ಮೈಸೂರು: ನಗರದ ಮಹಾರಾಜ ಕಾಲೇಜ್‍ನ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ಮೋದಿ ಅವರು ವೇದಿಕೆಯ ಮೇಲಿದ್ದ ಶಾಸಕ ಎಸ್.ಎ. ರಾಮದಾಸ್‍ರನ್ನು ಬಹಳ ಪ್ರೀತಿಯಿಂದ ಮಾತನಾಡಿಸಿ ಅವರ ಬೆನ್ನಿಗೆ ಗುದ್ದಿ ಪ್ರೀತಿ ತೋರಿಸಿದ್ದರು.
Advertisement
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರಾಮದಾಸ್, ನನ್ನ ತಾಯಿಯನ್ನು ಮೋದಿ ಅವರು ವೇದಿಕೆ ಮೇಲೆ ನೆನಪಿಸಿಕೊಂಡರು. ರಾಮದಾಸ್ ಅವರ ತಾಯಿ ಇದ್ದಾಗ ತಿಂಡಿ ತಂದು ಕೊಡುತ್ತಿದ್ದ. ಈಗ ಅದನ್ನು ಮರೆತಿದ್ದಾನೆ ಎಂದು ಮೋದಿ ಹೇಳಿದರು ಎಂದು ರಾಮದಾಸ್ ಗದ್ಗದಿತರಾದರು. ಇದನ್ನೂ ಓದಿ: ರಾಮ್‍ದಾಸ್ ಹತ್ತಿರ ಕರೆದು ಬಾಗಿಸಿ ಬೆನ್ನಿಗೆ ಗುದ್ದಿದ ಮೋದಿ- ಪ್ರಧಾನಿಯಿಂದ ಶಾಸಕರಿಗೆ ಆಪ್ತ ಹಾರೈಕೆ
Advertisement
Advertisement
ಸಹಜ ಇದು ಕೌಟುಂಬಿವಾದ ಸಂಬಂಧ ಮನೆವರು ಸೇರಿದಾಗ ಎಲ್ಲರನ್ನು ವಿಚಾರಿಸುವುದು ಸಹಜ ಅದೇ ರೀತಿ ಮೋದಿ ಕೇಳಿದ್ದಾರೆ. ಮನೆಯಲ್ಲಿ ಎಲ್ಲಾ ಚೆನ್ನಾಗಿದ್ದಾರ ಎಂಬ ಕೌಟುಂಬಿಕ ಪ್ರೀತಿಯನ್ನು ತೋರಿಸಿದ್ದಾರೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಮೋದಿ ಪ್ರೀತಿಯಿಂದ ನಡೆದುಕೊಂಡರು. ಅವರಿಗೆ ನನಪಿಗೆ ಬಂದಿದ್ದು ನಮ್ಮ ಅಮ್ಮ ಎಂದು ಮೋದಿ ಜೊತೆಗಿನ ಮಾತುಕತೆ ಬಗ್ಗೆ ತಿಳಿಸಿದರು. ಇದನ್ನೂ ಓದಿ: ನಿಮ್ಮ ಸೇವೆ ಮಾಡಲು ನನಗೆ ಆಶೀರ್ವಾದ ಮಾಡಿ: ಮೈಸೂರಿನಲ್ಲಿ ಮೋದಿ