವಾಗಿರಲಿದೆ. ಇದು ಆಧುನಿಕ ತ್ಯಾಜ್ಯನೀರಿನ ಸಂಸ್ಕರಣಾ ವ್ಯವಸ್ಥೆ, ಮಳೆ ನೀರು ಕೊಯ್ಲನ್ನು ಹೊಂದಿದೆ. ಈ ಸಂಕೀರ್ಣ ಇಂಡಿಯನ್ ಗ್ರೀನ್ ಬಿಲ್ಡಿಂಗ್‌ನಿಂದ (IGBC) ಪ್ರಮಾಣೀಕರಣವನ್ನು ಪಡೆದುಕೊಂಡಿದೆ. ಹೊಸ ಮೆಟ್ರೋ ನಿಲ್ದಾಣ, ಯಶೋಭೂಮಿ ದ್ವಾರಕಾ ಸೆಕ್ಟರ್ 25 ಅನ್ನು ಕೂಡಾ ಉದ್ಘಾಟಿಸಲಾಗುವುದು ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಬದುಕುಳಿಯಲ್ಲ.. ಮಗುವನ್ನು ಚೆನ್ನಾಗಿ ನೋಡಿಕೊ: ಪತ್ನಿಗೆ ವೀಡಿಯೋ ಕಾಲ್ ಮಾಡಿ ಹಿರಿಯ ಪೊಲೀಸ್ ಆಡಿದ ಕೊನೆ ಮಾತು
Advertisement
ದೆಹಲಿ ಮೆಟ್ರೋ ಏರ್‌ಪೋರ್ಟ್ ಎಕ್ಸ್ಪ್ರೆಸ್ ಲೈನ್‌ನಲ್ಲಿ ಮೆಟ್ರೋ ರೈಲುಗಳ ಕಾರ್ಯಾಚರಣೆ ವೇಗವನ್ನು ಗಂಟೆಗೆ 90ರಿಂದ 120 ಕಿಲೋ ಮೀಟರ್‌ಗೆ ಹೆಚ್ಚಿಸುವ ಮೂಲಕ ಪ್ರಯಾಣದ ಸಮಯವನ್ನು ಕಡಿಮೆ ಮಾಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವದೆಹಲಿಯಿಂದ ಯಶೋಭೂಮಿ ಪ್ರಯಾಣಕ್ಕೆ ಒಟ್ಟು 21 ನಿಮಿಷಗಳು ಬೇಕಾಗುತ್ತದೆ. ಇದನ್ನೂ ಓದಿ: ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು – INDIAಗೆ ಸೋನಿಯಾ ಕರೆ
Advertisement
ಯಶೋಭೂಮಿ 8.9 ಲಕ್ಷ ಚದರ ಮೀಟರ್‌ಗಿಂತಲೂ ಹೆಚ್ಚು ಯೋಜನಾ ಪ್ರದೇಶ ಮತ್ತು 1.8 ಲಕ್ಷ ಚದರ ಮೀಟರ್‌ಗಿಂತ ಹೆಚ್ಚಿನ ಒಟ್ಟು ನಿರ್ಮಾಣ ಪ್ರದೇಶದೊಂದಿಗೆ ವಿಶ್ವದ ಅತಿದೊಡ್ಡ MICE (Meetings, Incentives, Conferences, and Exhibitions ) ಸೌಲಭ್ಯಗಳಲ್ಲಿ ಒಂದಾಗಲಿದೆ. 73,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಿರ್ಮಿಸಲಾದ ಕನ್ವೆನ್ಷನ್ ಸೆಂಟರ್ ಮುಖ್ಯ ಸಭಾಂಗಣ (Auditorium), ಬಾಲ್ ರೂಮ್ (Ballroom) ಮತ್ತು 11,000 ಪ್ರತಿನಿಧಿಗಳು ಒಟ್ಟಿಗೆ ಸೇರುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ 13 ಸಭೆ ಕೊಠಡಿಗಳನ್ನು (Meeting Rooms) ಒಳಗೊಂಡಂತೆ 15 ಕನ್ವೆನ್ಷನ್ ಕೊಠಡಿಗಳನ್ನು (Convention Room) ಹೊಂದಿದೆ. ಇದನ್ನೂ ಓದಿ: ಟೆರರಿಸ್ಟ್‌ಗಳು ಎಸ್ಕೇಪ್ ಆಗಲು ಪಾಕ್ ಸೇನೆ ನೆರವು – ಮೂವರು ಭಯೋತ್ಪಾದಕರ ಹೊಡೆದುರುಳಿಸಿದ ಭಾರತೀಯ ಸೇನೆ
