ರಾಯ್ಪುರ: ಛತ್ತೀಸ್‌ಗಢದ (Chattisgarh) ಬಿಲಾಸ್‌ಪುರದಲ್ಲಿ (Bilaspur) ಇಂದು (ಶನಿವಾರ) ನಡೆಯಲಿರುವ ಭಾರತೀಯ ಜನತಾ ಪಕ್ಷದ (BJP) 2 ಪರಿವರ್ತನಾ ಯಾತ್ರೆಗಳ (Parivartana Yatra) ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಲಿದ್ದಾರೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ (Congress) ಆಡಳಿತದ ಈ ರಾಜ್ಯಕ್ಕೆ ಪ್ರಧಾನಿ ಮೋದಿಯವರ ಮೂರನೇ ಭೇಟಿ ಇದಾಗಿದೆ. ಇಲ್ಲಿನ ವಿಜ್ಞಾನ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ 2 ಪರಿವರ್ತನಾ ಯಾತ್ರೆಗಳ ಸಮಾರೋಪ ಸಮಾರಂಭ ‘ಪರಿವರ್ತನ್ ಮಹಾಸಂಕಲ್ಪ’ ರ‍್ಯಾಲಿಯನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಅರುಣ್ ಸಾವೋ (Arun Sao) ತಿಳಿಸಿದ್ದಾರೆ. ಇದನ್ನೂ ಓದಿ: ಅ.15 ರವರೆಗೆ ತಮಿಳುನಾಡಿಗೆ 3,000 ಕ್ಯೂಸೆಕ್ ನೀರು ಹರಿಸಿ – ಕರ್ನಾಟಕಕ್ಕೆ ಕಾವೇರಿ ಪ್ರಾಧಿಕಾರ ಸೂಚನೆ
Advertisement
Advertisement
ಮೊದಲ ಪರಿವರ್ತನಾ ಯಾತ್ರೆಯು ಸೆಪ್ಟೆಂಬರ್ 12ರಂದು ದಂತೇವಾಡದಿಂದ ಕೈಗೊಂಡಿದ್ದು, ಎರಡನೇ ಯಾತ್ರೆ ಸೆಪ್ಟೆಂಬರ್ 15ರಂದು ಜಶ್‌ಪುರದಿಂದ ಪ್ರಾರಂಭವಾಯಿತು. ಎರಡೂ ಯಾತ್ರೆಗಳು 83 ಸ್ವಾಗತ ಸಭೆಗಳು, 4 ರೋಡ್ ಶೋಗಳು ಮತ್ತು ವಿವಿಧ ಸಾರ್ವಜನಿಕ ಸಭೆಗಳನ್ನು ಸಮಾಪ್ತಿಗೊಳಿಸಿದ್ದು, 87 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 3,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದೆ ಎಂದು ವರದಿಗಳು ತಿಳಿಸಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ
Advertisement
ಎರಡೂ ಯಾತ್ರೆಗಳಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕಿತ್ತೊಗೆಯುವ ವಿಶ್ವಾಸವನ್ನು ಅರುಣ್ ಸಾವೋ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಏಷ್ಯಾದ ಅತಿದೊಡ್ಡ ಮಾರುಕಟ್ಟೆ ಧಗ ಧಗ – ಬೆಂಕಿ ನಂದಿಸಲು ಹರಸಾಹಸ
Advertisement
ಪೊಲೀಸರ ಪ್ರಕಾರ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಪೊಲೀಸ್ ಪಡೆ, ವಿಶೇಷ ರಕ್ಷಣಾ ಪಡೆ, ಸಶಸ್ತ್ರ ಪಡೆ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಮತ್ತು ಗೃಹರಕ್ಷಕ ದಳಕ್ಕೆ ಸೇರಿದ ಒಟ್ಟು 1,500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಧಾನ ಮಂತ್ರಿಯವರ ಭೇಟಿಯ ದೃಷ್ಟಿಯಿಂದ ನಗರದ 3 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ‘ನೋ ಫ್ಲೈಯಿಂಗ್ ಝೋನ್’ ಎಂದು ಘೋಷಿಸಿದ್ದು, ಆ್ಯಂಟಿ ಡ್ರೋನ್ ಗನ್‌ಗಳನ್ನು ಸಹಾ ನಿಯೋಜಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ ಅಲ್ಲ, ವಿಶ್ವ ಟೆರರ್ ಕಪ್ ಮಾಡ್ತೀವಿ – ಖಲಿಸ್ತಾನ್ ಉಗ್ರನಿಂದ ಬೆದರಿಕೆ
Web Stories