ಹೈದರಾಬಾದ್: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಯ ಹತ್ತಿರವಾಗುತ್ತಿದಂತೆ ಟಾಲಿವುಡ್‍ನಲ್ಲಿ ಹಲವು ನಾಯಕರ ಆತ್ಮಚರಿತ್ರೆಗಳ ಸಿನಿಮಾಗಳು ತೆರೆಕಾಣುತ್ತಿದೆ. ಇದರಲ್ಲಿ ಭಾರೀ ವಿವಾದ ಸೃಷ್ಟಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ಕೂಡ ಒಂದಾಗಿದೆ.
ಇದೇ ವೇಳೆಯಲ್ಲಿ ನಿರ್ದೇಶಕ ಆರ್ ಜಿವಿ ತಮ್ಮ ಸಿನಿಮಾಗೆ ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನ ಟ್ವೀಟ್ ಮಾಡಿ ಬರೆದುಕೊಂಡಿದ್ದಾರೆ.
Advertisement
Advertisement
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಆಂಧ್ರಪ್ರದೇಶದಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ್ರು. ಇದೇ ವಿಡಿಯೋವನ್ನು ಆರ್ ಜಿವಿ ಟ್ವೀಟ್ ಮಾಡಿದ್ದು, ಇದರಲ್ಲಿ ಪ್ರಧಾನಿ ಮೋದಿ ಅವರು ಸಿಎಂ ಚಂದ್ರಬಾಬು ನಾಯ್ಡುರನ್ನು ಮೋಸಗಾರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
ಅಂದಹಾಗೇ ಆರ್ ಜಿವಿ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾದಲ್ಲಿ ಚಂದ್ರಬಾಬು ನಾಯ್ಡು ಅವರ ಮತ್ತೊಂದು ಮುಖ ಆವರಣಗೊಳ್ಳಲಿದೆ. ಅವರು ತಮ್ಮ ಮಾವನಾದ ಮಾಜಿ ಸಿಎಂ ರಾಮರಾವ್ ಅವರಿಗೆ ಮಾಡಿದ ಮೋಸದ ಕುರಿತು ಅಂಶಗಳನ್ನು ರಿವೀಲ್ ಮಾಡಲಾಗುತ್ತದೆ ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಇದರಂತೆ ಮೋದಿ ಅವರ ಭಾಷಣದ ತುಣುಕನ್ನು ಕೂಡ ನಿರ್ದೇಶಕರು ಸಮಯ ಪ್ರಜ್ಞೆ ತೋರಿ ಸಿನಿಮಾ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ.
Advertisement
ಆರ್ ಜಿವಿ ಅವರ ಲಕ್ಷ್ಮಿಸ್ ಎನ್‍ಟಿಆರ್ ಸಿನಿಮಾ ರಾಮರಾಮ್ ಅವರು ಲಕ್ಷ್ಮಿಸ್ ರನ್ನು 2ನೇ ವಿವಾಹ ಆದ ಬಳಿಕ ನಡೆದ ಘಟನೆಗಳ ಬಗ್ಗೆ ಸಿನಿಮಾ ಮಾಡಲಾಗಿದ ಎಂದು ನಿರ್ದೇಶಕ ಹೇಳಿದ್ದು, ಈಗಾಗಲೇ ಸಿನಿಮಾ ವಿರುದ್ಧ ಆಂದ್ರ ಪ್ರದೇಶದ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
From fighting the Dushta Congress under the formidable NTR Garu to becoming a Dost of Congress, the TDP has come a long way.
Andhra Pradesh has seen the TDP’s true colours. pic.twitter.com/6tRpJ92vMp
— Narendra Modi (@narendramodi) February 10, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv