ಲಕ್ನೋ: ದೇಶದಲ್ಲಿ ಉಚಿತ ರೇವಡಿ(ಒಂದು ಬಗೆಯ ಸಿಹಿ ತಿಂಡಿ) ಹಂಚಿ, ಮತ ಗಳಿಸುವ ಸಂಸ್ಕೃತಿಯನ್ನು ತರಲು ಪ್ರಯತ್ನಿಸಲಾಗುತ್ತಿದೆ. ಉಚಿತ ಕೊಡುಗೆಗಳನ್ನು ನೀಡುವ ರೇವಡಿ ಸಂಸ್ಕೃತಿ ದೇಶದ ಅಭಿವೃದ್ಧಿಗೆ ಅತ್ಯಂತ ಅಪಾಯಕಾರಿ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯ ಮಾಡುವ ಮೂಲಕ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ಶನಿವಾರ 296 ಕಿ.ಮೀ ಉದ್ದದ ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡು ನೀತಿಗಳನ್ನು ತಂದರೆ, ಅದರ ಹಿಂದೆ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಉತ್ತೇಜನ ನೀಡುವ ಗುರಿಯೇ ಇರುತ್ತದೆ ಎಂದು ಹೇಳಿದರು.
Advertisement
Advertisement
ರೇವಡಿ ಸಂಸ್ಕೃತಿಯನ್ನು ಹೊಂದಿರುವವರು ಜನತೆಗಾಗಿ ಹೊಸ ಎಕ್ಸ್‌ಪ್ರೆಸ್‌ವೇ, ಹೊಸ ವಿಮಾನ ನಿಲ್ದಾಣ, ರಕ್ಷಣಾ ಕಾರಿಡಾರ್‌ಗಳಂತಹ ಅತ್ಯಗತ್ಯ ಅನುಕೂಲಗಳನ್ನು ಎಂದಿಗೂ ನಿರ್ಮಿಸುವುದಿಲ್ಲ. ನಾವೆಲ್ಲರೂ ಒಟ್ಟಾಗಿ ಈ ಸಂಸ್ಕೃತಿಯನ್ನು ಸೋಲಿಸಬೇಕು. ರೇವಡಿ ಸಂಸ್ಕೃತಿಯನ್ನು ತೊಡೆದುಹಾಕಬೇಕು ಎಂದು ಮೋದಿ ಹೇಳಿದರು. ಇದನ್ನೂ ಓದಿ: ಔರಂಗಾಬಾದ್, ಒಸ್ಮಾನಾಬಾದ್‌ಗೆ ಮರುನಾಮಕರಣ – ಮಹಾರಾಷ್ಟ್ರ ಸಂಪುಟ ಅನುಮೋದನೆ
Advertisement
हमारे देश में मुफ्त की रेवड़ी बांटकर वोट बटोरने का कल्चर लाने की कोशिश हो रही है।
ये रेवड़ी कल्चर देश के विकास के लिए बहुत घातक है।
इस रेवड़ी कल्चर से देश के लोगों को बहुत सावधान रहना है: PM @narendramodi
— PMO India (@PMOIndia) July 16, 2022
Advertisement
ಮೋದಿ ಹೇಳಿಕೆಗೆ ಟೀಕೆ:
ಪ್ರಧಾನಿ ನರೇಂದ್ರ ಮೋದಿಯವರ ರೇವಡಿ ಸಂಸ್ಕೃತಿ ಹೇಳಿಕೆ ಬಗ್ಗೆ ಟೀಕಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ರೇವಡಿ ಪದ ಅಸಂಸದೀಯ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.
रेवड़ी बाँटकर थैंक्यू का अभियान चलवाने वाले सत्ताधारी अगर युवाओं को रोज़गार दें तो वो ‘दोषारोपण संस्कृति’ से बच सकते हैं।
रेवड़ी शब्द असंसदीय तो नहीं?
— Akhilesh Yadav (@yadavakhilesh) July 16, 2022
ಆಡಳಿತ ಪಕ್ಷದಲ್ಲಿರುವವರು ಯುವಕರಿಗೆ ಉದ್ಯೋಗ ನೀಡುವ ಮೂಲಕ ರೇವಡಿ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ ಹಾಗೂ ಧನ್ಯವಾದ ಅಭಿಯಾನವನ್ನು ನಡೆಸಿದ್ದಾರೆ. ಆದರೆ ಅದೇ ರೇವಡಿ ಸಂಸ್ಕೃತಿಯನ್ನು ದೂಷಿಸುವ ಮೂಲಕ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಅಖಿಲೇಶ್ ಯಾದವ್ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೋದಿಯವರ ರೇವಡಿ ಸಂಸ್ಕೃತಿ ಹೇಳಿಕೆಗೆ ಸಿಡಿದೆದ್ದು, ನಾವು ಉಚಿತ, ಗುಣಮಟ್ಟದ ಶಿಕ್ಷಣ ಹಾಗೂ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದೇವೆ. ರೇವಡಿ ಹಂಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ದ್ರೌಪದಿ ಮುರ್ಮು ಗೌರವಿಸುತ್ತೇವೆ, ಸಿನ್ಹಾರನ್ನು ಬೆಂಬಲಿಸುತ್ತೇವೆ: ಎಎಪಿ
अपने देश के बच्चों को मुफ़्त और अच्छी शिक्षा देना और लोगों का अच्छा और मुफ़्त इलाज करवाना – इसे मुफ़्त की रेवड़ी बाँटना नहीं कहते। हम एक विकसित और गौरवशाली भारत की नींव रख रहे हैं। ये काम 75 साल पहले हो जाना चाहिए था। https://t.co/sHfiBvltU0
— Arvind Kejriwal (@ArvindKejriwal) July 16, 2022
ನನ್ನ ವಿರುದ್ಧ ಪರೋಕ್ಷವಾಗಿ ಆರೋಪಗಳನ್ನು ಮಾಡಲಾಗುತ್ತಿದೆ. ಆದರೆ ಇದರಲ್ಲಿ ನನ್ನ ತಪ್ಪೇನು ಎಂದು ಕೇಳಲು ಬಯಸುತ್ತೇನೆ. ದೆಹಲಿ ಸರ್ಕಾರಿ ಶಾಲೆಗಳಲ್ಲಿ 18 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ನಾವು ಅವರಿಗೆ ಉಚಿತವಾಗಿ, ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಇದರಲ್ಲಿ ಅಪರಾಧವೇನಿದೆ ಎಂದು ಪ್ರಶ್ನಿಸಿದ್ದಾರೆ.