– ಮಣಿಶಂಕರ್ ಅಯ್ಯರ್ ಹೇಳಿಕೆ ಉಲ್ಲೇಖಿಸಿ ಕಿಡಿ
ನವದೆಹಲಿ: ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಎನ್ನುವ ಮೂಲಕ ಕಾಂಗ್ರೆಸ್ (Congress) ದೇಶವನ್ನು ಹೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಒಡಿಶಾದ ಕಂಧಮಾಲ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ (Narendra Modi), ಕಾಂಗ್ರೆಸ್ ಪದೇ ಪದೇ ತನ್ನದೇ ದೇಶವನ್ನು ಹೆದರಿಸಲು ಪ್ರಯತ್ನಿಸುತ್ತಿದೆ. ಅವರು ಬಳಿ ಅಣು ಬಾಂಬ್ ಇದೆ ಎಚ್ಚರಿಕೆಯಿಂದಿರಿ ಎಂದು ಭಯಭೀತಗೊಳಿಸುತ್ತಿದೆ. ಆ ದೇಶ ನಮ್ಮ ದೇಶದ ಮೇಲೆ ದಾಳಿ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.
Advertisement
Advertisement
ಅವರು ಪಾಕಿಸ್ತಾನದ (Pakistan) ಬಾಂಬ್ ಬಗ್ಗೆ ಮಾತನಾಡುತ್ತಾರೆ. ಆದರೆ ಪಾಕಿಸ್ತಾನದ ಸ್ಥಿತಿಯು ಅವರಿಗೆ ತಿಳಿದಿಲ್ಲ. ಅವರು ತಮ್ಮ ಬಾಂಬ್‌ಗಳನ್ನು ಮಾರಾಟ ಮಾಡಲು ಖರೀದಿದಾರರನ್ನು ಹುಡುಕುತ್ತಿದ್ದಾರೆ. ಆದರೆ ಜನರಿಗೆ ಅವರ ಗುಣಮಟ್ಟದ ಬಗ್ಗೆ ತಿಳಿದಿರುವುದರಿಂದ ಯಾರೂ ಖರೀದಿಸಲು ಬಯಸುತ್ತಿಲ್ಲ ಎಂದ ಅವರು ಪಾಕ್ ಆರ್ಥಿಕತೆಯನ್ನು ವ್ಯಂಗ್ಯ ಮಾಡಿದರು. ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದರೂ ಮೋದಿ ಪ್ರಧಾನಿಯಾಗಲ್ಲ: ಅರವಿಂದ್ ಕೇಜ್ರಿವಾಲ್ ಭವಿಷ್ಯ
Advertisement
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಮಣಿಶಂಕರ್ ಅಯ್ಯರ್ (Manishankar Ayyar), ಪಾಕಿಸ್ತಾನ ಒಂದು ನೆರೆಯ ದೇಶ ಅವರಿಗೂ ಗೌರವಿಸಬೇಕಾಗುತ್ತದೆ. ಅವರ ಜೊತೆಗೆ ಎಷ್ಟು ಕಠಿಣವಾಗಿ ಮಾತನಾಡಬಹುದು ಮಾತನಾಡಿ, ಕನಿಷ್ಠ ಮಾತನಾಡಿ, ಬಂದೂಕು ತಗೊಂಡು ಓಡಾಡುತ್ತಿದ್ದೀರಿ ಅದರಿಂದ ಏನಾಗುತ್ತದೆ. ಇದರಿಂದ ದ್ವೇಷ ಹೆಚ್ಚಾಗುತ್ತದೆ. ಅಲ್ಲಿ ಯಾರಾದ್ರೂ ಹುಚ್ಚ ಬಂದರೆ ದೇಶದ ಕಥೆ ಏನು?.
Advertisement
#WATCH | While addressing a public meeting in Odisha's Bargarh, PM Narendra Modi says, "'Shehzada' who is dancing nowadays keeping the constitution on his forehead… When the Manmohan Singh's cabinet took a decision, the 'Shehzada' called a press conference and tore apart that… pic.twitter.com/U5mROS8FFN
— ANI (@ANI) May 11, 2024
ಅವರ ಬಳಿಯೂ ಅನುಬಾಂಬ್ ಇದೆ ನಮ್ಮ ಬಳಿಯೂ ಇದೆ. ಯಾರಾದ್ರೂ ಹುಚ್ಚ ಅಣುಬಾಂಬ್ ನ ಲಾಹೋರ್ (Lahore) ಮೇಲೆ ಹಾಕಿದರೆ ಅದರ ವಿಕಿರಣ ಎಂಟು ಸೆಕೆಂಡ್ ನಲ್ಲಿ ಅಮೃತಸರ ತಲುಪಲಿದೆ. ಬಾಂಬ್ ಬಳಸುವುದನ್ನು ನಿಲ್ಲಿಸಿ ಅವರನ್ನು ಗೌರವಿಸಿದರೆ ಅವರು ತಮ್ಮ ಬಾಂಬ್ ಬಳಸುವ ಬಗ್ಗೆ ಯೋಚಿಸುವುದು ನಿಲ್ಲಿಸುತ್ತಾರೆ. ಅವರನ್ನು ಪ್ರೆರೇಪಿಸುತ್ತಿದ್ದರೆ ಅಲ್ಲೊಬ್ಬ ಹುಚ್ಚ ಬಂದು ಬಾಂಬ್ ತೆಗೆದರೆ ಅದರ ಪರಿಣಾಮ ಏನು? ವಿಶ್ವಗುರುವಾಗಲು ಸಮಸ್ಯೆ ಎಷ್ಟೆ ದೊಡ್ಡದಾಗಿದ್ದರೂ ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತೋರಿಸಬೇಕು. ಆದರೆ ಕಳೆದ ಹತ್ತು ವರ್ಷದಲ್ಲಿ ಯಾವುದೇ ಮಾತುಕತೆ ನಡೆದಿಲ್ಲ ಎಂದು ಆರೋಪಿಸಿದ್ದರು.