ಅಯೋಧ್ಯೆ: ಇಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಆಗಮಿಸಿರುವ ಪ್ರಧಾನಿ ಮೋದಿಯವರು (Narendra Modi) ಇಂದು ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇಬ್ಬರು ಮಕ್ಕಳನ್ನು ಭೇಟಿಯಾಗಿದ್ದಾರೆ.
Uttar Pradesh | Prime Minister Narendra Modi met two children in Ayodhya and took selfies with them and also gave them autographs. pic.twitter.com/N7PHVTRwr7
— ANI (@ANI) December 30, 2023
Advertisement
ಪ್ರಧಾನಿಯವರು ಇಬ್ಬರು ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ (Selfie) ತೆಗೆದುಕೊಂಡರು. ಬಳಿಕ ಅವರಿಗೆ ಆಟೋಗ್ರಾಫ್ ಕೂಡ ನೀಡಿದರು. ಅಲ್ಲದೆ ಇದೇ ವೇಳೆ ಬಾಲಕನೊಬ್ಬ ತಾನು ಬಿಡಿಸಿದ ರಾಮಮಂದಿರದ ಚಿತ್ರವನ್ನು ಪ್ರಧಾನಿಯವರಿಗೆ ತೋರಿಸಿದ್ದು, ಮೋದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
Advertisement
ಮೋದಿ ಜೊತೆ ಸೆಲ್ಫಿ ತೆಗೆದುಕೊಂಡು ಬಳಿಕ ಮಕ್ಕಳು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: Modi In Ayodhya: ಪ್ರಧಾನಿ ಮೋದಿಯಿಂದ ʻಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣʼ ಲೋಕಾರ್ಪಣೆ
Advertisement
#WATCH | Ayodhya, Uttar Pradesh: Two children who met Prime Minister Narendra Modi and took selfies with him, express their happiness.
PM Modi also gave them autographs. https://t.co/RCMlsNOxpp pic.twitter.com/mGryxiRhLP
— ANI (@ANI) December 30, 2023
ಇಂದು ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿರುವ ಪ್ರಧಾನಿ ಮೋದಿಯವರು ಮೊದಲು ರೋಡ್ ಶೋ ನಡೆಸಿದರು. ಬಳಿಕ ರೈಲ್ವೆ ನಿಲ್ದಾಣ ಉದ್ಘಾಟನೆ ಮಾಡಿದರು. ಈ ವೇಳೆ ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿದರು. ಅದಾದ ಬಳಿಕ ವಿಮಾನ ನಿಲ್ದಾಣ ಉದ್ಘಾಟಿಸಿದರು.