Bengaluru CityKarnatakaLatestMain Post

ರಾಜಪಥ ಇನ್ನು ಕರ್ತವ್ಯ ಪಥ – ನವ ಭಾರತದಲ್ಲಿ ಗುಲಾಮಿತನದ ಸಂಕೇತಗಳಿಗೆ ಸ್ಥಾನವಿಲ್ಲ: ಬಿಜೆಪಿ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ಐಕಾನಿಕ್ ರಸ್ತೆ ರಾಜಪಥ್, (Rajpath) ಸದ್ಯ ಕರ್ತವ್ಯ ಪಥವಾಗಿ (Kartavya Path) ಬದಲಾಗಿರುವ ಹೊಸ ರಸ್ತೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ. ಈ ಸಿದ್ಧತೆಯ ನಡುವೆ ಇನ್ನುಮುಂದೆ ನವ ಭಾರತದಲ್ಲಿ ಗುಲಾಮಿತನದ ಸಂಕೇತಗಳಿಗೆ ಸ್ಥಾನವಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ರಾಜಪಥ ಇನ್ನು ಕರ್ತವ್ಯ ಪಥ. ನವ ಭಾರತದಲ್ಲಿ ಗುಲಾಮಿತನದ ಸಂಕೇತಗಳಿಗೆ ಸ್ಥಾನವಿಲ್ಲವೆಂದು ಫೋಟೋ ಹಂಚಿಕೊಂಡು ಬಿಜೆಪಿ (BJP) ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದೆ. ಇದನ್ನೂ ಓದಿ: ರಾಜಪಥ್‍ನಿಂದ ಕರ್ತವ್ಯ ಪಥವಾಗಿ ಬದಲಾದ ದೆಹಲಿ ಐಕಾನಿಕ್ ರಸ್ತೆ ಹೇಗೆ ಅಭಿವೃದ್ಧಿಯಾಗಿದೆ ಗೊತ್ತಾ?

ಇಂದು ಸಂಜೆ ಏಳು ಗಂಟೆಗೆ ರಾಜಪಥ್, ಕರ್ತವ್ಯ ಪಥವಾಗಿ ಬದಲಾಗಿರುವ ಹೊಸ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಅವರು ಅನಾವರಣಗೊಳಿಸಲಿದ್ದಾರೆ. ಸ್ವತಂತ್ರ ಪೂರ್ವಕ್ಕೂ ಮುನ್ನ ಕಿಂಗ್ಸ್‌ವೇ ಆಗಿದ್ದ ಈ ರಸ್ತೆಯನ್ನು ಸ್ವಾತಂತ್ರ್ಯದ ಬಳಿಕ ರಾಜಪಥ್ ಎಂದು ನಾಮಕರಣ ಮಾಡಲಾಗಿತ್ತು. ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಗೊಳಿಸಿ ಅದಕ್ಕೆ ಕರ್ತವ್ಯ ಪಥ್ ಎಂದು ನರೇಂದ್ರ ಮೋದಿ ಸರ್ಕಾರ ಮರು ನಾಮಕರಣ ಮಾಡಿದೆ. ಇದನ್ನೂ ಓದಿ: ಕಿಂಗ್ಸ್‌ವೇಯಿಂದ ರಾಜ್‌ಪಥ್‌; ರಾಜ್‌ಪಥ್‌‌ನಿಂದ ಕರ್ತವ್ಯ ಪಥ್ – ಇಲ್ಲಿದೆ ದೆಹಲಿಯ ಐಕಾನಿಕ್ ರಸ್ತೆಯ ಇತಿಹಾಸ

ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆ ದಿನದಂದು ನರೇಂದ್ರ ಮೋದಿ ಹೇಳಿದಂತೆ ಅಮೃತೋತ್ಸವ ಕಾಲ ಘಟ್ಟದಲ್ಲಿ ಎರಡನೇ ಪಂಚಪ್ರಾಣದ ಭಾಗವಾಗಿ ವಸಾಹತು ಶಾಹಿ ಮನಸ್ಥಿತಿಯ ಕುರುಹುಗಳನ್ನು ತೆಗೆದು ಹಾಕುವುದು ಇದರ ಉದ್ದೇಶವೂ ಆಗಿದೆ. ಸೆಂಟ್ರಲ್ ವಿಸ್ಟಾ ಯೋಜನೆಯ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ. ಹಲವು ಸಮಸ್ಯೆಗಳಿದ್ದ ರಾಜಪಥ್ ರಸ್ತೆಯನ್ನು ಆಧುನಿಕರಿಸಿ ಅಭಿವೃದ್ಧಿ ಪಡಿಸಲಾಗಿದೆ.

Live Tv

Leave a Reply

Your email address will not be published.

Back to top button