ಸಭಾಂಗಣ: ಮುಖ್ಯ ಸಭಾಂಗಣವು ಸುಮಾರು 6,000 ಅತಿಥಿಗಳ ಆಸನ ಸಾಮರ್ಥ್ಯವನ್ನು ಹೊಂದಿದೆ. ಇದು ನವೀನ ಸ್ವಯಂಚಾಲಿತ ಆಸನ ವ್ಯವಸ್ಥೆಯನ್ನು ಹೊಂದಿದೆ. ಇದನ್ನೂ ಓದಿ: ಒಂದು ದೇಶ, ಒಂದು ಚುನಾವಣೆ – ಸೆ.23 ರಂದು ಮಾಜಿ ರಾಷ್ಟ್ರಪತಿ ಕೋವಿಂದ್ ನೇತೃತ್ವದಲ್ಲಿ ಮೊದಲ ಸಭೆ
ಬಾಲ್ ರೂಮ್: ಬಾಲ್ ರೂಮ್ ವಿಶಿಷ್ಟವಾದ ದಳದ ಸೀಲಿಂಗ್ ಹೊಂದಿದೆ ಮತ್ತು ಸರಿಸುಮಾರು 2,500 ಅತಿಥಿಗಳಿಗೆ ಆತಿಥ್ಯ ವಹಿಸುತ್ತದೆ. ಅಲ್ಲದೇ ಓಪನ್ ಏರಿಯಾದಲ್ಲೂ ಸುಮಾರು 500 ಜನರು ಕುಳಿತುಕೊಳ್ಳಬಹುದಾಗಿದೆ. 13 ಮೀಟಿಂಗ್ ರೂಮ್‌ಗಳನ್ನು ವಿವಿಧ ಮಾಪಕ ಸಭೆಗಳಿಗೆ ಸರಿಹೊಂದಿಸಲು ವಿನ್ಯಾಸಗೊಳಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ 3ನೇ ದಿನಕ್ಕೆ ಕಾಲಿಟ್ಟ ಸೇನಾ ಕಾರ್ಯಾಚರಣೆ – ಉಗ್ರರ ಹುಟ್ಟಡಗಿಸಲು ವಿಳಂಬವಾಗ್ತಿರುವುದ್ಯಾಕೆ?
ಈ ಸೌಲಭ್ಯಗಳ ಜೊತೆಗೆ, ಯಶೋಭೂಮಿಯು 1.07 ಲಕ್ಷ ಚದರ ಮೀಟರ್‌ಗಳಷ್ಟು ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣವನ್ನೂ (Exhibition Hall) ಹೊಂದಿದೆ. ಈ ಸಭಾಂಗಣಗಳು ಭವ್ಯವಾದ ಫೋಯರ್ (Foyer) ಜಾಗಕ್ಕೆ ಸಂಪರ್ಕ ಹೊಂದಿದ್ದು, ಪ್ರದರ್ಶನಗಳು, ವ್ಯಾಪಾರ ಮೇಳಗಳು ಮತ್ತು ವ್ಯಾಪಾರ ಕಾರ್ಯಕ್ರಮಗಳನ್ನು ಇಲ್ಲಿ ಆಯೋಜಿಸಬಹುದಾಗಿದೆ. ಫೋಯರ್ ಮಾಧ್ಯಮ ಕೊಠಡಿಗಳು ವಿವಿಐಪಿ ಲಾಂಜ್‌ಗಳು, ಕ್ಲೋಕ್ ಸೌಲಭ್ಯಗಳು, ಸಂದರ್ಶಕರ ಮಾಹಿತಿ ಕೇಂದ್ರ ಮತ್ತು ಟಿಕೆಟಿಂಗ್ ಕೌಂಟರ್‌ಗಳಂತಹ ಪ್ರದೇಶಗಳನ್ನು ಹೊಂದಿದೆ. ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಧರ್ಮದ ವಿರುದ್ಧ ದ್ವೇಷ ಭಾಷಣ ಆಗಬಾರದು: ಮದ್ರಾಸ್ ಹೈಕೋರ್ಟ್
ಸಮಾವೇಶ ಕೇಂದ್ರವು ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸುವ ರಂಗೋಲಿ ಮಾದರಿಯ ಹಿತ್ತಾಳೆಯ ಕೆತ್ತನೆಯೊಂದಿಗೆ ಟೆರಾಝೋ ಮಹಡಿಗಳನ್ನು ಹೊಂದಿದೆ. ಅಲ್ಲದೇ ಭಾರತೀಯ ಸಂಸ್ಕೃತಿಯ ಕೆಲವು ವಸ್ತುಗಳನ್ನು ಒಳಗೊಂಡಿದೆ. ಇಷ್ಟು ಮಾತ್ರವಲ್ಲದೇ ಧ್ವನಿ ಹೀರಿಕೊಳ್ಳುವ ಲೋಹದ ಸಿಲಿಂಡರ್‌ಗಳನ್ನು ಮತ್ತು ಲಿಟ್-ಅಪ್ ಮಾದರಿಯ ಗೋಡೆಗಳನ್ನು ಸಹಾ ಹೊಂದಿದೆ. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲು ಮೊಮ್ಮಗಳನ್ನು ಸೇನೆಗೆ ಸೇರಿಸ್ತೀನಿ- ಆಶೀಶ್ ಢೋನ್‍ಚಕ್ ತಾಯಿ
Web Stories